ಕರ್ನಾಟಕ

karnataka

ETV Bharat / sitara

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್ ಚೈತ್ರಾ ಕೋಟೂರ್

ಕನ್ನಡದ ಬಿಗ್​ಬಾಸ್‌ ಸೀಸನ್ 7 ರಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರ್ ಸರಳ ಕಾರ್ಯಕ್ರಮದಲ್ಲಿ ಉದ್ಯಮಿ ನಾಗಾರ್ಜುನ ಅವರನ್ನು ವರಿಸಿದ್ದಾರೆ.

Chaitra kotur married nagarjuna
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೋಟೂರ್

By

Published : Mar 28, 2021, 7:22 PM IST

ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿಯಾಗಿದ್ದ ನಟಿ ಚೈತ್ರಾ ಕೋಟೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್‌ಸ್ಟ್ರಕ್ಷನ್‌ ಉದ್ಯಮಿ ನಾಗಾರ್ಜುನ ಎಂಬವರನ್ನು ವರಿಸಿದ್ದು, ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಇವರ ವಿವಾಹ ನಡೆದಿದೆ.

ಬಿಗ್​ಬಾಸ್‌ ಸೀಸನ್ 7 ರಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರ್, ಅಲ್ಲಿಂದ ಹೊರ ಬಂದ ಮೇಲೆ ನಾಗಾರ್ಜುನ ಅವರೊಂದಿಗೆ ಗೆಳೆತನವಾಗಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆ ರೂಪ ಪಡೆದುಕೊಂಡಿದೆ. ಚೈತ್ರಾ ಅವರಿಗೆ ಮೊದಲಿನಿಂದಲೂ ಸರಳವಾಗಿ ಮದುವೆಯಾಗಬೇಕೆಂಬ ಆಶಯವಿತ್ತಂತೆ. ಅದರಂತೆ ಸರಳ ವಿವಾಹವಾಗಿದ್ದು, ನವಜೋಡಿಗೆ ಅಭಿಮಾನಿಗಳು, ಸಿನಿಪ್ರಿಯರು, ಆಪ್ತರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:ಬಿಗ್‌ಬಾಸ್‌ ಚೈತ್ರಾಗೆ ಪ್ಯಾರ್‌ಗೆ ಆಗ್ಬುಟೈತಂತೆ! ಯಾರಪ್ಪಾ ಅದು ಅಂದ್ರಾ?

ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಚೈತ್ರಾ ಕೋಟೂರ್‌ 'ಸೂಜಿದಾರ' ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದರು. ಈ ಚಿತ್ರದಲ್ಲಿ ಅವರದ್ದು ಪ್ರಮುಖ ಪಾತ್ರವಾಗಿತ್ತು. ಕಳೆದ ವಾರವಷ್ಟೇ ಸಿನಿಮಾವೊಂದರಲ್ಲಿ ಡೆಪ್ಯೂಟಿ ಕಮಿಷನರ್ ಪಾತ್ರದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದ ಚೈತ್ರಾ, ಶೀಘ್ರದಲ್ಲೇ ಸಿನಿಮಾವೊಂದನ್ನು ನಿರ್ದೇಶಿಸುವ ಉದ್ದೇಶವಿರುವುದಾಗಿ ತಿಳಿಸಿದ್ದರು. ಜತೆಗೆ ಒಂದು ಆಲ್ಬಂ ಹಾಡನ್ನು ಬರೆದು, ನಿರ್ದೇಶನವನ್ನೂ ಅವರೇ ಮಾಡಿದ್ದರು.

ABOUT THE AUTHOR

...view details