ಸ್ಯಾಂಡವುಡ್ನಲ್ಲಿ ಬಜಾರ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರೋ ಯುವ ನಟ ಧನ್ವೀರ್ ಹಾಗೂ ಕಿಸ್ ಸಿನಿಮಾ ಬ್ಯೂಟಿ ಶ್ರೀಲೀಲಾ ನಟನೆಯ ಬೈಟು ಲವ್ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಅಲೆಮಾರಿ, ಕಾಲೇಜ್ ಕುಮಾರ ಸಿನಿಮಾಗಳನ್ನು ನಿರ್ದೇಶಿಸಿರುವ ಹರಿ ಸಂತೋಷ್ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಚಿತ್ರ ಪೋಸ್ಟರ್, ಟೀಸರ್ ಹಾಗೂ ಹಾಡುಗಳ ಮೂಲಕವೇ ನಿರೀಕ್ಷೆ ಹುಟ್ಟಿಸಿದೆ. ನಟಿ ಶ್ರೀಲೀಲಾ ಮೊದಲ ಬಾರಿಗೆ ತಮ್ಮ ಸಿನಿಮಾಗೆ ಡಬ್ ಮಾಡಿದ್ದಾರೆ. ಡಬ್ಬಿಂಗ್ ಸಮಯದಲ್ಲಿ ಶ್ರೀಲೀಲಾ ಸಖತ್ ಎಂಜಾಯ್ ಮಾಡಿಕೊಂಡು ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.
ನಾನು ಇದೇ ಮೊದಲ ಬಾರಿಗೆ ಡಬ್ ಮಾಡಿದ್ದೇನೆ. ನಾನು ನಟಿಸಿದ ಸಿನಿಮಾಗಳಲ್ಲಿ ಬೇರೆಯವರ ಧ್ವನಿ ಇದ್ದರೆ ಅದು ಸೂಕ್ತ ಎನಿಸುವುದಿಲ್ಲ. ನಟನೆ ಮಾಡುವಾಗ ನಾನು ಎಲ್ಲಿ ಒತ್ತು ಕೊಟ್ಟಿರುತ್ತೇನೋ ಡಬ್ ಮಾಡಿದವರು ಅಲ್ಲಿ ಒತ್ತು ಕೊಟ್ಟಿರುವುದಿಲ್ಲ. ಹೀಗಾಗಿ, ಈ ಸಿನಿಮಾಗೆ ನಾನೇ ಧ್ವನಿ ನೀಡಿದ್ದೇನೆ. ನಮ್ಮ ಸಿನಿಮಾ ನೋಡಿ ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ.