ಹೆಚ್ಚು ವಿವಾದ ಆದ ಹೆಸರುಗಳು ಹಾಗೂ ಗಣ್ಯ ವ್ಯಕ್ತಿಗಳ ಹೆಸರಿನ ಮೇಲೆ ಸಿನಿಮಾ ಆಗುವ ಟ್ರೆಂಡ್ ಸ್ಯಾಂಡಲ್ವುಡ್ನಲ್ಲಿ ಇದೆ. ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಇದೀಗ ಸಿನಿಮಾ ಆಗುತ್ತಿದೆ ಎನ್ನಲಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಎರಡು ಟೈಟಲ್ ರಿಜಿಸ್ಟರ್ ಆಗೋದಿಕ್ಕೆ ಸಜ್ಜಾಗಿದೆ.
ಸ್ಯಾಂಡಲ್ವುಡ್ನಲ್ಲಿ ಸಿಡಿ ಲೇಡಿ ಹಾಗೂ ಸಿಡಿ ಗ್ಯಾಂಗ್ ಹೆಸರಲ್ಲಿ ಬರುತ್ತಾ ಸಿನಿಮಾ? - CD Gang
ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ಬ್ಯಾನರ್ನಲ್ಲಿ ಸಿಡಿ ಲೇಡಿ ಹಾಗೂ ಸಿಡಿ ಗ್ಯಾಂಗ್ ಎಂಬ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಲು ಫಿಲ್ಮ್ ಚೇಂಬರ್ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಅರ್ಜಿ ಹಾಕಿದ್ದಾರೆ.
ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಹೇಳುವ ಪ್ರಕಾರ, ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ಬ್ಯಾನರ್ನಲ್ಲಿ ಸಿಡಿ ಲೇಡಿ ಹಾಗೂ ಸಿಡಿ ಗ್ಯಾಂಗ್ ಎಂಬ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಲು ಫಿಲ್ಮ್ ಚೇಂಬರ್ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಅರ್ಜಿ ಹಾಕಿದ್ದಾರೆ. ಆದರೆ ಫಿಲ್ಮ್ ಚೇಂಬರ್ ಟೈಟಲ್ ಕಮಿಟಿ ಈ ಟೈಟಲ್ ಓಕೆ ಮಾಡಿಲ್ಲ. ಇದರ ಬಗ್ಗೆ ಟೈಟಲ್ ಕಮಿಟಿಯಲ್ಲಿ ಚರ್ಚೆಸಿ ಈ ಟೈಟಲ್ ಕೊಡಬೇಕಾ ಬೇಡವಾ ಎಂಬ ಚರ್ಚೆ ಆಗಲಿದೆ ಅಂತಾರೆ ಉಪಾಧ್ಯಕ್ಷ ಉಮೇಶ್ ಬಣಕಾರ್.
ಮಾರ್ಚ್ 2ರಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವೈರಲ್ ಆಗಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಇದೀಗ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸುತ್ತಿದೆ. ಆದರೆ ಇದಕ್ಕೆ ಫಿಲ್ಮ್ ಚೆಂಬರ್ ಟೈಟಲ್ ಕಮಿಟಿ ಈ ಟೈಟಲ್ ಓಕೆ ಮಾಡುತ್ತಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.