ತೆಲುಗಿನ ಟಾಪ್ ಕಮೇಡಿಯನ್ಗಳ ಪಟ್ಟಿಯಲ್ಲಿ ಬ್ರಹ್ಮಾನಂದಂ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ನಾಲ್ಕು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಇವರು ನಿಜ ಜೀವನದಲ್ಲಿ ಅಷ್ಟೇ ಗಂಭೀರ ವ್ಯಕ್ತಿ. ಅಲ್ಲದೆ ತಾವೊಬ್ಬ ಚಿತ್ರ ಕಲಾವಿದರೂ ಹೌದು. ಇವರು ಹಲವು ಅದ್ಭುತ ಚಿತ್ರಗಳನ್ನು ಬಿಡಿಸಿದ್ದು, ತಮಗಿಷ್ಟ ಆಗುವ ವಿಶೇಷ ಜನರಿಗೆ ಅದನ್ನು ಉಡುಗೊರೆಯಾಗಿ ಕೊಟ್ಟು ಖುಷಿ ಪಡುತ್ತಾರೆ. ಇದೀಗ ಅಲ್ಲು ಅರ್ಜುನ್‌ಗೆ ಹೊಸ ವರ್ಷದ ಗಿಫ್ಟ್ ಕೊಟ್ಟಿದ್ದಾರೆ.
ಪೆನ್ಸಿಲ್ನಲ್ಲಿ ಸ್ಕೆಚ್ ಮಾಡಿರುವ ವೆಂಕಟರಮಣ ದೇವರ ಫೋಟೋವನ್ನು ನಟ ಅಲ್ಲು ಅರ್ಜುನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಅಲ್ಲು ಅರ್ಜುನ್ ಮನಸಾರೆ ಧನ್ಯವಾದ ತಿಳಿಸಿದ್ದಾರೆ.