ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ರೋರಿಂಗ್ ಸ್ಟಾರ್ ಶ್ರೀಮುರಳಿ ತೆರೆ ಹಂಚಿಕೊಂಡಿದ್ದ ಸಿನಿಮಾ 'ಮಫ್ತಿ'. ನರ್ತನ್ ನಿರ್ದೇಶನದ ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಹವಾ ಸೃಷ್ಟಿಸಿದ್ದ, ಶಿವರಾಜ್ ಕುಮಾರ್ ಹಾಗೂ ಶ್ರೀ ಮುರಳಿ ಮತ್ತೆ ಒಂದಾಗಿದ್ದಾರೆ.
ಮತ್ತೆ ಒಂದಾದ್ರು ಸೆಂಚುರಿ ಸ್ಟಾರ್ - ರೋರಿಂಗ್ ಸ್ಟಾರ್, ಏನಿದರ ಗುಟ್ಟು? - ಚಾಲೆಂಜಿಂಗ್ ಸ್ಟಾರ್ ದರ್ಶನ್
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾಗೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಧ್ವನಿ ನೀಡಿದ್ದಾರೆ. ಇಂದು ಆಕಾಶ್ ಸ್ಟುಡಿಯೋದಲ್ಲಿ ಶಿವಣ್ಣ ಚಿತ್ರದ ನಿರೂಪಣೆಗೆ ತಮ್ಮ ಧ್ವನಿ ನೀಡಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಹಾಗೂ 'ಅಯೋಗ್ಯ' ಸಿನಿಮಾ ನಿರ್ದೇಶಕ ಮಹೇಶ್ ಕೂಡಾ ಹಾಜರಿದ್ದರು.
ಹಾಗಾದ್ರೆ ಇವರಿಬ್ಬರೂ ಯಾವ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ ಅಂತೀರಾ...? ಅದೇ 'ಭರಾಟೆ'. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಯಾವ ಪಾತ್ರ ಮಾಡ್ತಿದ್ದಾರೆ ಅಂತಾ ಯೋಚನೆ ಮಾಡ್ತಾ ಇದ್ದೀರಾ..? ಕನ್ಫ್ಯೂಸ್ ಆಗಬೇಡಿ, ಶಿವರಾಜ್ ಕುಮಾರ್ ಭರಾಟೆ ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ಈ ಸಿನಿಮಾಕ್ಕೆ ಧ್ವನಿಯಾಗಿದ್ದಾರೆ. ಅಂದ್ರೆ ಭರಾಟೆ ಸಿನಿಮಾದ ಕಥೆಯನ್ನು ಶಿವರಾಜ್ ಕುಮಾರ್ ತಮ್ಮ ಧ್ವನಿಯಲ್ಲಿ ಹೇಳಲಿದ್ದಾರೆ. ಹೀಗಾಗಿ ಇಂದು ಆಕಾಶ್ ಸ್ಟುಡಿಯೋದಲ್ಲಿ, 'ಭರಾಟೆ' ಚಿತ್ರದ ನಿರೂಪಣೆ ಧ್ವನಿ ನೀಡಿದ್ದಾರೆ ಶಿವಣ್ಣ. ಈ ವೇಳೆ 'ಅಯೋಗ್ಯ' ಚಿತ್ರದ ನಿರ್ದೇಶಕ ಮಹೇಶ್ ಕೂಡಾ ಹಾಜರಿದ್ದರು. ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರಕ್ಕೆ, ಸೆಂಚುರಿ ಸ್ಟಾರ್ ಧ್ವನಿ ನೀಡಿರೋದು ವಿಶೇಷ. ಈ ಹಿಂದೆ ಚೇತನ್ ನಿರ್ದೇಶನದ 'ಬಹದ್ದೂರ್' ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದರು. ಇನ್ನು 'ಭರ್ಜರಿ' ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದರು. ಬಹುತೇಕ ಶೂಟಿಂಗ್ ಮುಗಿಸಿರುವ 'ಭರಾಟೆ' ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.