ಕರ್ನಾಟಕ

karnataka

ETV Bharat / sitara

ಯುವ ಜನತೆಗೆ ಸ್ಪೂರ್ತಿಯಾದ 'ಸಂಚಾರಿ ವಿಜಯ್'​​ ಅಂಗಾಂಗ ದಾನ ನಿರ್ಧಾರ..!

ನಟ ಸಂಚಾರಿ ವಿಜಯ್‌ ರಿಂದ ಸ್ಫೂರ್ತಿ ಪಡೆದ ನೂರಾರು ಜನರು ತಮ್ಮ ಅಂಗಾಂಗವನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಜೀವಸಾರ್ಥಕತೆ ಟ್ರಸ್ಟ್ ವೆಬ್ ಸೈಟ್​ನ ಆನ್ ಲೈನ್ ಪೋರ್ಟಲ್​ನಲ್ಲಿ ಸರಿ ಸುಮಾರು 230 ಮಂದಿ ತಮ್ಮ ಆರ್ಗನ್‌ ಪ್ಲೆಜ್‌, ದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.

by-the-inspire-of-sanchari-vijay-youth-donating-organs
ಸಂಚಾರಿ ವಿಜಯ್

By

Published : Jul 17, 2021, 7:56 PM IST

ರಾಷ್ಟ್ರ ಪ್ರಶಸ್ತಿ ವಿಜೇತ ನಟ‌ ಸಂಚಾರಿ ವಿಜಯ್ ಬದುಕಿದ್ದರೆ ಇಂದು ತಮ್ಮ ಅಭಿಮಾನಿಗಳ ಜೊತೆ 39ನೇ ವರ್ಷದ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದರು. ಕಡಿಮೆ ವಯಸ್ಸಿಗೆ ಜನರ ಮನಸ್ಸಿನಲ್ಲಿ ಅಚ್ಚಳಿಯದ ಸಾಧನೆ ಮಾಡಿ, ಬಾರದ ಲೋಕಕ್ಕೆ ಸಂಚಾರ ಬೆಳೆಸಿರುವ ವಿಜಯ್ ಅಂಗದಾನ ಮಾಡುವ ಮೂಲಕ ಯುವಜನತೆಗೆ ಪ್ರೇರಣೆಯಾಗಿದ್ದಾರೆ.

ವಿಜಯ್‌ ರಿಂದ ಸ್ಫೂರ್ತಿ ಪಡೆದ ನೂರಾರು ಜನರು ತಮ್ಮ ಅಂಗಾಂಗವನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ರಾಜ್ಯ ಸರ್ಕಾರದ ಜೀವಸಾರ್ಥಕತೆ ಟ್ರಸ್ಟ್ ವೆಬ್ ಸೈಟ್​ನ ಆನ್ ಲೈನ್ ಪೋರ್ಟಲ್​ನಲ್ಲಿ ಸರಿ ಸುಮಾರು 230 ಮಂದಿ ತಮ್ಮ ಆರ್ಗನ್‌ ಪ್ಲೆಜ್‌, ದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಟ್ರಸ್ಟ್ ಮುಖ್ಯಸ್ಥರು ತಿಳಿಸಿದ್ದಾರೆ.

ಸಂಚಾರಿ ವಿಜಯ್​ ಅಂಗಾಂಗ ದಾನದ ಸರ್ಟಿಫಿಕೇಟ್​​ ನೀಡಿದ ಜೀವಸಾರ್ಥಕತೆ ಟ್ರಸ್ಟ್

ವಿಜಯ್‌ನ ಆ ಒಂದು ನಿರ್ಧಾರ ಇಂದು ನೂರಾರು ಜನರಿಗೆ ಅಂಗಾಂಗ ದಾನ ಮಾಡಲು ಸ್ಫೂರ್ತಿಯಾಗಿದೆ. ಮತ್ತೊಂದು ಕಡೆ ಜೀವ ಸಾರ್ಥಕತೆ ಸಿಬ್ಬಂದಿ ಊರುಗಳಿಗೆ ತೆರಳಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುತ್ತಾರೆ. ಜನರು ಸಹ ಅಂಗಾಂಗ ಮಾಡುವ ವಾಗ್ದಾನ ಮಾಡುತ್ತಿದ್ದಾರೆ ಅನ್ನೋದು ಜೀವಸಾರ್ಥಕತೆ ಟ್ರಸ್ಟ್ ಸದಸ್ಯರ ಮಾತು.

ಸಂಚಾರಿ ವಿಜಯ್ ಅಂಗಾಂಗ ದಾನ ಮಾಡಿರೋ ಹಿನ್ನೆಲೆಯಲ್ಲಿ, ಕೆಲ ದಿನಗಳ ಹಿಂದೆ ಅಂಗಾಂಗ ದಾನದ ಸರ್ಟಿಫಿಕೇಟ್​ ಅನ್ನು ​ ಅವ್ರ ಕುಟುಂಬಕ್ಕೆ ನೀಡಿ ಗೌರವಿಸಿದೆ.

ABOUT THE AUTHOR

...view details