ಕರ್ನಾಟಕ

karnataka

ETV Bharat / sitara

'ಪರಿಮಳ ಲಾಡ್ಜ್' ಟೀಸರ್ ಮೆಚ್ಚಿದ ಚಾಲೆಂಜಿಂಗ್ ಸ್ಟಾರ್​​​...ಚಿತ್ರತಂಡಕ್ಕೆ ವಿಶ್ ಮಾಡಿದ ದರ್ಶನ್​ - ಬ್ಯೂಟಿಫುಲ್ ಮನಸ್ಸುಗಳು

ನೀರ್​ದೋಸೆ, ಸಿದ್ಲಿಂಗು ಸಿನಿಮಾಗಳ ನಿರ್ದೇಶಕ ವಿಜಯ್ ಪ್ರಸಾದ್ ಇದೀಗ 'ಪರಿಮಳ ಲಾಡ್ಜ್​' ಸಿನಿಮಾ ಮೂಲಕ ಮತ್ತೆ ವಾಪಸಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್​​​​​​​​​​​​​​​​​​​​ ನಿನ್ನೆ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಅಲ್ಲದೆ ಚಿತ್ರದ ಟೀಸರನ್ನು ದರ್ಶನ್​​​​​​​​​​​ ಮೆಚ್ಚಿಕೊಂಡಿದ್ದಾರೆ.

'ಪರಿಮಳ ಲಾಡ್ಜ್'

By

Published : Aug 29, 2019, 5:32 PM IST

ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಯೋಗೇಶ್ ಅಭಿನಯಿಸಿರುವ 'ಪರಿಮಳ ಲಾಡ್ಜ್​​' ಟೀಸರನ್ನು ದರ್ಶನ್ ಬಿಡುಗಡೆ ಮಾಡಿದ್ದು ಈ ಟೀಸರನ್ನು ದರ್ಶನ್ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಚಿತ್ರತಂಡಕ್ಕೆ ಚಾಲೆಂಜಿಂಗ್ ಸ್ಟಾರ್ ಶುಭ ಕೋರಿದ್ದಾರೆ.

'ಪರಿಮಳ ಲಾಡ್ಜ್​' ಟೀಸರ್ ಬಿಡುಗಡೆ ಮಾಡಿದ ದರ್ಶನ್
'ಪರಿಮಳ ಲಾಡ್ಜ್' ಚಿತ್ರತಂಡದೊಂದಿಗೆ ದರ್ಶನ್

ನಿರ್ದೇಶಕ ವಿಜಯ್ ಪ್ರಸಾದ್ ನೀರ್​​ದೋಸೆ ಮತ್ತು ಸಿದ್ಲಿಂಗು ಸಿನಿಮಾಗಳಲ್ಲಿ ಸ್ವಲ್ಪ ಕುಚೇಷ್ಟೆ ಜೊತೆಗೆ ಜೀವನ ಸಂದೇಶ ಸಾರಿದ್ದರು. ಇದು ಪ್ರೇಕ್ಷಕರಿಗೆ ಬಹಳವಾಗಿ ಹಿಡಿಸಿತ್ತು. ಇದೀಗ ಮತ್ತೆ ಲೂಸ್ ಮಾದ ಯೋಗೇಶ್ ಹಾಗೂ ಸತೀಶ್ ನೀನಾಸಂ ಅವರೊಂದಿಗೆ ವಿಜಯ್ 'ಪರಿಮಳ ಲಾಡ್ಜ್​​​' ಗೆ ಬಂದಿದ್ದಾರೆ. ನಿನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಅಲ್ಲದೆ ಟೀಸರ್ ನೋಡಿ ದರ್ಶನ್ ಮೆಚ್ಚಿಕೊಂಡಿದ್ದಾರೆ. ಇಡೀ ತಂಡಕ್ಕೆ ದಚ್ಚು ಶುಭ ಕೋರಿದ್ದಾರೆ. ಇದೇ ವೇಳೆ ಚಿತ್ರತಂಡ ದರ್ಶನ್​​​​ಗೆ ತಂದೆ ತೂಗುದೀಪ ಶ್ರೀನಿವಾಸ್ ಹಾಗೂ ದರ್ಶನ್ ಒಟ್ಟಿಗೆ ಇರುವ ಫೋಟೋವನ್ನು ಗಿಫ್ಟ್​ ನೀಡಿದರು.

ದರ್ಶನ್​​ಗೆ 'ಪರಿಮಳ ಲಾಡ್ಜ್' ತಂಡದಿಂದ ಗಿಫ್ಟ್​

ಇನ್ನು ಈ ಟೀಸರ್‌ನಲ್ಲಿ ನಿರ್ದೇಶಕ ವಿಜಯ್ ಪಾತ್ರ ಪರಿಚಯವನ್ನು ಸ್ವಲ್ಪ ವಿಭಿನ್ನವಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಸುಮನ್​ ರಂಗನಾಥ್, ದತ್ತಣ್ಣ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬುಲೆಟ್ ಪ್ರಕಾಶ್ ಕೂಡಾ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಗೋಳಿನ ಕಥೆಯನ್ನು ಜನರಿಗೆ ಹೇಳುವಾಗ ಸ್ವಲ್ಪ ವಿಭಿನ್ನವಾಗಿರಲಿ ಎಂದು ತಂತ್ರಜ್ಞರು ಹಾಗೂ ಪಾತ್ರಧಾರಿಗಳನ್ನು ಸ್ವಲ್ಪ ವಿಭಿನ್ನವಾಗಿ ಪರಿಚಯ ಮಾಡಿದ್ದೇನೆ. ಇದು ಕುಟುಂಬಸಹಿತ ಬಂದು ನೋಡುವಂತ ಸಿನಿಮಾ ಎಂದು ನಿರ್ದೇಶಕರು ಟೀಸರ್ ಬಗ್ಗೆ ಕ್ಲಾರಿಟಿ ಕೊಟ್ರು. ನಾಳೆಯಿಂದ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. 'ಬ್ಯೂಟಿಫುಲ್ ಮನಸುಗಳು ' ಚಿತ್ರದ ನಿರ್ಮಾಪಕ ಪ್ರಸನ್ನ 'ಪರಿಮಳ ಲಾಡ್ಜ್​​ ' ಗೆ ಬಂಡವಾಳ ಹೂಡಿದ್ದಾರೆ.

ಸತೀಶ್ ನೀನಾಸಂ, ದರ್ಶನ್
ದರ್ಶನ್, ಯೋಗೇಶ್

ABOUT THE AUTHOR

...view details