ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಯು ಪ್ರತಿಷ್ಠಿತ ಶ್ವಾನ ತಳಿ ಮಾಲೀಕ ಸತೀಶ್ ಕ್ಯಾಡಬೋಮ್ಸ್ ಗೆ ನೋಟಿಸ್ ನೀಡಿರುವುದರಿಂದ ಅವರಿಂದು ವಿಚಾರಣೆಗೆ ಹಾಜರಾಗಿದ್ದಾರೆ.
ಸ್ಯಾಂಡಲ್ವುಡ್ಗೆ ಡ್ರಗ್ಸ್ ಲಿಂಕ್ ಆರೋಪ ಪ್ರಕರಣ.. ವಿಚಾರಣೆಗೆ ಹಾಜರಾದ ಕೋಟಿ ರೂ. 'ನಾಯಿ' ಒಡೆಯ - Satish Kadaboms
ಸ್ಯಾಂಡಲ್ವುಡ್ಗೆ ಮಾದಕ ವಸ್ತು ನಂಟು ಆರೋಪ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪ್ರತಿಷ್ಠಿತ ಶ್ವಾನ ತಳಿ ಮಾಲೀಕ ಸತೀಶ್ ಕ್ಯಾಡಬೋಮ್ಸ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ಸತೀಶ್ ಕ್ಯಾಡಬೋಮ್ಸ್, ನಟಿ ಸಂಜನಾ, ರಾಹುಲ್ ಟೀಂ ಹಾಗೆಯೆ ನಟಿ ರಾಗಿಣಿ ಟೀಂ ಜೊತೆ ಮಸ್ತ್-ಮಸ್ತ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ಡ್ರಗ್ಸ್ ಕೇಸ್ ನಲ್ಲಿ ಜೈಲು ಪಾಲಾಗಿರುವ ಆರೋಪಿಗಳ ಜೊತೆ ನಿರಂತರ ಸಂಪರ್ಕ ಹೊಂದಿರುವ ವಿಚಾರ ಸಿಸಿಬಿ ತನಿಖೆ ವೇಳೆ ಬಯಲಾಗಿದೆ ಎಂದು ತಿಳಿದುಬಂದಿದೆ.
ಪೇಜ್-3 ಪಾರ್ಟಿಗಳಲ್ಲಿ ಡ್ರಗ್ಸ್ ವ್ಯವಹಾರ ಮಾಡುವ ಆರೋಪಿಗಳ ಜೊತೆ ಭಾಗಿಯಾದ ಶಂಕೆ ಹಿನ್ನೆಲೆ ಪೆಡ್ಲರ್ಸ್ ಕಾಂಟ್ಯಾಕ್ಟ್ ಬಗ್ಗೆ ಮಾಹಿತಿಗೆ ಸಿಸಿಬಿ ನೋಟಿಸ್ ನೀಡಿದ್ದು," ನಿಮಗೂ ಬಂಧಿತ ಪೆಡ್ಲರ್ಸ್ ಗೂ ಸಂಬಂಧವಿದೆಯಾ? ಅಥವಾ ವ್ಯವಹಾರವಿದೆಯಾ?"ಅನ್ನೋದರ ಬಗ್ಗೆ ಸ್ಪಷ್ಟನೆ ಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.