ಕ್ರಿಯೇಟಿವಿಟಿ ಇತ್ತು ಅಂದ್ರೆ ಚಿತ್ರರಂಗಕ್ಕೆ ಯಾರು ಬೇಕಾದ್ರೂ ಎಂಟ್ರಿ ಕೊಡ್ಬೋದು ಅನ್ನೋದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹೌದು ಈ ಹಿಂದೆ ಸ್ಟಾರ್ ನಟರ ಹಾಗೂ ನಿರ್ದೇಶಕರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ನಿರ್ದೇಶಕರ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ ನಿರ್ದೇಶಕ ಎ.ಪಿ ಅರ್ಜುನ್ಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಸವ ಅಲಿಯಾಸ್ ರಾಮ್.
ತಮ್ಮ ಹೆಸರನ್ನು ರಾಮ್ ಎಂದು ಬದಲಾಯಸಿಕೊಂಡು ಇದೀಗ 'ರಣಬೇಟೆಗಾರ' ಎಂಬ ಥ್ರಿಲ್ಲರ್ ಸಿನಿಮಾವನ್ನು ನಿರ್ದೇಶನ ಮಾಡಲು ಸಿದ್ದರಾಗಿದ್ದಾರೆ. ಸಿನಿಮಾದ ಮುಹೂರ್ತವು ಈಗಾಗಲೇ ನಡೆದಿದ್ದು, ಚಿತ್ರದ ಮುಹೂರ್ತದ ದಿನವೇ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ 'ಆಕಾಶ್', 'ಅರಸು' ಖ್ಯಾತಿಯ ಮಹೇಶ್ ಬಾಬು, ಎ.ಪಿ ಅರ್ಜುನ್ ಹಾಗೂ ನಿರ್ಮಾಪಕ ಅಣಜಿ ನಾಗರಾಜ್ ಆಗಮಿಸಿ ತನ್ನ ಶಿಷ್ಯನ ಹೊಸ ಸಾಹಸಕ್ಕೆ ಸಾಥ್ ನೀಡಿದರು.