ಟಾಲಿವುಡ್ ಬಹುನಿರೀಕ್ಷಿತ ಸಿನಿಮಾ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹರೆಡ್ಡಿ' ಅಕ್ಟೋಬರ್ 2 ಗಾಂಧಿ ಜಯಂತಿಯಂದು ಬಿಡುಗಡೆಯಾಗುತ್ತಿದೆ. ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ದಕ್ಷಿಣ ಭಾರತದ ಐದು ಪ್ರಮುಖ ನಗರಗಳಲ್ಲಿ ಚಿತ್ರತಂಡ ಪ್ರೀ ರಿಲೀಸ್ ಈವೆಂಟ್ ನಡೆಸುತ್ತಿದೆ.
ಚಿರಂಜೀವಿ ಫಿಟ್ನೆಸ್ ಬಗ್ಗೆ ಹೊಗಳಿದ ಶಿವರಾಜ್ ಕುಮಾರ್.... ನಾಚಿ ನೀರಾದ ಮೆಗಾಸ್ಟಾರ್ - ಚಿರಂಜೀವಿ ಫಿಟ್ನೆಸ್
'ಸೈರಾ ನರಸಿಂಹರೆಡ್ಡಿ' ಪ್ರೀ ರಿಲೀಸ್ ಈವೆಂಟ್ ವೇದಿಕೆಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮೆಗಾಸ್ಟಾರ್ ಚಿರಂಜೀವಿ ಅವರ ಫಿಟ್ನೆಸ್ ಬಗ್ಗೆ ಹೊಗಳಿದರು. ಇನ್ನು ಅಪ್ಪಾಜಿ ಯಾವಾಗಲೂ ಚಿರಂಜೀವಿ ಅವರನ್ನು ದೊಡ್ಡಮಗ ಎಂದೇ ಹೇಳುತ್ತಿದ್ದರು. ಆದ್ದರಿಂದ ಅವರು ನನ್ನ ಅಣ್ಣನಂತೆ ಎಂದರು.
ನಿನ್ನೆ ಬೆಂಗಳೂರಿನಲ್ಲಿ ಸೈರಾ ಪ್ರೀ ರಿಲೀಸ್ ಈವೆಂಟ್ ಜರುಗಿದೆ. ಈ ವೇಳೆ, ಚಿತ್ರತಂಡದ ಬಹುತೇಕ ಎಲ್ಲ ಸದಸ್ಯರು ಹಾಜರಿದ್ದರು. ಸೆಂಚುರಿ ಸ್ಟಾರ್ ಸೇರಿದಂತೆ ಸ್ಯಾಂಡಲ್ವುಡ್ನ ಬಹುತೇಕ ಸೆಲಬ್ರಿಟಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ವೇದಿಕೆ ಮೇಲೆ ಮಾತನಾಡಿದ ಶಿವರಾಜ್ಕುಮಾರ್ 'ನಮ್ಮ ಯಾವುದೇ ಕಾರ್ಯಕ್ರಮವಾಗಲಿ ಚಿರಂಜೀವಿ ಸರ್ ಅಲ್ಲಿ ಇರುತ್ತಾರೆ. ಚಿರಂಜೀವಿ ನನ್ನ ದೊಡ್ಡ ಮಗ ಎಂದು ಅಪ್ಪಾಜಿ ಯಾವಾಗಲೂ ಹೇಳುತ್ತಿದ್ದರು. ಆದ್ದರಿಂದ ಅವರು ನನ್ನ ಅಣ್ಣ ಇದ್ದ ಹಾಗೆ. ಅವರು ನಮ್ಮ ಕುಟುಂಬದ ಮೇಲೆ ಎಷ್ಟು ಪ್ರೀತಿ, ವಿಶ್ವಾಸ ಇಟ್ಟಿದ್ದಾರೋ ನಮಗೂ ಕೂಡಾ ಅವರ ಕುಟುಂಬದ ಮೇಲೆ ಅಷ್ಟೇ ಪ್ರೀತಿ,ವಿಶ್ವಾಸ ಇದೆ. ಮೊದಲು ನಾನು ಪವನ್ ಕಲ್ಯಾಣ್ ಅವರ ಅಭಿಮಾನಿಯಾಗಿದ್ದೆ, ಈಗ ಅವರ ಕುಟುಂಬದಲ್ಲಿ ನನಗೆ ಎಲ್ಲರೂ ಇಷ್ಟ' ಎಂದರು.
ಇನ್ನು ಚಿರಂಜೀವಿ ಅವರ ಫಿಟ್ನೆಸ್ ಬಗ್ಗೆ ಮಾತನಾಡಿದ ಶಿವಣ್ಣ, ಚಿರಂಜೀವಿ ಅವರಿಗೆ 60 ವರ್ಷ ವಯಸ್ಸಾಗಿದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಅವರು ಇನ್ನೂ ಬಹಳಷ್ಟು ಸಿನಿಮಾಗಳಲ್ಲಿ ನಟಿಸಬೇಕು. ದೇವರು ಅವರಿಗೆ ಒಳ್ಳೆ ಆಯಷ್ಯ ನೀಡಲಿ, ಅವರು ಇದೇ ರೀತಿ ಆಯುಷ್ಮಾನ್ ಭವ ಆಗೇ ಇರಲಿ ಎಂದು ಹಾರೈಸಿದರು. ಇನ್ನು ತಮ್ಮ ಫಿಟ್ನೆಸ್ ಬಗ್ಗೆ ಮಾತನಾಡುತ್ತಿದ್ದಂತೆ ಮೆಗಾಸ್ಟಾರ್ ನಾಚಿ ನೀರಾಗಿದ್ದಂತೂ ಸುಳ್ಳಲ್ಲ.