ಕರ್ನಾಟಕ

karnataka

ETV Bharat / sitara

ಬಬ್ರುವಾಹನ ಟೈಟಲ್​ ಪ್ರೇರಿತ ಬಬ್ರೂ ಸಿನಿಮಾ ಡಿಸೆಂಬರ್​ 6 ರಂದು ತೆರೆಗೆ! - Suman Nagarkar

ಹಾಲಿವುಡ್ ಶೈಲಿಯಲ್ಲಿ ನಮ್ಮ ಬಬ್ರೂ ಸಿನಿಮಾ ನಿರ್ಮಾಣವಾಗಿದೆ ಎಂದು ಚಿತ್ರದ ಮೇಕಿಂಗ್​ ಬಗ್ಗೆ ಚಿತ್ರತಂಡ ಮೈಸೂರಿನಲ್ಲಿ ಪ್ರೆಸ್​ ಮೀಟ್​ ನಡೆಸಿ ವಿವರಿಸಿದೆ.

ಬಬ್ರೂ ಸಿನಿಮಾ,ಡಿಸೆಂಬರ್​ 6 ರಂದು ತೆರೆಗೆ!

By

Published : Nov 12, 2019, 5:53 PM IST

ಮೈಸೂರು: ಬೆಳದಿಂಗಳ ಬಾಲೆ ಖ್ಯಾತಿ ಸುಮನ್​ ನಗರ್ಕರ್​​​​ 15 ವರ್ಷಗಳ ನಂತರ ‘ಬಬ್ರೂ’ ಸಿನಿಮಾ ಮೂಲಕ ಮತ್ತೆ ಚಂದನವವನಕ್ಕೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

ಅಮೆರಿಕದಲ್ಲೇ ನೆಲೆಸಿರುವ ಕನ್ನಡಿಗರಿಂದ ತಯಾರಾದ ‘ಬಬ್ರೂ’ಚಿತ್ರ ಡಿಸೆಂಬರ್​ 6ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಈಗಗಲೇ ಹಲವು ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಮನ್​ ನಗರ್ಕರ್​ ಮತ್ತೆ ಬಣ್ಣ ಹಚ್ಚಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತರಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ಮಾಪಕ ಗುರುದೇವ್ ನಾಗರಾಜ್ ಮಾತನಾಡಿ, ಮೆಕ್ಸಿಕೊದಿಂದ ಕೆನಡಾವರೆಗೂ ನಡೆಯುವ ಜರ್ನಿ, ಈ ಜರ್ನಿಯಲ್ಲಿ ನಡೆಯುವ ಘಟನೆಗಳೆ ಕಥಾ ವಸ್ತುವಾಗಿವೆ ಎಂದು ಸಿನಿಮಾದಲ್ಲಿರುವ ಟ್ವಿಸ್ಟ್​ ಬಗ್ಗೆ ತಿಳಿಸಿದ್ದಾರೆ.

ಬಬ್ರೂ ಸಿನಿಮಾ,ಡಿಸೆಂಬರ್​ 6 ರಂದು ತೆರೆಗೆ!

ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಸುಜಯ್ ರಾಮಯ್ಯ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಇನ್ನು ವಿಜಯಪ್ರಕಾಶ್, ಚಂದನ್ ಶೆಟ್ಟಿ, ಸಂದೀಪ್ ಹೆಗಡೆ ಹಿನ್ನೆಲೆ ಗಾಯನವಿದೆ. ಸ್ಪ್ಯಾನಿಷ್ ಮಿಶ್ರಿತ ಕನ್ನಡ ಬಳಸಲಾಗಿದೆ ಎಂದು ಚಿತ್ರ ತಂಡ ವಿವರಣೆ ನೀಡಿದೆ.

ABOUT THE AUTHOR

...view details