ಕರ್ನಾಟಕ

karnataka

ETV Bharat / sitara

ಸಿನಿಮಾ ಪ್ರಚಾರದಲ್ಲಿ ಹೊಸ ಹೆಜ್ಜೆಯಿಟ್ಟ ಬೈ ಟು ಲವ್ ಚಿತ್ರತಂಡ: ಮೈಟ್ರೋದಲ್ಲಿ ಲೀಲು ಮತ್ತು ಬಾಲು ಸಂಚಾರ - ಮೈಟ್ರೋದಲ್ಲಿ ಬೈ ಟು ಲವ್ ಸಿನಿಮಾ ಪ್ರಚಾರ

ಬೈ ಟು ಲವ್​ ಚಿತ್ರತಂಡ ಇಂದು ಮೆಟ್ರೋದಲ್ಲಿ ಪ್ರಯಾಣಿಸಿ ವಿಭಿನ್ನವಾಗಿ ಸಿನಿಮಾದ ಪ್ರಚಾರ ಮಾಡಿದೆ. ನಾಳೆ ರಾಜ್ಯಾದ್ಯಂತ ನಟ ಧನ್ವೀರ್ ಹಾಗೂ ನಟಿ ಶ್ರೀಲೀಲಾ ಅಭಿನಯದ ಬಹು ನಿರೀಕ್ಷಿತ ಬೈ ಟು ಲವ್​ ಸಿನಿಮಾ ಬಿಡುಗಡೆಯಾಗಲಿದೆ.

By two love movie team travelled in metro for their film promotion
ಮೈಟ್ರೋದಲ್ಲಿ ಬೈ ಟು ಲವ್ ಚಿತ್ರತಂಡದಿಂದ ಪ್ರಚಾರ

By

Published : Feb 17, 2022, 4:09 PM IST

ಬಜಾರ್ ಸಿನಿಮಾದಲ್ಲಿ ರಗಡ್ ಲುಕ್​​​ನಲ್ಲಿ ಮಿಂಚಿ ಪ್ರೇಕ್ಷಕರ ಮನ ಗೆದ್ದಿರುವ ನಟ ಧನ್ವೀರ್, ಬೈ ಟು ಲವ್ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಬೈ ಟು ಲವ್ ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿಯಿದ್ದು, ಚಿತ್ರತಂಡ ವಿಭಿನ್ನವಾಗಿ ಸಿನಿಮಾದ ಪ್ರಚಾರ ಮಾಡುವ ಮೂಲಕ ಗಮನ ಸೆಳೆದಿದೆ.

ಮೈಟ್ರೋದಲ್ಲಿ ಬೈ ಟು ಲವ್ ಚಿತ್ರತಂಡದಿಂದ ಪ್ರಚಾರ

ಟ್ರೈಲರ್ ಹಾಗೂ ಹಾಡುಗಳಿಂದ ಬೈ ಟು ಲವ್ ಸಿನಿಮಾ ಸ್ಯಾಂಡಲ್​​​ವುಡ್ ಮಾತ್ರವಲ್ಲದೇ ಪರಭಾಷೆಯಲ್ಲೂ ಟಾಕ್ ಆಗುತ್ತಿದ್ದು, ಚಿತ್ರತಂಡ ಸಿನಿಮಾ ಪ್ರಚಾರದಲ್ಲೂ ಹೊಸ ಹೆಜ್ಜೆ ಇಟ್ಟಿದೆ. ಆಟೋ, ಬಸ್, ಕಾರುಗಳ ಮೇಲೆ ಪೋಸ್ಟರ್​​​ಗಳನ್ನು ಹಾಕಿ ಸಿನಿಮಾದ ಪ್ರಚಾರ ಮಾಡುವುದು ಸಾಮಾನ್ಯ. ಆದರೆ, ಬೈಟ್​ ಟು ಲವ್​ ಚಿತ್ರತಂಡ ಬಿಎಮ್​ಆರ್​ಸಿಎಲ್ ಸಹಾಯದೊಂದಿಗೆ ಇದೇ ಮೊದಲ ಬಾರಿಗೆ ಮೆಟ್ರೋ ರೈಲಿನಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡು ಪ್ರಚಾರ ಮಾಡುತ್ತಿದೆ.

ಮೈಟ್ರೋದಲ್ಲಿ ಬೈ ಟು ಲವ್ ಚಿತ್ರತಂಡದಿಂದ ಪ್ರಚಾರ

ನಿರ್ದೇಶಕ ಹರಿ ಸಂತೋಷ್, ನಟ ಧನ್ವೀರ್, ನಟಿ ಶ್ರೀಲೀಲಾ ಮೆಟ್ರೋ ರೈಲಿನಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರ ಜೊತೆಗೆ ತಮ್ಮ ಸಿನಿಮಾದ ಬಗ್ಗೆ ಅಭಿಪ್ರಾಯ ಕಲೆ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ. ಮತ್ತೊಂದು ವಿಚಾರ ಅಂದ್ರೆ ಮೆಟ್ರೋ ರೈಲಿನಲ್ಲಿ ಬೈ ಟು ಲವ್ ಬ್ರ್ಯಾಂಡಿಂಗ್ ಕೂಡ ಮಾಡಲಾಗಿದೆ.

ಮೈಟ್ರೋದಲ್ಲಿ ಬೈ ಟು ಲವ್ ಚಿತ್ರತಂಡದಿಂದ ಪ್ರಚಾರ

ಚಿತ್ರದಲ್ಲಿ ಧನ್ವೀರ್‌ ದಾವಣಗೆರೆಯಿಂದ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಯುವಕನಾಗಿ ನಟಿಸಿದ್ದು, ತುಂಬಾ ಸುಲಭವಾಗಿ ಆರಾಮಾಗಿ ಬದುಕನ್ನು ಸಾಗಿಸುವ ಹುಡುಗ. ಶ್ರೀಲೀಲಾ ಮಲೆನಾಡಿನ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಎಲ್ಲವನ್ನೂ ಪ್ಲಾನಿಂಗ್‌ ಪ್ರಕಾರ ಮಾಡುತ್ತಿರುತ್ತಾಳೆ. ಇವರಿಬ್ಬರೂ ಒಂದಾದರೆ ಏನಾಗುತ್ತದೆ ಎಂಬುದೇ ಬೈ ಟು ಲವ್ ಸಿನಿಮಾದ ಒನ್ ಲೈನ್ ಸ್ಟೋರಿ.

ನಾಳೆಯಿಂದ ರಾಜ್ಯಾದ್ಯಂತ ಬೈ ಟು ಲವ್​ ಸಿನಿಮಾ ಬಿಡುಗಡೆ

ಅಲೆಮಾರಿ, ಡವ್, ಕಾಲೇಜ್ ಕುಮಾರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ಹರಿ ಸಂತೋಷ್ ಬೈ ಟು ಲವ್ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ. ಕನ್ನಡದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ನಡಿ ನಿಶಾ ವೆಂಕಟ್ ಕೊನಂಕಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಫೆಬ್ರವರಿ. 18ರಂದು ರಾಜ್ಯಾದ್ಯಂತ ಬೈ ಟು ಲವ್ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ 'ನೀನೇ ರಾಜಕುಮಾರ' ಬಯೋಗ್ರಫಿ

ABOUT THE AUTHOR

...view details