ಕರ್ನಾಟಕ

karnataka

ETV Bharat / sitara

ನಿರ್ಮಾಪಕರ ಜೇಬು ತುಂಬಿಸಿದ 'ಬ್ರಹ್ಮಚಾರಿ'...ಸಕ್ಸಸ್ ಖುಷಿ ಹಂಚಿಕೊಂಡ ಚಿತ್ರತಂಡ - ಬ್ರಹ್ಮಚಾರಿ ಸಿನಿಮಾ ಸಕ್ಸಸ್ ಪ್ರೆಸ್​​ಮೀಟ್

ಬಿಡುಗಡೆಯಾದ ಒಂದೇ ವಾರಕ್ಕೆ ನಿರ್ಮಾಪಕರ ಜೇಬು ತುಂಬಿಸುವಲ್ಲಿ 'ಬ್ರಹ್ಮಚಾರಿ' ಯಶಸ್ವಿಯಾಗಿದ್ದಾನೆ. ಇದೇ ಖುಷಿ ಯಲ್ಲಿ ಚಿತ್ರತಂಡ ಇಂದು ಸಕ್ಸಸ್ ಮೀಟ್ ಮಾಡಿ ‌ಸಂತಸ ಹಂಚಿ ಕೊಂಡಿತು. ಅಲ್ಲದೆ ಇಡೀ 'ಬ್ರಹ್ಮಚಾರಿ' ಚಿತ್ರತಂಡ ಕೇಕ್ ಕಟ್ ಮಾಡಿ ಚಿತ್ರದ ಸಕ್ಸಸ್ ಸೆಲೆಬ್ರೇಟ್ ಮಾಡಿತು.

Bramhachari
'ಬ್ರಹ್ಮಚಾರಿ'

By

Published : Dec 7, 2019, 11:58 PM IST

ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ಅಭಿನಯದ ಪಕ್ಕಾ ಕಾಮಿಡಿ ಎಂಟರ್​​​ಟೈನ್ಮೆಂಟ್​​​​​​​​​​​​​​​​​​​​​​​​​​​​ ಸಿನಿಮಾ 'ಬ್ರಹ್ಮಚಾರಿ' ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಒಂದೇ ವಾರಕ್ಕೆ ನಿರ್ಮಾಪಕರ ಜೇಬು ತುಂಬಿಸುವಲ್ಲಿ 'ಬ್ರಹ್ಮಚಾರಿ' ಯಶಸ್ವಿಯಾಗಿದ್ದಾನೆ.

'ಬ್ರಹ್ಮಚಾರಿ' ಸಕ್ಸಸ್ ಖುಷಿ ಹಂಚಿಕೊಂಡ ಚಿತ್ರತಂಡ

ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ 'ಬ್ರಹ್ಮಚಾರಿ' ಎರಡನೇ ವಾರದಲ್ಲಿ ಇನ್ನೂ 25 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವುದು ಚಿತ್ರತಂಡದ ಸಂಭ್ರಮ ಡಬಲ್ ಆಗಲು ಕಾರಣವಾಗಿದೆ. ಇದೇ ಖುಷಿ ಯಲ್ಲಿ ಚಿತ್ರತಂಡ ಇಂದು ಸಕ್ಸಸ್ ಮೀಟ್ ಮಾಡಿ ‌ಸಂತಸ ಹಂಚಿ ಕೊಂಡಿತು. ಅಲ್ಲದೆ ಇಡೀ 'ಬ್ರಹ್ಮಚಾರಿ' ಚಿತ್ರತಂಡ ಕೇಕ್ ಕಟ್ ಮಾಡಿ ಚಿತ್ರದ ಸಕ್ಸಸ್ ಸೆಲಬ್ರೇಟ್ ಮಾಡಿತು. 'ನಮ್ಮ ಚಿತ್ರ ಬಿಡುಗಡೆಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಚಿತ್ರಕ್ಕೆ ಹೂಡಿದ್ದ, ಬಂಡವಾಳ ಕೂಡಾ ವಾಪಸ್​​​​​​​​​​ ಬಂದಿದೆ. ಅಲ್ಲದೆ ದುಡ್ಡು ಕೊಟ್ಟು ಸಿನಿಮಾ ನೋಡಿದ ಪ್ರೇಕ್ಷಕರು ಕೂಡಾ ಚಿತ್ರವನ್ನು ಎಂಜಾಯ್ ಮಾಡಿದ್ದಾರೆ. ಇದು ನಮ್ಮ ಚಿತ್ರಕ್ಕೆ ಸಿಕ್ಕ ದೊಡ್ಡ ಯಶಸ್ಸು ಎಂದು ಚಿತ್ರತಂಡ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿತು. ಸತೀಶ್ ಹಾಗೂ ಅದಿತಿ ಕಾಂಬಿನೇಷನ್ ಈ ಚಿತ್ರದಲ್ಲಿ ವರ್ಕೌಟ್ ಆಗಿದೆ. ಅಲ್ಲದೆ ಪ್ರೇಕ್ಷಕರು ಕುಟುಂಬ ಸಹಿತ ಬಂದು ಯಾವುದೇ ಮುಜುಗರ ಇಲ್ಲದೆ ಸಿನಿಮಾ ನೋಡುತ್ತಿದ್ದಾರೆ. ಇದೇ ಖುಷಿಯಲ್ಲಿ 'ಬ್ರಹ್ಮಚಾರಿ' ಚಿತ್ರತಂಡ ಸೇರಿ ಮತ್ತೊಂದು ಸಿನಿಮಾ ಮಾಡುವುದಾಗಿ ನಿರ್ಮಾಪಕ ಉದಯ್ ಮೆಹ್ತಾ ಹೇಳಿದ್ದಾರೆ.

For All Latest Updates

ABOUT THE AUTHOR

...view details