ಕರ್ನಾಟಕ

karnataka

ETV Bharat / sitara

ಪಟಾಕಿ ಹಚ್ಚಿ ಸಂಭ್ರಮಿಸಿದ ಸೆಂಚುರಿ ಸ್ಟಾರ್​​​ - ಕುಟುಂಬದೊಂದಿಗೆ ಪಟಾಕಿ ಹೊಡೆದು ಸಂಭ್ರಮಿಸಿದ ಶಿವಣ್ಣ

ಎರಡು ದಿನಗಳ ಹಿಂದೆ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಹೇಳಿದ್ದ ಶಿವಣ್ಣನ ಮನೆಯಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿತ್ತು. ಕೊನೆಯ ದಿನವಾದ ಇಂದು ಕೂಡಾ​ ಶಿವಣ್ಣ ತಮ್ಮ ಫ್ಯಾಮಿಲಿಯೊಂದಿಗೆ ಸೇರಿ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.

ಸೆಂಚುರಿ ಸ್ಟಾರ್

By

Published : Oct 29, 2019, 11:53 PM IST

ಕಳೆದ ಮೂರು ದಿನಗಳಿಂದ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಪ್ರತಿ ಮನೆ ಮನೆಯಲ್ಲೂ ದೀಪ ಬೆಳಗಿಸಿ, ಪಟಾಕಿ ಸಿಡಿಸಿ, ಸಿಹಿ‌ ತಿಂದು ದೀಪಾವಳಿ ಹಬ್ಬವನ್ನು ಮಕ್ಕಳು, ದೊಡ್ಡವರು ಎನ್ನದೆ ಎಲ್ಲರೂ ಜೊತೆ ಸೇರಿ ಸಂಭ್ರಮಿಸಿದ್ದಾರೆ.

ಪಟಾಕಿ ಹೊಡೆದು ಸಂಭ್ರಮಿಸಿದ ಶಿವರಾಜ್​ಕುಮಾರ್​​

ಇನ್ನು ಇಂದಿಗೆ ದೀಪಾವಳಿ ಮುಕ್ತಾಯಗೊಂಡಿದೆ. ಇನ್ನು ಸ್ಟಾರ್​ಗಳ ಮನೆ ಅಂದ್ರೆ ಹಬ್ಬಗಳ ಬಗ್ಗೆ ಕೇಳಬೇಕೇ..? ಬ್ಯುಸಿ ಶೆಡ್ಯೂಲ್ ನಡುವೆ ಶೂಟಿಂಗ್ ಬಿಟ್ಟು ಮನೆ ಮಂದಿ ಜೊತೆ ಹಬ್ಬ ಆಚರಿಸುವುದರಿಂದ ಸಂಭ್ರಮ ತುಸು ಜೋರಾಗಿಯೇ ಇರುತ್ತದೆ. ಎರಡು ದಿನಗಳ ಹಿಂದೆ ನಾಡಿನ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ಹೇಳಿದ್ದ ಟಗರು ಶಿವನ ಮನೆಯಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿತ್ತು. ಕೊನೆಯ ದಿನವಾದ ಇಂದು ಕೂಡಾ ಆಚರಣೆ​ ಜೋರಾಗಿದ್ದು, ಶಿವಣ್ಣ ತಮ್ಮ ಫ್ಯಾಮಿಲಿಯೊಂದಿಗೆ ಸೇರಿ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಶಿವಣ್ಣನ ಹಬ್ಬದ ಜೋಶ್​​​​​ಗೆ ಅಭಿಮಾನಿಗಳು ಕೂಡಾ ಫುಲ್ ​​​​​​​ಖುಷ್ ಆಗಿದ್ದಾರೆ.

For All Latest Updates

TAGGED:

ABOUT THE AUTHOR

...view details