ಸಿನಿಮಾ ನಟರ ಅಭಿಮಾನಿಗಳು ತಮ್ಮ ಮೆಚ್ಚಿನ ನಟ/ನಟಿಯರ ಸ್ಟೈಲ್, ಕೆಲವೊಮ್ಮೆ ಅವರ ಜೀವನ ಶೈಲಿಯನ್ನು ಅನುಸರಿಸುವುದುಂಟು. ಇನ್ನೂ ಕೆಲವವರಿಗೆ ತಮ್ಮ ಫೇವರೆಟ್ ನಟರ ಮಾತುಗಳೆಂದರೆ ವೇದವಾಕ್ಯ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿವೋರ್ವರು ಇದೀಗ ಯಜಮಾನನ ಹಾದಿಯಲ್ಲಿ ಸಾಗಿದ್ದಾರೆ.
ದರ್ಶನ್ ಅನುಸರಿಸಿದ ಫ್ಯಾನ್... ಕೀನ್ಯಾ ಆನೆ ದತ್ತು ಪಡೆದ್ರು ‘ಗಜ‘ನ ಅಭಿಮಾನಿ! - undefined
ನಟ ದರ್ಶನ್ ಅಭಿಮಾನಿವೋರ್ವರು ಕೀನ್ಯಾ ಆನೆಯೊಂದನ್ನು ದತ್ತು ಪಡೆಯುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ. ಈ ಮೂಲಕ ತಮ್ಮ ಮೆಚ್ಚಿನ ನಟನ ಹಾದಿಯಲ್ಲಿ ಸಾಗಿದ್ದಾರೆ ಈ ಅಭಿಮಾನಿ.
ನಟ ದರ್ಶನ್ ಪ್ರಾಣಿಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈಸೂರು ಮೃಗಾಲಯದಲ್ಲಿ ದರ್ಶನ್ ಆನೆಯೊಂದನ್ನು ದತ್ತು ಪಡೆದಿರುವುದು ಕೂಡಾ ಹಳೆಯ ವಿಷಯ. ಅಪಾರ ಅಭಿಮಾನಿ ಬಳಗ ಹೊಂದಿರುವ ದರ್ಶನ್ ಒಂದು ಮಾತು ಹೇಳಿದರೆ ಸಾಕು ಅವರ ಭಕ್ತಗಣಕ್ಕೆ ಅದೇ ವೇದವಾಕ್ಯ. ದಾಸನ ಹಾದಿಯಲ್ಲಿ ಸಾಗುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದೀಗ ಅವರ ಅಭಿಮಾನಿ ಜೈಕಾಂತ್ ಶೇಖರ್ ಎಂಬುವರು ಕೂಡಾ ದರ್ಶನ್ ಅವರ ಸ್ಫೂರ್ತಿಯಿಂದ 'ಲ್ಯಾರೋ' ಎಂಬ ಆನೆಯೊಂದನ್ನು ದತ್ತು ಪಡೆದಿದ್ದಾರೆ.
ದರ್ಶನ್ ಅಭಿಮಾನಿಗಳು ಕಟ್ಟಿಕೊಂಡಿರುವ ಡಿ ಬಾಸ್ ಸಂಘದ ಸದಸ್ಯ ಜೈಕಾಂತ್ ಅವರು ಆನೆಯನ್ನು ಭಾರತದಲ್ಲಿ ದತ್ತು ಪಡೆದಿಲ್ಲ. ಇಲ್ಲಿ ಆನೆ ದತ್ತು ಪಡೆದರೆ ವರ್ಷಕ್ಕೆ 2 ಲಕ್ಷ ರೂಪಾಯಿ ಪಾವತಿಸಬೇಕು. ಆದರೆ ಕೀನ್ಯಾದಲ್ಲಿ ಬೆಲೆ ಕಡಿಮೆ ಇರುವ ಕಾರಣ ಅಲ್ಲಿನ ಆನೆಯನ್ನೇ ದತ್ತು ಪಡೆದಿದ್ದಾರೆ. ಕೀನ್ಯಾದಿಂದ ಜೈಕಾಂತ್ ಅವರಿಗೆ ಪ್ರತಿ ತಿಂಗಳು ಈ ಆನೆಯ ಬಗೆಗಿನ ಡೀಟೆಲ್ಸ್ ಹಾಗೂ ಫೋಟೊಗಳನ್ನು ಕಳಿಸಿಕೊಡಲಾಗುತ್ತಂತೆ. ಇನ್ನು ಈ ಆನೆಯನ್ನು ಜೈಕಾಂತ್ ಆನ್ಲೈನ್ ಮೂಲಕ ದತ್ತು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.