ಕಳೆದ ಒಂದು ತಿಂಗಳಿಂದ ಮಂಡ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಎರಡನೇ ಲ್ಯಾಂಬೋರ್ಗಿನಿ ಖರೀದಿಸಿದ್ದ ದರ್ಶನ್ ಬೆಂಗಳೂರು-ಮೈಸೂರು ಜಾಲಿ ರೈಡ್ ಮಾಡಿದ್ದಾರೆ.
ಕಬಿನಿ ಅರಣ್ಯದಲ್ಲಿ ದಚ್ಚು ರಿಲ್ಯಾಕ್ಸ್... ಕಾಡಿನಿಂದ ನೇರ ರಾಬರ್ಟ್ ಸೆಟ್ ಸೇರಲಿರುವ ದಾಸ - undefined
ಸ್ವಲ್ಪ ಸಮಯ ಸಿಕ್ಕರೆ ಸಾಕು ಫಾರ್ಮ್ ಹೌಸ್ ಇಲ್ಲವೇ ಅರಣ್ಯ ಪ್ರದೇಶಗಳಿಗೆ ಹೋಗಿ ಕಾಲ ಕಳೆಯುವುದು ದರ್ಶನ್ಗೆ ಅಭ್ಯಾಸ. ಕಳೆದ ವಾರ ಮಗ ವಿನೀಶ್ಗೆ ಮೈಸೂರಿನ ಫಾರ್ಮ್ಹೌಸ್ನಲ್ಲಿ ಹಾಲು ಕರೆಯುವುದನ್ನು ಕಲಿಸಿದ್ದ ದರ್ಶನ್ ಈಗ ಕಬಿನಿ ಅರಣ್ಯ ಪ್ರದೇಶದಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
![ಕಬಿನಿ ಅರಣ್ಯದಲ್ಲಿ ದಚ್ಚು ರಿಲ್ಯಾಕ್ಸ್... ಕಾಡಿನಿಂದ ನೇರ ರಾಬರ್ಟ್ ಸೆಟ್ ಸೇರಲಿರುವ ದಾಸ](https://etvbharatimages.akamaized.net/etvbharat/prod-images/768-512-3196474-thumbnail-3x2-darshan.jpg)
ಅಷ್ಟೇ ಅಲ್ಲದೆ ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ಮಗ ವಿನೀಶ್ಗೆ ಹಾಲು ಕರೆಯುವ ತರಬೇತಿ ಕೂಡಾ ನೀಡಿದ್ದರು ದರ್ಶನ್, ಇದೀಗ ಕಬಿನಿ ಅರಣ್ಯಪ್ರದೇಶದಲ್ಲಿ ಸುತ್ತಾಡಿ ಪ್ರಾಣಿಗಳ ಪೋಟೋ ಕ್ಲಿಕ್ಕಿಸುವುದರಲ್ಲಿ ಚಾಲೆಂಜಿಂಗ್ ಸ್ಟಾರ್ ಬ್ಯುಸಿಯಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಪ್ರಾಣಿ, ಪಕ್ಷಿ ಹಾಗೂ ಸುಂದರ ಪ್ರಕೃತಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಸಮಯ ಸಿಕ್ಕಾಗಲೆಲ್ಲಾ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುವ ದಾಸ ಈ ಹಿಂದೆ ಬಂಡೀಪುರ, ಮೈಸೂರು ಸೇರಿದಂತೆ ಕೆಲವು ಅರಣ್ಯ ಪ್ರದೇಶದಲ್ಲಿ ವೈಲ್ಡ್ ಲೈಫ್ ಫೋಟೋ ಕ್ಲಿಕ್ಕಿಸಿದ್ದರು. ಮೈಸೂರು ಅರಣ್ಯ ಇಲಾಖೆ ಈ ಪೋಟೋಗಳ ಎಕ್ಸಿಬಿಷನ್ ಕೂಡಾ ಏರ್ಪಡಿಸಿತ್ತು. ಸದ್ಯ ಕಾಡಿನಲ್ಲಿ ರೆಸ್ಟ್ ಮಾಡುತ್ತಿರುವ ದರ್ಶನ್ ಮುಂದಿನ ವಾರದಿಂದ 'ರಾಬರ್ಟ್' ಶೂಟಿಂಗ್ ತಂಡ ಸೇರಲಿದ್ದಾರೆ.