ಕರ್ನಾಟಕ

karnataka

ETV Bharat / sitara

ಸಮಂತಾ ಅಕ್ಕಿನೇನಿ ಯೋಗದ ಭಂಗಿಗೆ ಫಿದಾ ಆದ ಸೆಲಬ್ರಿಟಿಗಳು..! - Celebrities praised Samantha yoga pose

ಮೂರು ದಿನಗಳ ಹಿಂದೆ ಸಮಂತಾ ಅಕ್ಕಿನೇನಿ ತಮ್ಮ ಇನ್ಸ್​​​​ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ಯೋಗದ ಭಂಗಿಯ ಫೋಟೋ ನೋಡಿ ಅಭಿಮಾನಿಗಳೊಂದಿಗೆ ಸೆಲಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Celebrities praised Samantha yoga pose
ಸಮಂತಾ ಅಕ್ಕಿನೇನಿ

By

Published : Jun 29, 2020, 5:40 PM IST

ನಟಿ ಸಮಂತಾ ಅಕ್ಕಿನೇನಿ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿದ್ದಾರೆ. ತಮ್ಮ ಸಿನಿಮಾವಾಗಲೀ, ವೈಯಕ್ತಿಕ ವಿಷಯಗಳನ್ನಾಗಲೀ ಸ್ಯಾಮ್​, ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಸಮಂತಾ ಯೋಗ ಮಾಡುತ್ತಿರುವ ಪೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಸಿನಿಮಾ ನಟ-ನಟಿಯರು ಯಾವಾಗಲೂ ಆಹಾರ ಕ್ರಮ, ಯೋಗದ ಮೂಲಕ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಏನು ಮರೆತರೂ ಪ್ರತಿ ದಿನ ವರ್ಕೌಟ್ ಮಾಡುವುದನ್ನು ಇವರು ಮರೆಯುವುದಿಲ್ಲ. ಸದ್ಯಕ್ಕೆ ಜಿಮ್​​​​ಗಳು ಬಂದ್ ಆಗಿವೆ. ಆದರೂ ಸ್ಯಾಮ್ ಮನೆಯಲ್ಲೇ ತಪ್ಪದೆ ಯೋಗ ಮಾಡುತ್ತಾರೆ. ಯೋಗದ ಭಂಗಿಯ ಪೋಟೋವೊಂದನ್ನು ತಮ್ಮ ಇನ್ಸ್​​ಟಾಗ್ರಾಮ್​​​​​ನಲ್ಲಿ ಹಂಚಿಕೊಂಡಿರುವ ಸಮಂತಾ 'ಬಿಡುವಿನ ವೇಳೆ ಗಾರ್ಡನಿಂಗ್ ಮಾತ್ರ ಅಲ್ಲ ನಾಗ ಚೈತನ್ಯ ಜೊತೆ ಯೋಗಾಸನ ಕೂಡಾ ಮಾಡುತ್ತೇನೆ. ನಮಗೆ ಸಂತೋಷ್ ಎಂಬುವವರು ಯೋಗ ತರಬೇತಿ ನೀಡುತ್ತಾರೆ' ಎಂದು ಬರೆದುಕೊಂಡಿದ್ದಾರೆ.

ಸಮಂತಾ ಯೋಗದ ಭಂಗಿ ನೋಡಿ ಸಾಮಾನ್ಯರು ಮಾತ್ರವಲ್ಲ ಸೆಲಬ್ರಿಟಿಗಳೇ ದಂಗಾಗಿದ್ಧಾರೆ. ರಕುಲ್ ಪ್ರೀತ್ ಸಿಂಗ್, ನಮ್ರತಾ ಶಿರೋಡ್ಕರ್ ಸೇರಿದಂತೆ ಅನೇಕ ಸೆಲಬ್ರಿಟಿಗಳು ಸಮಂತಾ ವರ್ಕೌಟ್​, ಡೆಡಿಕೇಷನ್​​​​ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ಧಾರೆ.

ಸ್ಯಾಮ್ ಸಿನಿಮಾ ವಿಚಾರಕ್ಕೆ ಬರುವುದಾದರೆ ತಮಿಳಿನಲ್ಲಿ ವಿಜಯ್ ಸೇತುಪತಿಯೊಂದಿಗೆ 'ಕಾತುವಾಕುಲ ರೆಂಡು ಕಾದಲ್' ಎಂಬ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅಶ್ವಿನ್ ಶರವಣ್ ನಿರ್ದೇಶನದ 'ಫ್ಯಾಮಿಲಿ ಮ್ಯಾನ್ 2' ಎಂಬ ವೆಬ್ ಸೀರೀಸ್​​ನಲ್ಲಿ ಕೂಡಾ ಸಮಂತಾ ನಟಿಸಲಿದ್ಧಾರೆ.

ABOUT THE AUTHOR

...view details