ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಫ್ಯಾಮಿಲಿಯ ಮಕ್ಕಳು, ಚಿತ್ರರಂಗಕ್ಕೆ ಬರುತ್ತಾರೆ. ಸದ್ಯ ದರ್ಶನ್ ತೂಗುದೀಪ ಅವರ ಸೋದರಳಿಯ ಮನೋಜ್ 'ಟಕ್ಕರ್' ಸಿನಿಮಾ ಮೂಲಕ ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರವನ್ನು ರಘುಶಾಸ್ತ್ರಿ ನಿರ್ದೇಶಿಸಿದ್ದಾರೆ.
ಸೋದರಳಿಯನ 'ಟಕ್ಕರ್' ಸಿನಿಮಾ ಟ್ರೇಲರ್ ನೋಡಿ ಶಭಾಷ್ ಎಂದ ದುರ್ಯೋಧನ - ಟಕ್ಕರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋದರಸಂಬಂಧಿ ಮನೋಜ್ ಅಭಿನಯದ 'ಟಕ್ಕರ್' ಸಿನಿಮಾ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆಯಾಗಿದೆ. ಸ್ವತ: ದರ್ಶನ್ ಆಡಿಯೋ, ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಶನಿವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಟಕ್ಕರ್' ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಗೊಳಿಸಿದರು. ಸೋದರಳಿಯನನ್ನು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿರುವ ದಚ್ಚು ಟ್ರೇಲರ್ ನೋಡಿ ಶಭಾಷ್ ಎಂದಿದ್ದಾರೆ. ಅಲ್ಲದೆ, ಸಿನಿಮಾಗಳ ಬಗ್ಗೆ ಪ್ಯಾಷನ್ ಹೊಂದಿರುವ ನಿರ್ಮಾಪಕರು ಉಳಿಯಬೇಕು ಎಂದರು. ರಘುಶಾಸ್ತ್ರಿ ಇದಕ್ಕೂ ಮುನ್ನ 'ರನ್ ಆ್ಯಂಟೋನಿ' ಚಿತ್ರವನ್ನು ನಿರ್ದೇಶಿಸಿದ್ದರು. ಇದೊಂದು ಕ್ರೈಮ್, ಥ್ರಿಲ್ಲರ್ ಸಿನಿಮಾ. ಸೋದರಮಾವನ ಸಿನಿಮಾ ನೋಡಿಕೊಂಡು ಬೆಳೆದಿರುವ ಮನೋಜ್ ಪಕ್ಕಾ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ದರ್ಶನ್ ನಟಿಸಿಲ್ಲವಾದರೂ ದಾಸನ ಛಾಯೆ ಈ ಸಿನಿಮಾದಲ್ಲಿ ಇರಲಿದೆ ಎನ್ನುವುದು ಚಿತ್ರದ ಹೈಲೆಟ್ಸ್. ಪುಟ್ಟ ಗೌರಿ ಖ್ಯಾತಿಯ ರಜನಿ, ಮನೋಜ್ಗೆ ಜೋಡಿಯಾಗಿದ್ದು, ಈ ಚಿತ್ರದಲ್ಲಿ ಅವರು ಮೆಡಿಕಲ್ ಸ್ಟೂಡೆಂಟ್ ಪಾತ್ರದಲ್ಲಿ ನಟಿಸಿದ್ದಾರೆ. 'ಭಜರಂಗಿ' ಸಿನಿಮಾ ಖ್ಯಾತಿಯ ಲೋಕಿ ಹಾಲಿವುಡ್ ಶೈಲಿಯ ಖಳನಾಯಕನಾಗಿ ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡುತ್ತಿರುವ ಟಕ್ಕರ್ ಸಿನಿಮಾಗೆ ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್ ಇದೆ. 'ಹುಲಿರಾಯ' ಸಿನಿಮಾಗೆ ಬಂಡವಾಳ ಹೂಡಿದ್ದ ನಾಗೇಶ್ ಕೋಗಿಲು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಟಕ್ಕರ್ ಸಿನಿಮಾ, ಸದ್ಯದಲ್ಲೇ ಸೆನ್ಸಾರ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.