ಕರ್ನಾಟಕ

karnataka

ETV Bharat / sitara

ಯುಗಾದಿಗೆ 'ಬೈ ಟೂ ಲವ್ ' ಮೊದಲ ಪೋಸ್ಟರ್ ರಿವೀಲ್ ಮಾಡಿದ ಚಿತ್ರ ತಂಡ - ಬೈ ಟೂ ಲವ್ ಸಿನಿಮಾ ಪೋಸ್ಟರ್ ರಿವೀಲ್

ವಿಭಿನ್ನ ಟೈಟಲ್​ನಿಂದ ಗಮನ ಸೆಳೆದಿರುವ ಸ್ಯಾಂಡಲ್​ವುಡ್​ನ 'ಬೈ ಟೂ ಲವ್' ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು, ಯುಗಾದಿ ಹಬ್ಬಕ್ಕೆ ಶುಭಕೋರುವ ಮೂಲಕ ಚಿತ್ರ ತಂಡ ಪೋಸ್ಟರ್​ ರಿವೀಲ್ ಮಾಡಿದೆ.

By Two Love Cinema first poster revealed
ಬೈ ಟೂ ಲವ್ ಮೊದಲ ಪೋಸ್ಟರ್ ರಿವೀ

By

Published : Apr 12, 2021, 9:19 PM IST

'ಬೈ ಟೂ ಲವ್' ಕನ್ನಡ ಚಿತ್ರರಂಗದಲ್ಲಿ ಟೈಟಲ್​ನಿಂದಲೇ ಸದ್ದು ಮಾಡ್ತಿರುವ ಚಿತ್ರ. ಬಜಾರ್ ಖ್ಯಾತಿಯ ಧನ್ವೀರ್ ಲವ್ವರ್​ ಬಾಯ್ ಆಗಿ ಕಾಣಿಸಿಕೊಳ್ಳುತ್ತಿರುವ, ಈ ಚಿತ್ರದ ಫಸ್ಟ್ ಲುಕ್ ಚಿತ್ರ ತಂಡ ರಿವೀಲ್ ಮಾಡಿದೆ.

ಯುಗಾದಿ ಹಬ್ಬಕ್ಕೆ ನಿರ್ದೇಶಕ ಹರಿ ಸಂತೋಷ್ ಬೈ ಟೂ ಲವ್ ಚಿತ್ರದ ಮೊದಲ ಪೋಸ್ಟರ್​ ಅನಾವರಣ ಮಾಡಿದ್ದಾರೆ. ಚಿತ್ರದಲ್ಲಿ ಧನ್ವೀರ್​ಗೆ ಜೋಡಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಧನ್ವೀರ್- ಶ್ರೀಲೀಲಾಗೆ ತಾಳಿ ಕಟ್ಟುವ ಸನ್ನಿವೇಶದ ಜೊತೆಗೆ, ಶ್ರೀಲೀಲಾ ಮಡಿಲಲ್ಲಿ ಮಗು ಕುರಿಸಿಕೊಂಡು, ತಾಳಿ ಕಟ್ಟಿಸಿಕೊಳ್ಳುವುದನ್ನು ಪೋಸ್ಟರ್​ನಲ್ಲಿ ಕಾಣಬಹುದು.

ಧನ್ವೀರ್ ಮತ್ತು ಶ್ರೀಲೀಲಾ ಅಲ್ಲದೇ, ಸಾಧುಕೋಕಿಲ, ಅಚ್ಯುತಕುಮಾರ್, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಬೈ ಟೂ ಲವ್ ಚಿತ್ರದಲ್ಲಿದೆ. ನಿರ್ದೇಶಕ ಹರಿ ಸಂತೋಷ್ ನಿರ್ದೇಶನದ 9 ನೇ ಚಿತ್ರ ಇದಾಗಿದ್ದು, ಕೆ.ವಿ.ಎನ್ ಪ್ರೊಡಕ್ಷನ್​ ಲಾಂಛನದಲ್ಲಿ ನಿಶಾ ವೆಂಕಟ್ ಹಾಗೂ ಸುಪ್ರೀತ್ ಬೈಟ್​ ಟೂ ಲವ್​ ನಿರ್ಮಾಣ ಮಾಡುತ್ತಿದ್ದಾರೆ.

ಓದಿ: ಫಾರಂ ಹೌಸ್​​​​ನಲ್ಲಿ ಕೃಷಿ ಮಾಡೋದಕ್ಕೆ ಹೊರಟ ರಾಕಿ ಬಾಯ್!

ಬೈ ಟೂ ಲವ್ ಕೆ.ವಿ.ಎನ್ ಪ್ರೊಡಕ್ಷನ್ ನಿರ್ಮಾಣದ ಮೂರನೇ ಚಿತ್ರ ಆಗಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.

ABOUT THE AUTHOR

...view details