ಕರ್ನಾಟಕ

karnataka

ETV Bharat / sitara

ರಾಜಕೀಯದಲ್ಲಿ ಪ್ರೌಢತೆ ಬೆಳೆಸಿಕೊಳ್ಳಿ: ರಮ್ಯಾ ವಿರುದ್ಧ ಬುಲೆಟ್​​​ ಗುಡುಗು - undefined

ಪ್ರಧಾನಿ ಮೋದಿಯನ್ನು ಟೀಕಿಸಿದ್ದ ರಮ್ಯಾ ವಿರುದ್ಧ ಗುಡುಗಿರುವ ಹಾಸ್ಯನಟ ಬುಲೆಟ್ ಪ್ರಕಾಶ್, ವಿಶ್ವವೇ ಮೆಚ್ಚುವ ರಾಜಕೀಯ ನಾಯಕನ ಬಗ್ಗೆ ಕೇವಲವಾಗಿ ಮಾತನಾಡುವುದು ನಿಮಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದ್ದಾರೆ.

ರಮ್ಯಾ, ಬುಲೆಟ್ ಪ್ರಕಾಶ್

By

Published : Apr 30, 2019, 12:27 PM IST

ಪ್ರಧಾನಿ ಮೋದಿ ಹಾಗೂ ಅಡಾಲ್ಫ್ ಹಿಟ್ಲರ್ ಫೋಟೋವನ್ನು ಜೊತೆಗೆ ಸೇರಿಸಿ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿ ಮೋದಿಯನ್ನು ಟೀಕಿಸಿದ್ದ ನಟಿ, ಮಾಜಿ ಸಂಸದೆ ರಮ್ಯಾ ಮೇಲೆ ಬಹಳಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ರಮ್ಯಾ ವಿರುದ್ಧ ಬುಲೆಟ್ ಪ್ರಕಾಶ್​​ ಗುಡುಗು

ಹಾಸ್ಯನಟ ಬುಲೆಟ್ ಪ್ರಕಾಶ್ ಕೂಡಾ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, 'ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ಈ ಬಗ್ಗೆ ನಾಳೆ ವಿಡಿಯೋ ಮೂಲಕ ಉತ್ತರ ಕೊಡುತ್ತೇನೆ' ಎಂದು ಹೇಳಿದ್ದರು. ಅದರಂತೆ ಇಂದು ವಿಡಿಯೋ ಮಾಡಿರುವ ಬುಲೆಟ್ ಪ್ರಕಾಶ್, ರಮ್ಯಾಗೆ ಬುದ್ಧಿ ಹೇಳಿದ್ದಾರೆ. 'ಮೇಡಂ ನೀವು ಒಂದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷದಲ್ಲಿ ಇದ್ದುಕೊಂಡು ನೀವು ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಪಾಕಿಸ್ತಾನ ಸ್ವರ್ಗ ಎಂದು ಹೊಗಳುವ ನಿಮ್ಮಂತವರಿಂದ ನಾವು ಮತ್ತೇನನ್ನು ನಿರೀಕ್ಷಿಸಲು ಸಾಧ್ಯ..?

ಇನ್ನು ಮುಂದಾದರೂ ರಾಜಕೀಯದ ಬಗ್ಗೆ ಪ್ರೌಢತೆ ಬೆಳೆಸಿಕೊಳ್ಳಿ. ಸಮಾಜಕ್ಕೆ ತಪ್ಪು ಸಂದೇಶ ನೀಡಬೇಡಿ. ಇಡೀ ವಿಶ್ವವೇ ಮೋದಿ ಅವರನ್ನು ಗೌರವದಿಂದ ಕಾಣುತ್ತಿದೆ. ಅಂತಹ ನಾಯಕನ ಬಗ್ಗೆ ನೀವು ಹೀಗೆ ಮಾತನಾಡುವುದು ನಿಮಗೆ ಶೋಭೆ ತರುವಂತದ್ದಲ್ಲ. ಇದನ್ನೆಲ್ಲಾ ತಿದ್ದಿಕೊಂಡು ಸ್ವಲ್ಪ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ ಎಂದು ರಮ್ಯಾಗೆ ಬುದ್ಧಿವಾದ ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details