ಕರ್ನಾಟಕ

karnataka

ETV Bharat / sitara

ಯಜಮಾನನ ಮನೆ ಸೇರಿದ ಮತ್ತೊಂದು ಲ್ಯಾಂಬೋರ್ಗಿನಿ... ಇದರ ಬೆಲೆ ಎಷ್ಟು ಗೊತ್ತಾ? - undefined

ಕಳೆದ ವರ್ಷ ಲ್ಯಾಂಬೋರ್ಗಿನಿ ಕಾರನ್ನು ಖರೀಸಿದ್ದ ನಟ ದರ್ಶನ್ ಮೊನ್ನೆಯಷ್ಟೇ ಮತ್ತೊಂದು ಲ್ಯಾಂಬೋರ್ಗಿನಿ ಖರೀದಿಸಿದ್ದಾರೆ. ಮೈಸೂರಿನಿಂದ ಬೆಂಗಳೂರುವರೆಗೂ ಲಾಂಗ್ ಡ್ರೈವ್ ಕೂಡಾ ಹೋಗಿಬಂದಿದ್ದಾರೆ.

ದರ್ಶನ್ ಕಾರು

By

Published : Apr 29, 2019, 12:49 PM IST

ಸೆಲಬ್ರಿಟಿಗಳು ಕಾರು ಹಾಗೂ ದುಬಾರಿ ಬೆಲೆಯ ಬೈಕ್ ಖರೀದಿಸುವುದು ಹೊಸ ವಿಷಯವೇನಲ್ಲ. ಆದರೆ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಎಲ್ಲಾ ಸೆಲಬ್ರಿಟಿಗಳು ಹೊಂದಿರುವುದಿಲ್ಲ. ಸ್ಯಾಂಡಲ್​​ವುಡ್​​​​ನ ಕೆಲವೇ ಕೆಲವು ನಟರ ಬಳಿ ಇಂತಹ ಕಾರು ಇದೆ.

ಮೈಸೂರು-ಬೆಂಗಳೂರು ರಸ್ತೆಯಲ್ಲಿ ದರ್ಶನ್ ಲಾಂಗ್ ಡ್ರೈವ್​​

ಕಳೆದ ವರ್ಷ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ್ದಾರೆ. ಈಗಾಗಲೇ ಅವರ ಬಳಿ ಜಾಗ್ವರ್, ಲ್ಯಾಂಬೋರ್ಗಿನಿ, ರೇಂಜ್ ರೋವರ್, ಆಡಿ, ಕೋಟಿ ಬೆಲೆ ಬಾಳುವ ಸ್ಪೋರ್ಟ್ಸ್ ಕಾರು ಇವೆ. ಹೀಗೆ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ಹೊಂದಿರುವ ಯಜಮಾನನ ಮನೆಗೆ ಮತ್ತೊಂದು ಕೋಟಿ ಬೆಲೆ ಬಾಳುವ ಕಾರು ಬಂದಿದೆ.‌ ಕಳೆದ ವರ್ಷ 5 ಕೋಟಿ ರೂಪಾಯಿ ಬೆಲೆಯ ಬಿಳಿ ಬಣ್ಣದ ಲ್ಯಾಂಬೋರ್ಗಿನಿ ಕಾರನ್ನು ದರ್ಶನ್​​ ಖರೀದಿಸಿದ್ದರು. ಇದೀಗ ಲೇಟೆಸ್ಟ್ ವರ್ಷನ್ ಹಾಗೂ ಸ್ಪೋರ್ಟ್ಸ್ ಬೆಸ್ಟ್ ಲ್ಯಾಂಬೋರ್ಗಿನಿ ವುರ್ಸ್ ಎಂಬ ಹಳದಿ ಬಣ್ಣದ ಕಾರನ್ನು ದರ್ಶನ್ ಖರೀದಿದ್ದಾರೆ.

ದರ್ಶನ್​ ಖರೀದಿಸಿದ ಲ್ಯಾಂಬೋರ್ಗಿನಿ

ಎರಡು ದಿನಗಳ ಹಿಂದೆ ದರ್ಶನ್ ಈ ಕಾರು ದಾಸನ ಮನೆಗೆ ಬಂದಿದೆ. ನಾಲ್ಕು ಜನರು ಕುಳಿತುಕೊಳ್ಳುವ ಈ ಕಾರು ರಿಮೋಟ್ ಕಂಟ್ರೋಲ್ ನಿಂದ ಕೂಡಿದೆ. 12 ನಿಮಿಷಕ್ಕೆ ಬರೋಬ್ಬರಿ 100 ಕಿ.ಮೀ ವೇಗ ತಲುಪಬಹುದಾದ ಐಶಾರಾಮಿ ಕಾರು ಇದಾಗಿದೆ. ಈ ಕಾರಿನ ಬೆಲೆ 3.5 ಕೋಟಿ ರೂಪಾಯಿ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ಈ ಕೋಟಿ ಬೆಲೆ ಬಾಳುವ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರು ಲಾಂಗ್ ಡ್ರೈವ್ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details