ಇಂದು ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಮತದಾನ ಶುರುವಾಗಿದೆ. ಮತದಾನಕ್ಕೆ ರಾಜಕೀಯ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಮಹಾರಾಷ್ಟ್ರ, ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ: ಬಾಲಿವುಡ್ ಸೆಲೆಬ್ರಿಟಿಗಳಿಂದ ಮತದಾನ - ಹರಿಯಾಣ ವಿಧಾನಸಭಾ ಚುನಾವಣೆ
ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಮತದಾನ ಶುರುವಾಗಿದೆ. ಮತದಾನಕ್ಕೆ ರಾಜಕೀಯ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಬಾಲಿವುಡ್ನ ಅಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್, ನಟಿ ಮಾಧುರಿ ದೀಕ್ಷಿತ್ ಪಶ್ಚಿಮ ಬಂದ್ರಾಕ್ಕೆ(ಮುಂಬೈ) ಆಗಮಿಸಿ ತಮ್ಮ ಮತ ಚಾಲಾಯಿಸಿದ್ದಾರೆ. ಮಾಜಿ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಮತ್ತು ಪತ್ನಿ, ನಟಿ ಲಾರಾ ದತ್ತ ಕೂಡಾ ಮತದಾನ ಮಾಡಿದ್ದಾರೆ.
ಇನ್ನು ಮುಂಬೈನಲ್ಲಿ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಮತ್ತು ನಟಿ ಪದ್ಮಿನಿ ಕೊಲ್ಲಾಪುರ್ ಮತದಾನ ಮಾಡಿದ್ರೆ, ಟಿಕ್ ಟಾಕ್ ಮೂಲಕವೇ ಹೆಸರು ಮಾಡಿ ಹರಿಯಾಣದಲ್ಲಿ ಬಿಜೆಪಿಯಿಂದ ಚುನಾವಣಾ ಸೀಟು ಗಿಟ್ಟಿಸಿಕೊಂಡಿರುವ ಸೊನಾಲಿ ಪೋಗತ್ ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ. ಇವರು ಕಾಂಗ್ರೆಸ್ನ ಕುಲದೀಪ್ ಬಿಶ್ನಾಯ್ ವಿರುದ್ಧ ಅದಂಪೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.