ಕರ್ನಾಟಕ

karnataka

ETV Bharat / sitara

ಬುಲೆಟ್ ಸವಾರಿ ನಿಲ್ಲಿಸಿ ಮಣ್ಣಲ್ಲಿ ಮಣ್ಣಾದ ಹಾಸ್ಯ ನಟ ಬುಲೆಟ್ ಪ್ರಕಾಶ್ - ಬುಲೆಟ್​ ಪ್ರಕಾಶ್​ ನಿಧನ ಸುದ್ದಿ

25 ವರ್ಷಗಳಿಂದ ಎಲ್ಲರನ್ನೂ ನಕ್ಕು ನಲಿಸುತ್ತಾ ಬಂದಿದ್ದ ಹಾಸ್ಯನಟ ಬುಲೆಟ್​ ಪ್ರಕಾಶ್​ ಇಂದು ಮಣ್ಣಲ್ಲಿ ಮಣ್ಣಾಗುವ ಮೂಲಕ ತಮ್ಮ ಸಿನಿಜರ್ನಿಗೆ ಗುಡ್​​ಬೈ ಹೇಳಿದ್ದಾರೆ.

bullet praksh funeral
ಬುಲೆಟ್ ಪ್ರಕಾಶ್ ಅಂತ್ಯಸಂಸ್ಕಾರ

By

Published : Apr 7, 2020, 2:06 PM IST

Updated : Apr 7, 2020, 3:04 PM IST

ಬೆಂಗಳೂರು: ಈ ಲೋಕದ ಬುಲೆಟ್ ಸವಾರಿ ನಿಲ್ಲಿಸಿ ಮತ್ತೊಂದು ಲೋಕಕ್ಕೆ ಪ್ರಯಾಣ ಬೆಳೆಸಿದ ಬುಲೆಟ್ ಪ್ರಕಾಶ್ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನ ಇಂದು ಮಡಿವಾಳ ಸಂಪ್ರದಾಯದಂತೆ ನಡೆದಿದೆ. ಕುಟುಂಬಸ್ಥರು ದುರಂತ ನಾಯಕನಿಗೆ ಅಂತಿಮ ವಿದಾಯ ಹೇಳಿದ್ದಾರೆ.

ಬಹು ಅಂಗಾಗ ವೈಫಲ್ಯದಿಂದ ಬಳಲಿ ಕೊನೆಯುಸಿರೆಳೆದ ಹಾಸ್ಯನಟ ಬುಲೆಟ್ ಪ್ರಕಾಶ್ ಅಂತ್ಯ ಸಂಸ್ಕಾರವನ್ನು ಹೆಬ್ಬಾಳದ ಚಿರ ಶಾಂತಿಧಾಮದಲ್ಲಿ ಪೊಲೀಸರ ನೇತೃತ್ವದಲ್ಲಿ ಕುಟುಂಬದವರು ನೆರವೇರಿಸಿದ್ದಾರೆ. ಜನರ ಗುಂಪು ಹೆಚ್ಚಾಗುತ್ತೆ ಅನ್ನೋ ಕಾರಣಕ್ಕೆ ಚಿತಾಗಾರದ ಹೊರಗಡೆಯೆ ಜನರನ್ನು ಪೊಲೀಸರು ನಿಯಂತ್ರಿಸಿದರು. ಅಂತಿಮವಾಗಿ ಕೇವಲ ಬುಲೆಟ್ ಪ್ರಕಾಶ್ ಕುಂಟುಂಬಸ್ಥರು ಅಂತಿಮ ವಿಧಿವಿಧಾನ ಪೂರೈಸಿದ್ರು.

ಇಷ್ಟು ದಿನ ತೆರೆ ಮೇಲೆ ಅಭಿಮಾನಿಗಳನ್ನು ನಕ್ಕು ನಲಿಸಿದ್ದ ಬುಲೆಟ್ ಪ್ರಕಾಶ್, ಇಂದು ಮಾತ್ರ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿ ತಮ್ಮ 25 ವರ್ಷದ ಸಿನಿ ಜರ್ನಿಗೆ ಫುಲ್ ಸ್ಟಾಪ್ ಇಟ್ಟು ಮಣ್ಣಲ್ಲಿ ಮಣ್ಣಾದರು.

Last Updated : Apr 7, 2020, 3:04 PM IST

ABOUT THE AUTHOR

...view details