ಕರ್ನಾಟಕ

karnataka

ETV Bharat / sitara

ನಟಿಯನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು..ಸೈಲೆಂಟಾಗಿ ಜೀಪ್ ಹತ್ತಿ ಕುಳಿತ ಸಂಜನಾ - Sandalwood actress Sanjana

ಮಾದಕ ದ್ರವ್ಯ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುಮಾರು 5 ಗಂಟೆಗಳ ಕಾಲ ಸಂಜನಾ ಮನೆಯನ್ನು ಶೋಧಿಸಿದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ನಟಿಯನ್ನು ಸಿಸಿಬಿ ಆಫೀಸಿಗೆ ಕರೆದೊಯ್ದಿದ್ದಾರೆ.

Sanjana for interrogation
ಸಂಜನಾ

By

Published : Sep 8, 2020, 11:52 AM IST

ಬೆಂಗಳೂರು:ಸ್ಯಾಂಡಲ್​​ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಂ ಬೆಳಗ್ಗೆ ಸಂಜನಾ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಸಂಜನಾ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದಿದ್ದಾರೆ.

ಸಿಸಿಬಿ ಅಧಿಕಾರಿಗಳ ವಶದಲ್ಲಿ ಸಂಜನಾ

ಕಳೆದ ಎರಡು ದಿನಗಳಿಂದ ಮುದ್ದಿನ ಶ್ವಾನಗಳಿಗೆ ಸ್ನಾನ ಮಾಡಿಸುತ್ತಾ, ನಾನು ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿಕೊಂಡು ಯಾವುದೇ ಟೆನ್ಷನ್ ಇಲ್ಲದವರಂತೆ ಕಂಡು ಬಂದ ಸಂಜನಾ ಗಲ್ರಾನಿಗೆ ಇಂದು ಸಿಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸಂಜನಾ ವಾಸಿಸುತ್ತಿದ್ದ ಸಾಯಿತೇಜ ಅಪಾರ್ಟ್​ಮೆಂಟ್ ಮೇಲೆ ಸಿಸಿಬಿ ಅಧಿಕಾರಿಗಳು ಬೆಳಗಿನ ಜಾವ ದಾಳಿ ಮಾಡಿ ಮನೆಯನ್ನು ಶೋಧಿಸಿದ್ದಾರೆ. ಸುಮಾರು 5 ಗಂಟೆಗಳ ಕಾಲ ಶೋಧ ನಡೆಸಿದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಸಂಜನಾ ಅವರನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ.

ಸಂಜನಾ ಅಪಾರ್ಟ್​ಮೆಂಟ್​​ನಲ್ಲಿ ಯಾವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಮನೆ ಒಳಗೆ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡ ಸಂಜನಾ ಹೊರಗೆ ಬಂದ ಕೂಡಲೇ ಹೆಚ್ಚು ಮಾತನಾಡದೆ ಸೈಲೆಂಟ್ ಆಗಿ ಜೀಪ್ ಹತ್ತಿ ಕುಳಿತ್ತದ್ದು ಕಂಡುಬಂತು.

ABOUT THE AUTHOR

...view details