ನಾನು 100 ಪರ್ಸೆಂಟ್ ವರ್ಜಿನ್ ಅಂತ ಕ್ಯಾಪ್ಷನ್ ಇಟ್ಟುಕೊಂಡು ಬಂದ ಬ್ರಹ್ಮಚಾರಿ ಸಿನಿಮಾ, ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ಜೋಡಿ ಪ್ರೇಕ್ಷಕರಿಗೆ ಇಷ್ಟ ಆಗಿದ್ದು, ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗಾಂಧಿನಗರದಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ, ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ ನೀನಾಸಂ ಸತೀಶ್ ಹಾಗು ಅದಿತಿ ಪ್ರಭುದೇವ ಖುಷಿಯಾಗಿದ್ದಾರೆ. ತ್ರಿವೇಣಿ ಚಿತ್ರಮಂದಿರದ ಮುಂದೆ ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ಸಖತ್ ಸ್ಟೆಪ್ ಹಾಕುವ ಮೂಲಕ ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು.