ಕರ್ನಾಟಕ

karnataka

ETV Bharat / sitara

'ಆಯುಷ್ಮಾನ್​​​​​​​​​​​ಭವ' ಚಿತ್ರದ ಡಬ್ಬಿಂಗ್​​​​​​​​ನಲ್ಲಿ ಬ್ಯುಸಿಯಾದ್ರು ಸೆಂಚುರಿ ಸ್ಟಾರ್

ದ್ವಾರಕೀಶ್ ಚಿತ್ರ ಬ್ಯಾನರ್ ಅಡಿ ಪಿ. ವಾಸು ನಿರ್ದೇಶಿಸಿರುವ 'ಆಯುಷ್ಮಾನ್​​ಭವ' ಚಿತ್ರಕ್ಕೆ ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್ ಡಬ್ಬಿಂಗ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಶಿವಣ್ಣ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ.

ಸೆಂಚುರಿ ಸ್ಟಾರ್

By

Published : Sep 21, 2019, 11:27 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪಿ. ವಾಸು ಕಾಂಬಿನೇಷನಲ್ಲಿ ಸಿನಿಮಾವೊಂದು ಶೂಟಿಂಗ್ ಮುಗಿಸಿದ್ದರೂ ಸಿನಿಮಾ ಟೈಟಲ್ ಏನು ಎನ್ನುವುದು ತಿಳಿದಿರಲಿಲ್ಲ. ಈ ಮೊದಲು ಸಿನಿಮಾಗೆ ಆನಂದ್ ಎಂದು ಹೆಸರಿಡಲಾಗಿತ್ತು. ಆದರೆ ಇತ್ತೀಚೆಗಷ್ಟೇ ನಿರ್ಮಾಪಕ ದ್ವಾರಕೀಶ್ ಈ ಸಿನಿಮಾಕ್ಕೆ 'ಆಯುಷ್ಮಾನ್​​ಭವ' ಎಂಬ ಹೆಸರನ್ನು ಅಂತಿಮ ಮಾಡಿದ್ದರು.

'ಆಯುಷ್ಮಾನ್​​​​​​​​​​​ಭವ' ಚಿತ್ರಕ್ಕೆ ಡಬ್ ಮಾಡುತ್ತಿರುವ ಸೆಂಚುರಿ ಸ್ಟಾರ್

ಇದೀಗ ಈ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್​​ ಕುಮಾರ್ ಡಬ್ಬಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಶಿವಲಿಂಗ ಸಿನಿಮಾ‌ ನಂತರ ನಿರ್ದೇಶಕ ಪಿ.ವಾಸು ಜೊತೆ ಶಿವರಾಜ್ ಕುಮಾರ್ ಕೆಲಸ ಮಾಡುತ್ತಿರುವ ಎರಡನೇ ಸಿನಿಮಾ ಇದು. ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಮಧ್ಯೆ ಪೋಸ್ಟ್​ ಪ್ರೊಡಕ್ಷನ್ ಕೆಲಸಕ್ಕೂ ಕೈ ಹಾಕಿದೆ‌. ಚಿತ್ರದಲ್ಲಿ ಶಿವಣ್ಣನ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ. ಇವರೊಂದಿಗೆ ಅನಂತನಾಗ್, ನಿಧಿ ಸುಬ್ಬಯ್ಯ, ಸುಹಾಸಿನಿ, ಶಿವಾಜಿ ಪ್ರಭು, ಸಾಧು ಕೋಕಿಲ, ರಂಗಾಯಣ ರಘು, ಯಶ್ ಶೆಟ್ಟಿ ಹೀಗೆ ದೊಡ್ಡ ತಾರಾ ಬಳಗ ಇದೆ.

ಶಿವರಾಜ್​​​ಕುಮಾರ್

ಕರ್ನಾಟಕದ ಕುಳ್ಳ ಎಂದೇ ಖ್ಯಾತರಾಗಿರುವ ದ್ವಾರಕೀಶ್ ಚಿತ್ರ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಬೆಂಗಳೂರು, ಗೌರಿಬಿದನೂರು, ಅಲೆಪಿ, ಚಾಲ್‍ಕುಡಿ, ಮಂಗಳೂರು, ಮಡಿಕೇರಿ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರಕ್ಕೆ ಪಿ. ವಾಸು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗುರುಕಿರಣ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ, ಗೌತಮ್ ​​ರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಎ. ಹರ್ಷ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಈ ಚಿತ್ರ ತೆರೆ ಮೇಲೆ ಬರಲಿದೆ.

ABOUT THE AUTHOR

...view details