ಕರ್ನಾಟಕ

karnataka

ETV Bharat / sitara

ಕೀನ್ಯಾ ಸಫಾರಿ ಮುಗಿಸಿ ಬೆಂಗಳೂರಿಗೆ ವಾಪಸಾದ ಚಾಲೆಂಜಿಂಗ್ ಸ್ಟಾರ್​​ - ಚಾಲೆಂಜಿಂಗ್ ಸ್ಟಾರ್​​

ಕೆಲ ದಿನಗಳ ಹಿಂದೆ ಕೀನ್ಯಾಗೆ ತೆರಳಿದ್ದ ನಟ ದರ್ಶನ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ತಮ್ಮ ಕೆಲವು ಸ್ನೇಹಿತರೊಂದಿಗೆ ಕೀನ್ಯಾದ ಮಸಾಯಿ ಮಾರಾ ಕಾಡಿಗೆ ತೆರಳಿದ್ದ ದರ್ಶನ್, ಅಲ್ಲಿ ವೈಲ್ಡ್​​ ಫೋಟೋಗ್ರಫಿ ಮಾಡುವ ಮೂಲಕ ಎಂಜಾಯ್ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್​​

By

Published : Sep 30, 2019, 4:36 PM IST

ವೈಲ್ಡ್​ ಫೋಟೋಗ್ರಫಿಗಾಗಿ ಕೆಲ ದಿನಗಳ ಹಿಂದೆ ಆಫ್ರಿಕಾದ ಕೀನ್ಯಾದ ಮಸಾಯಿ ಮಾರಾ ಕಾಡಿಗೆ ತೆರಳಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗಿದ್ದಾರೆ.

ಒಂದು ವಾರ ಕಾಲ ಕೀನಾದ್ಯ ಕಾಡುಗಳಲ್ಲಿ ಫೋಟೋಗ್ರಫಿ ಮಾಡಿರುವ ದರ್ಶನ್, ಅಲ್ಲಿನ ಪ್ರದೇಶಗಳನ್ನು ಸಖತ್ ಎಂಜಾಯ್ ಮಾಡಿದ್ದಾರೆ. 4-3 ದಿನಗಳ ಹಿಂದೆ ಏರ್​ ಬಲೂನ್​ ಹತ್ತಿ ಸುಂದರ ಫೋಟೋಗಳನ್ನು ದರ್ಶನ್ ಸೆರೆ ಹಿಡಿದಿದ್ದರು. ಈ ವಿಡಿಯೋವನ್ನು ದರ್ಶನ್ ಸ್ನೇಹಿತರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಮತ್ತೊಂದು ವಿಡಿಯೋವನ್ನು ಯೂಟ್ಯೂಬ್​​​ನಲ್ಲಿ ಅಪ್​​ಲೋಡ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ದರ್ಶನ್​ ಕೀನ್ಯಾದ ಕಾಡಿನ ಜನರೊಂದಿಗೆ ಮಾತನಾಡುತ್ತಿರುವುದು, ಅಲ್ಲಿನ ಸಂಸ್ಕೃತಿಯನ್ನು ಎಂಜಾಯ್ ಮಾಡುತ್ತಿರುವುದು, ಕಾಡು ಪ್ರಾಣಿಗಳ ಫೋಟೋ ಸೆರೆಹಿಡಿಯುತ್ತಿರುವ ದೃಶ್ಯಗಳನ್ನು ಕಾಣಬಹುದು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ABOUT THE AUTHOR

...view details