ಕರ್ನಾಟಕ

karnataka

ETV Bharat / sitara

ಬಿಗ್​ ಬಾಸ್​​ ಮನೆಯಿಂದ ಹೊರಬಿದ್ದ ಚೈತ್ರಾ ಕೋಟೂರ್ - ಚೈತ್ರಾ ಕೋಟೂರ್​​ ಎಲಿಮೆನೇಟ್​​

ಬಿಗ್ ಬಾಸ್ ಆರಂಭದಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಚೈತ್ರಾ ಕೋಟೂರ್ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲರಾಗಿ ಮನೆಯಿಂದ ಹರ ಬಂದಿದ್ದು, ನಂತ್ರ ವೈಲ್ಡ್​​​ ಕಾರ್ಡ್​​ ಎಂಟ್ರಿಯಾಗಿ ಮನೆ ಸೇರಿದ್ದರು. ಆದ್ರೆ ಇದೀಗ ಬಿಗ್​ಬಾಸ್​​ ಮನೆಯಿಂದ ಔಟ್​ ಆಗಿ ಹೊರ ಬಂದಿದ್ದಾರೆ.

chaitra  eliminate from kannada big boss
ಬಿಗ್​ ಬಾಸ್​​ ಮನೆಯಿಂದ ಹೊರಬಿದ್ದ ಚೈತ್ರಾ ಕೋಟೂರ್

By

Published : Dec 29, 2019, 1:28 PM IST

ಈ ವಾರ ಬಿಗ್ ಬಾಸ್ ಮನೆಯಿಂದ ಮೂರನೇ ವೈಲ್ಡ್ ಕಾರ್ಡ್ ಎಂಟ್ರಿ‌ ಚೈತ್ರಾ ಕೋಟೂರ್ ಹೊರಬಂದಿದ್ದಾರೆ.

ಬಿಗ್ ಬಾಸ್ ಆರಂಭದಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಚೈತ್ರಾ ಕೋಟೂರ್ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲರಾದರು. ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದು ಪ್ರೇಕ್ಷಕರನ್ನು ರಂಜಿಸಲು ಹಲವು ಕಸರತ್ತುಗಳನ್ನು ನಡೆಸಿದರು. ಆದ್ರೆ ಇದ್ಯಾವುದೂ ಅವರಿಗೆ ಕೈಗೂಡಲಿಲ್ಲ. ಟಾಸ್ಕ್​​ಗಳಲ್ಲಿ ಉತ್ತಮ ಪ್ರದರ್ಶನ ತೋರಲು ಪ್ರಯತ್ನಿಸಿದರು. ಅಲ್ಲದೇ ತಮ್ಮ ಬಗ್ಗೆಯೂ ಮನೆಯ ಸ್ಪರ್ಧಿಗಳಲ್ಲಿ ತಿಳಿಸಲು ಸಾಕಷ್ಟು ಪ್ರಯತ್ನಪಟ್ಟರು. ಆದರೂ ಯಾವುದು ಅವರಿಗೆ ಪ್ಲಸ್ ಪಾಯಿಂಟ್ ಆಗಲೇ ಇಲ್ಲ. ಈ ಮೂಲಕ ಚೈತ್ರಾ ಕೊಟೂರು ಅವರ ಬಿಗ್ ಬಾಸ್ ಮನೆಯ ಎರಡನೇ‌ ಇನ್ನಿಂಗ್ಸ್ ಅಂತ್ಯವಾಗಿದೆ.

ಚೈತ್ರಾ ಕೋಟೂರ್

ಚೈತ್ರಾ ಎಲಿಮಿನೇಷನ್​ನಿಂದ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 10ಕ್ಕೆ ಇಳಿದಿದೆ. ಇನ್ನುಳಿದಿರುವವರಲ್ಲಿ ನಾಲ್ಕು ವಾರಗಳಲ್ಲಿ ಐದು ಸ್ಪರ್ಧಿಗಳು ಎಲಿಮಿನೇಟ್ ಆಗಲಿದ್ದಾರೆ. ಫಿನಾಲೆಗೆ ಐದು ಸ್ಪರ್ಧಿಗಳು ಉಳಿದುಕೊಳ್ಳಲಿದ್ದಾರೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಕೂಡ ನಡೆಯಬಹುದು.‌ ಮುಖ್ಯವಾಗಿ ಈ ವಾರ ಅಥವಾ ಮುಂಬರುವ ವಾರಗಳಲ್ಲಿ ಎಲಿಮಿನೇಷನ್ ಆದವರು ಸಿಕ್ರೇಟ್ ರೂಂಗೆ ಹೋಗಬಹುದು.

ABOUT THE AUTHOR

...view details