ಫೆಬ್ರವರಿ 14 ಪ್ರೇಮಿಗಳ ದಿನದಂದು ತಾಯಿ ಮಗನ ಬಾಂಧವ್ಯದ ಕಥೆ ಹೊಂದಿರುವ ಸೆಂಟಿಮೆಂಟ್ ಚಿತ್ರ ಸಾಗುತ ದೂರ ದೂರ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಹಾಗೂ ಮಿಮರ್ಶಕರಿಂದಲೂ ಒಳ್ಳೆ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಹೀಗಾಗಿ ಚಿತ್ರತಂಡ ಸೆಲೆಬ್ರಿಟಿಗಳಿಗಾಗಿ ಸೆಲೆಬ್ರಿಟಿ ಶೋ ಆಯೋಜಿಸಿತ್ತು.
ತಾಯಿ ಮಗನ ಸೆಂಟಿಮೆಂಟ್ ಸಿನೆಮಾಕ್ಕೆ ಫಿದಾ ಆದ್ರ ಸೆಲೆಬ್ರಿಟಿಸ್! - ಹಿರಿಯ ಗಾಯಕಿ ಮಂಜುಳ ಗುರುರಾಜ್
ಈ ಶೋಗೆ ಸ್ಯಾಂಡಲ್ವುಡ್ ಶೋಕಿವಾಲ ಅಜಯ್ ರಾವ್, ಸಂಗೀತ ನಿರ್ದೇಶಕ ವಿ ಮನೋಹರ್, ಹಿರಿಯ ಗಾಯಕಿ ಮಂಜುಳ ಗುರುರಾಜ್, ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು, ಕಿರುತೆರೆ ನಟರು, ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಹಾಗೂ ಕಿರುತೆರೆ ನಟರು ಆಗಮಿಸಿ ಚಿತ್ರ ವೀಕ್ಷಿಸಿದರು.
ಈ ಶೋಗೆ ಸ್ಯಾಂಡಲ್ವುಡ್ ಶೋಕಿವಾಲ ಅಜಯ್ ರಾವ್, ಸಂಗೀತ ನಿರ್ದೇಶಕ ವಿ ಮನೋಹರ್, ಹಿರಿಯ ಗಾಯಕಿ ಮಂಜುಳ ಗುರುರಾಜ್, ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು, ಕಿರುತೆರೆ ನಟರು, ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಹಾಗೂ ಕಿರುತೆರೆ ನಟರು ಆಗಮಿಸಿ ಚಿತ್ರ ವೀಕ್ಷಿಸಿದರು. ಚಿತ್ರದ ತಾಯಿ ಮಗನ ಸೆಂಟಿಮೆಂಟ್‌ಗೆ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನಾಡಿದರು.
ತಾಯಿ ಮಗನ ಸೆಂಟಿಮೆಂಟ್‌ನ ಯಾವುದೇ ಚಿತ್ರ ಯಾವುದೇ ಸಮಯಕ್ಕೂ ಬಂದರೂ ಅದು ಎವರ್‌ಗ್ರೀನ್ ಸಬ್ಜೆಕ್ಟ್. ಅಂತಹ ಒಂದು ಕಥೆಯನ್ನು ನಿರ್ದೇಶಕ ರವಿ ತೇಜ ಸಿನಿಮಾ ಮಾಡಿ ಗೆದ್ದಿದ್ದಾರೆ. ಇಂತಹ ಚಿತ್ರಗಳು ಗೆಲ್ಲಬೇಕು, ದಯವಿಟ್ಟು ಕನ್ನಡ ಅಭಿಮಾನಿಗಳು ಸಿನಿಮಾ ನೋಡಿ ಚಿತ್ರಕ್ಕೆ ಸಪೋರ್ಟ್ ಮಾಡಿ ಎಂದು ಸೆಲೆಬ್ರಿಟಿಗಳು ಅಭಿಮಾನಿಗಳಲ್ಲಿ ಮನವಿ ಮಾಡಿದರು. ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರವನ್ನು ಪ್ರೇಕ್ಷಕ ಪ್ರಭುಗಳು ಖಂಡಿತಾ ಕೈ ಹಿಡಿಯುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ರು.