ಕರ್ನಾಟಕ

karnataka

ETV Bharat / sitara

ಕೋಟಿ ಶ್ವಾನದ ಒಡೆಯನಿಗೆ ಸಂಕಷ್ಟ: ಸತೀಶ್ ಕ್ಯಾಡಬೋಮ್ಸ್ ಹಿನ್ನೆಲೆ​ ಜಾಲಾಡಿದ ಸಿಸಿಬಿ - sandalwood drugs allegation case

ಸತೀಶ್ ಕ್ಯಾಡಬೋಮ್ಸ್ ಡಾಗ್ ಬ್ರೀಡರ್ ಅಧ್ಯಕ್ಷನಾಗಿದ್ದು, ನಟಿ ಸಂಜನಾ ಜೊತೆ ಬಹಳ ಆತ್ಮೀಯತೆಯನ್ನ ಹೊಂದಿದ್ದರು. ಹೀಗಾಗಿ ಸಂಜನಾ ಮೊಬೈಲ್ ರಿಟ್ರೈವ್ ಮಾಡಿದಾಗ ದೊರೆತ ಫೋಟೋ ಆಧಾರದ ಮೇಲೆ ಈತನನ್ನ ವಿಚಾರಣೆಗೆ ಕರೆಸಲಾಗಿತ್ತು. ವಿಚಾರಣೆ ಮುಗಿಸಿ ಹೊರಬಂದು, ಕೇವಲ ಮಾಹಿತಿಗಷ್ಟೇ ಕರೆದಿದ್ದಾರೆ ಎಂದು ಸತೀಶ್ ಮಾಧ್ಯಮದವರಿಗೆ ಹೇಳಿದ್ದಾರೆ. ಆದ್ರೆ ಇವರ ಅಸಲಿ ಕಥೆಯೇ ಬೇರೆ ಇದೆ.

CCB collects information Satish Cadaboms drugs case
ಕೋಟಿ ಶ್ವಾನದ ಒಡೆಯನಿಗೆ ಸಂಕಷ್ಟ, ಸತೀಶ್ ಕ್ಯಾಡಬೋಮ್ಸ್ ಹಿನ್ನೆಲೆ ಕಲೆಹಾಕಿದ ಸಿಸಿಬಿ

By

Published : Sep 23, 2020, 10:01 AM IST

ಬೆಂಗಳೂರು:ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಕೋಟಿ ಶ್ವಾನದ ಒಡೆಯನಿಗೆ ಸಂಕಷ್ಟ ಶುರುವಾಗಿದೆ. ನಿನ್ನೆ ಸಿಸಿಬಿ‌ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದರು. ವಿಚಾರಣೆ ವೇಳೆ ಸಂಜನಾ, ರಾಹುಲ್, ರಾಗಿಣಿಯ ಜೊತೆಗೆ ನಂಟು ಇರುವ ಬಗ್ಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಕೋಟಿ ಶ್ವಾನದ ಒಡೆಯನಿಗೆ ಸಂಕಷ್ಟ, ಸತೀಶ್ ಕ್ಯಾಡಬೋಮ್ಸ್ ಹಿನ್ನೆಲೆ ಕಲೆಹಾಕಿದ ಸಿಸಿಬಿ

ಸತೀಶ್ ಕ್ಯಾಡಬೋಮ್ಸ್ ಡಾಗ್ ಬ್ರೀಡರ್ ಅಧ್ಯಕ್ಷನಾಗಿದ್ದು, ನಟಿ ಸಂಜನಾ ಜೊತೆ ಬಹಳ ಆತ್ಮೀಯತೆಯನ್ನ ಹೊಂದಿದ್ದರು. ಹೀಗಾಗಿ ಸಂಜನಾ ಮೊಬೈಲ್ ರಿಟ್ರೈವ್​ ಮಾಡಿ ಫೋಟೋ ಆಧಾರದ ಮೇಲೆ ಈತನನ್ನ ಕರೆಸಲಾಗಿತ್ತು. ವಿಚಾರಣೆ ಮುಗಿಸಿ ಹೊರಬಂದು, ಕೇವಲ ಮಾಹಿತಿಗಷ್ಟೇ ಕರೆದಿದ್ದಾರೆ ಎಂದು ಸತೀಶ್ ಮಾಧ್ಯಮದವರ ಎದುರು ಹೇಳಿದ್ದರು.

ಸತೀಶ್ ಅಸಲಿ ಕಹಾನಿ ಈಟಿವಿ ಭಾರತಗೆ ಲಭ್ಯ:

ಸತೀಶ್ ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದು, ಡಾಗ್ ಸತೀಶ್ ಎಂದೇ ಫೇಮಸ್ ಆಗಿದ್ದಾನೆ. ಕೋಟಿ ರೂ. ಬೆಲೆ ಬಾಳುವ 23 ವಿವಿಧ ತಳಿ ಶ್ವಾನಗಳಿವೆ. ಈವರೆಗೆ 150 ಡಾಗ್ಸ್ ಗಳನ್ನ ಸಾಕಿದ್ದು, ಅದರಲ್ಲಿ ಸೆಲೆಬ್ರಿಟಿಸ್​ಗೆ ಟಿಬೇಟಿಯನ್ ಮಸ್ಟೀಫ್, ಅಲಸ್ಕನ್ ಮಲಮ್ಯೂಟ್, ಕೊರಿಯನ್ ಮಸ್ಟೀಫ್, ಗ್ರೇಟ್ ಡೇನ್, ಅಫ್ಘಾನ್ ಹೌಂಡ್, ಪಿಟ್ ಬುಲ್, ಬುಲ್ ಡಾಗ್ಹಸ್ಕಿ, ಶಿಟ್ಸು, ಪೊಮೋರಿಯನ್ ಟಾಯ್, ಪೂಡಲ್, ಅಮೆರಿಕನ್ ಬುಲ್ಲಿ, ಸೇಂಟ್ ಬೆರ್ನಾರ್ಡ್, ನೆಪೋಲಿಟನ್ ಮಾಸ್ಟಿಫ್, ನ್ಯೂ ಫೌಂಡ್ ಲ್ಯಾಂಡ್, ಡಾಬರ್​ಮನ್​, ಜರ್ಮನ್ ಶೆಫರ್ಡ್, ಕಾಕರ್ ಸ್ಪೇನಿಲ್, ಬೀಗಲ್, ಮುಧೋಳ್ ಹೌಂಡ್, ರಾಜಪಾಲ್ಯಂ, ಚೌಚೌ, ಪಗ್ ಇವು ಸತೀಶ್​ ಸಾಕಿರೋ ವಿವಿಧ ತಳಿಯ ಶ್ವಾನಗಳನ್ನು ತಾರೆಯರಿಗೆ ಕೊಟ್ಟಿದ್ದಾರೆ.

ಕೋಟಿ ಶ್ವಾನದ ಒಡೆಯನಿಗೆ ಸಂಕಷ್ಟ, ಸತೀಶ್ ಕ್ಯಾಡಬೋಮ್ಸ್ ಹಿನ್ನೆಲೆ ಕಲೆಹಾಕಿದ ಸಿಸಿಬಿ

ನಾಯಿ ಪ್ರೇಮಿ ಆಗಿರುವ ಸತೀಶ್​ ಇದನ್ನೇ ಬ್ಯುಸಿನೆಸ್ ಮಾಡಿಕೊಂಡು ಕಾಂಟ್ರ್ಯಾಕ್ಟ್ ಬೇಸ್ ಮೇಲೆ ನಾಯಿ ಕೊಟ್ಟು ಇದರಿಂದ ಲಕ್ಷ ಲಕ್ಷ ಹಣ ಸಂಪಾದಿಸಿದ್ದಾರೆ. ಇದರ ಜೊತೆಗೆ ಸೈಲೆಂಟಾಗಿ ಮೋಜು ಮಸ್ತಿಯನ್ನ ಮಾಡಿದ್ದಾರೆ. ಸಂಜನಾಗೆ ನಾಯಿ ಕೊಡುವ ನೆಪದಲ್ಲಿ ಸತೀಶ್​ ಪರಿಚಯವಾಗಿತ್ತು. ಅಲ್ಲಿಂದ ಸಂಜನಾಗೆ ಅತಿ ಹೆಚ್ಚು ಆಪ್ತ ಆಗಿದ್ದರು ಎನ್ನಲಾಗ್ತಿದೆ. ಆಕೆ ಅಟೆಂಡ್ ಮಾಡುವ ಎಲ್ಲಾ ಪಾರ್ಟಿಯಲ್ಲೂ ಸತೀಶ್ ಇರುತ್ತಿದ್ದರು. ಅಷ್ಟೇ ಅಲ್ಲ, ರಾಹುಲ್ ಜೊತೆ ಒಡನಾಟ ಹೆಚ್ಚಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಪಾರ್ಟಿ ಎಂದರೆ ಏನು..? ಏನೆಲ್ಲ ಮಾಡಬೇಕು ಎಂಬುದನ್ನ ಅರಿತಿದ್ದ ಸತೀಶ್​ ತಾನು ಮದ್ಯ ಸೇವಿಸಲ್ಲ, ಸಿಗರೇಟ್ ಸೇದಲ್ಲ ಅಂತಿದ್ದವರು, ನಶೆ ಪಾರ್ಟಿಯಲ್ಲಿ ಡ್ರಿಂಕ್ಸ್ ಮಾಡ್ತಿದ್ದರು. ಅಲ್ಲದೆ ಡ್ರಗ್ಸ್ ಪೆಡ್ಲಿಂಗ್ ಗೆ ಸಹಾಯ ಮಾಡಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಡ್ರಗ್ಸ್ ಪೆಡ್ಲರ್ ಆಧಾರದ ಮೇಲೆ ಸಿಸಿಬಿ ನೋಟಿಸ್ ನೀಡಿದ್ದು, ಇದಕ್ಕೆ ಬೇಕಾದ ಕೆಲ ಪ್ರಾಥಮಿಕ ಸಾಕ್ಷಿ ಕಲೆಹಾಕಿದೆ. ಇದರ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಯಾವುದೇ ಸಮಂಜಸ ಹೇಳಿಕೆ ಕೊಡದೆ ತಾನೊಬ್ಬ ಕಾಮನ್ ಮ್ಯಾನ್​, ನಾಯಿ ಮೂಲಕ ಸಂಜನಾ ಪರಿಚಯ. ಅವರ ಬಳಿ ಇರುವ ಸುಲ್ತಾನ್ ಗೆ ನಾನು ಮಾಲೀಕ. ಅದು ಬಿಟ್ಟು ನಾನು ಚೆನ್ನಾಗಿ ನಾನ್​ವೆಜ್ ಮಾಡ್ತೀನಿ. ನಾ ಮಾಡುವ ಅಡುಗೆ ಸಂಜನಾಗೆ ಇಷ್ಟ. ಅದಕ್ಕೆ ಮನೆ ಪಾರ್ಟಿಗೆ ಕರೆಯುತ್ತಿದ್ದರು. ಈ ರೀತಿ ಹೇಳಿಕೆ ಕೊಟ್ಟಿದ್ದು ಸದ್ಯ ಇದನ್ನ ಸಿಸಿಬಿ ಅಧಿಕಾರಿಗಳು ಪರಿಗಣಿಸಿಲ್ಲ.

ಹೀಗಾಗಿ ಸಿಸಿಬಿ ಡಿಸಿಪಿ ರವಿಕುಮಾರ್ ಮುಂದೆ ಸತೀಶ್‌ ಮತ್ತೆ ವಿಚಾರಣೆಗೆ ಹಾಜರಾಗಬೇಕಾದದ್ದು ಅನಿವಾರ್ಯವಾಗಿದೆ. ಇವರು ಕೇವಲ ಸಂಜನಾ ಅಷ್ಟೇ ಅಲ್ಲದೆ ರಾಗಿಣಿಗೂ ಆಪ್ತರಾಗಿದ್ದಾರೆ. ಇದೆಲ್ಲದರ ಮಾಹಿತಿ ಕಲೆಹಾಕಿ ಅಧಿಕಾರಿಗಳು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ABOUT THE AUTHOR

...view details