ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿ ಆಗಿ ಅಭಿನಯಿಸುತ್ತಿದ್ದ ಚೆಂದುಳ್ಳಿ ಚೆಲುವೆ ಚೈತ್ರಾ ರೆಡ್ಡಿ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಹಾಗೂ ಛಾಯಾಗ್ರಾಹಕ ರಾಕೇಶ್ ಅವರೊಂದಿಗೆ ಚೈತ್ರಾ ರೆಡ್ಡಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚೈತ್ರಾ ರೆಡ್ಡಿ ಹಾಗೂ ರಾಕೇಶ್ ಅವರ ನಿಶ್ಚಿತಾರ್ಥ ತುಂಬಾ ಸರಳವಾಗಿ ನಡೆದಿದ್ದು, ಕೇವಲ ಕುಟುಂಬಸ್ಥರು ಹಾಗೂ ಆಪ್ತರಷ್ಟೇ ಸಂಭ್ರಮದ ಕ್ಷಣದಲ್ಲಿ ಭಾಗಿಯಾಗಿದ್ದರು.
ನಿಶ್ಚಿತಾರ್ಥ ಮಾಡಿಕೊಂಡ ಅವನು ಮತ್ತು ಶ್ರಾವಣಿ ಖ್ಯಾತಿಯ ಚೈತ್ರಾ ರೆಡ್ಡಿ ಚೈತ್ರಾ ರೆಡ್ಡಿ ಅವರ ನಿಶ್ಚಿತಾರ್ಥದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೊಸ ಜೀವನ ಆರಂಭಿಸಲಿರುವ ಚೈತ್ರಾ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.
ಆಂಧ್ರಪ್ರದೇಶ ಮೂಲದವರಾದ ಚೈತ್ರಾ ರೆಡ್ಡಿ ಕನ್ನಡ ಕಿರುತೆರೆ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲೂ ನಟಿಸಿ ಮನೆ ಮಾತಾಗಿದ್ದಾರೆ. ತೆಲುಗಿನ ಯಾರಡೀ ಮೋಹಿನಿಯಲ್ಲಿ ಅಭಿನಯಿಸಿರುವ ಈಕೆ ತಮಿಳು ಕಿರುತೆರೆಯಲ್ಲಿ ಮಿಂಚಿದ ಚೆಲುವೆ. ಇದರ ಜೊತೆಗೆ ವಿನೋದ್ ಪ್ರಭಾಕರ್ ಅಭಿನಯದ ರಗಡ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸಿದ್ದಾರೆ.
ಇತ್ತೀಚೆಷ್ಟೇ ಇನ್ ಸ್ಟಾಗ್ರಾಂನಲ್ಲಿ ರಾಕೇಶ್ ಜೊತೆ ಇರುವ ಫೋಟೋ ಶೇರ್ ಮಾಡುವ ಮೂಲಕ ತಾನು ಪ್ರೀತಿಯಲ್ಲಿದ್ದೇನೆ ಎಂದು ಚೈತ್ರಾ ಪ್ರಸ್ತುತ ಪಡಿಸಿದ್ದರು. ಮಾತ್ರವಲ್ಲ ಲಾಕ್ ಡೌನ್ ಸಮಯದಲ್ಲಿ ರಾಕೇಶ್ ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಚೈತ್ರಾ ಹೇಳಿದ್ದರು. ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.