ಕರ್ನಾಟಕ

karnataka

By

Published : Sep 10, 2019, 7:34 PM IST

ETV Bharat / sitara

ನನ್ನ ಸಿನಿಮಾ ಹಾಡನ್ನು ಅಷ್ಟು ಜನ‌ ನೋಡಿದ್ದಾರಾ? ಆಶ್ಚರ್ಯ ವ್ಯಕ್ತಪಡಿಸಿದ ಸೆಂಚುರಿ ಸ್ಟಾರ್​​​​!

ದುನಿಯಾ ಸೂರಿ ನಿರ್ದೇಶನದಲ್ಲಿ ಶಿವರಾಜ್​ಕುಮಾರ್ ಅಭಿನಯದ 'ಟಗರು' ಸಿನಿಮಾ ಹಾಡುಗಳ ಕ್ರೇಜ್​ ಇನ್ನೂ ಕಡಿಮೆಯಾಗಿಲ್ಲ. ಚಿತ್ರದ ಟೈಟಲ್ ಹಾಡನ್ನು ಯೂಟ್ಯೂಬ್​​​​​​ನಲ್ಲಿ ಸುಮಾರು 50 ಮಿಲಿಯನ್ ಜನರು ನೋಡಿದ್ದಾರೆ. ಇದಕ್ಕೆ ಶಿವಣ್ಣ ಕೂಡಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸೆಂಚುರಿ ಸ್ಟಾರ್

ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್ ಅಭಿನಯದ ಟಗರು ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆಯುತ್ತಿವೆ. ಆದ್ರೆ ಈ ಸಿನಿಮಾದ ಹಾಡುಗಳನ್ನು ಮಾತ್ರ ಇನ್ನೂ ಯಾರೂ ಮರೆತಿಲ್ಲ. ಅದರಲ್ಲೂ 'ಟಗರು ಬಂತು ಟಗರು' ಹಾಡಿನ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ.

'ಟಗರು' ಹಾಡಿನ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

ಶಿವಣ್ಣ ಥೀಮ್ ಸ್ಟೆಪ್ ಹಾಕಿದ ಟಗರು ಬಂತು ಟಗರು ಹಾಡು ಯೂಟ್ಯೂಬ್​​ನಲ್ಲಿ‌ ಹೊಸ ರೆಕಾರ್ಡ್ ಬರೆಯಲು ರೆಡಿಯಾಗಿದೆ‌. 'ಟಗರು' ಸಿನಿಮಾದ ಟೈಟಲ್ ಸಾಂಗ್ ಯೂಟ್ಯೂಬ್​​​​​​​​​​​​​ನಲ್ಲಿ 50 ಮಿಲಿಯನ್ ಜನ‌ರು ನೋಡುವ ಮೂಲಕ ಹೆಸರು ಮಾಡಿದೆ. 2018 ಏಪ್ರಿಲ್ 23ರಂದು ಈ ಹಾಡು ಪಿಆರ್​​​​​​​​​​​​​​​​​​​​ಕೆ ಆಡಿಯೋ ಮೂಲಕ ಬಿಡುಗಡೆ ಆಗಿತ್ತು. ಈ ಹಾಡನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡಿದ್ದರು. ತಮಿಳಿನ ಜಾನಪದ ಗಾಯಕ ಆಂಟೋನಿ ದಾಸ್ ಈ ಹಾಡಿನ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ಮೊದಲು ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿ 42 ಮಿಲಿಯನ್ ಹಿಟ್ಸ್ ಪಡೆದುಕೊಂಡಿತ್ತು. ಈಗ ವಿಡಿಯೋ ಹಾಡಿಗೆ 50 ಮಿಲಿಯನ್ ಹಿಟ್ಸ್ ಸಿಕ್ಕಿದೆ.

ವಿಶೇಷ ಅಂದರೆ ಪಿಆರ್​​​​​ಕೆ ಆಡಿಯೋದಲ್ಲಿ ಬಿಡುಗಡೆಯಾಗಿ ಅತಿ ಹೆಚ್ಚು ವೀಕ್ಷಿಸಿರುವ ಹಾಡು ಇದಾಗಿದೆ. 1.37 ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ಯೂಟ್ಯೂಬ್​​​ನಲ್ಲಿ ಲೈಕ್ ಮಾಡಿದ್ದಾರೆ. ಕರ್ನಾಟಕ‌ ಮಾತ್ರವಲ್ಲದೆ ವಿದೇಶಗಳಲ್ಲೂ ಈ ಹಾಡಿನ ಅಬ್ಬರ ಜೋರಾಗಿತ್ತು. ಸದ್ಯಕ್ಕೆ ಈ ಹಾಡಿನ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್​​ಕುಮಾರ್, ನನ್ನ ಸಿನಿಮಾದ ಹಾಡನ್ನು ಮಿಲಿಯನ್ ಮಂದಿ ನೋಡಿದ್ದಾರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ರು. ಇದರ ಎಲ್ಲಾ ಕ್ರೆಡಿಟ್ ನಿರ್ದೇಶಕ ದುನಿಯಾ ಸೂರಿ, ಸಂಗೀತ ನಿರ್ದೇಶಕ ಚರಣ್ ರಾಜ್, ಗಾಯಕ ಆಂಟೋನಿ ದಾಸ್ ಮತ್ತು ನಿರ್ಮಾಪಕ ಕೆ.ಪಿ. ಶ್ರೀಕಾಂತ್​​ಗೆ ಸೇರುತ್ತೆ. ಇದೇ ಜೋಷ್​​​​​​​​​ನಲ್ಲಿ ಟಗರು-2 ಸಿನಿಮಾಕ್ಕೆ ಕಾಯುತ್ತಿದ್ದೇನೆ ಅಂತ ಶಿವಣ್ಣ ಹೇಳಿದರು.

ABOUT THE AUTHOR

...view details