ಕರ್ನಾಟಕ

karnataka

By

Published : May 10, 2019, 10:46 PM IST

ETV Bharat / sitara

ಸೆಂಚುರಿ ಸ್ಟಾರ್ ಹಾಗೂ ರಿಯಲ್ ಸ್ಟಾರ್ ಮಧ್ಯೆ ಬಾಕ್ಸ್ ಆಫೀಸ್ ಫೈಟ್

ಉಪೇಂದ್ರ ಅಭಿನಯದ 'ಐ ಲವ್​ ಯು' ಹಾಗೂ ಶಿವರಾಜ್​ಕುಮಾರ್ ಅಭಿನಯದ 'ರುಸ್ತುಂ' ಸಿನಿಮಾ ಬಹುತೇಕ ಒಂದೇ ದಿನ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಆ ರೀತಿ ಆದರೆ ನಿರ್ಮಾಪಕರಿಗೆ ನಷ್ಟವಾಗಲಿದೆ ಎನ್ನಲಾಗುತ್ತಿದೆ.

ಶಿವರಾಜ್​ಕುಮಾರ್ , ಉಪೇಂದ್ರ

ಸ್ಯಾಂಡಲ್​ವುಡ್​​​ನಲ್ಲಿ ಇಬ್ಬರು ಬಿಗ್​​​​​ಸ್ಟಾರ್​​​​​​​​ಗಳ ಸಿನಿಮಾಗಳು, ಒಂದೇ ದಿನ ರಿಲೀಸ್ ಆಗೋದ್ರಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ​​​​ಫೈಟ್ ಜೊತೆ ನಿರ್ಮಾಪಕನಿಗೆ ನಷ್ಟ ಆಗೋದು ಗ್ಯಾರಂಟಿ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಡುವೆ ಬಾಕ್ಸ್ ಆಫೀಸ್ ಫೈಟ್ ಶುರುವಾಗಲಿದೆ.

'ಐ ಲವ್​ ಯು ' ಪ್ರೆಸ್​​​ಮೀಟ್​​​

ಉಪೇಂದ್ರ ಅಭಿನಯದ 'ಐ ಲವ್ ಯು' ಸಿನಿಮಾ ರಿಲೀಸ್ ಡೇಟ್ ಈಗಾಗಲೇ ಅನೌನ್ಸ್ ಆಗಿದೆ. ಇದರ ಜೊತೆಗೆ ಅದೇ ವೇಳೆ ಶಿವರಾಜ್ ಕುಮಾರ್ 'ರುಸ್ತುಂ' ಕೂಡಾ ತೆರೆಗೆ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಉಪೇಂದ್ರ ಅಭಿನಯದ ಸಿನಿಮಾಗಳು ಬಿಡುಗಡೆಯಾಗಿ ಸುಮಾರು 2 ವರ್ಷಗಳು ಕಳೆದಿವೆ. ಇದರಿಂದ ಫ್ಯಾನ್ಸ್ ಕೂಡಾ ಅವರ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇಷ್ಟು ದಿನ ರಾಜಕೀಯದಲ್ಲಿ ಬ್ಯುಸಿ ಇದ್ದ ಉಪ್ಪಿ ಈಗ ರಚಿತಾ ರಾಮ್​ಗೆ 'ಐ ಲವ್​ ಯು' ಹೇಳಲು ಹೊರಟಿದ್ದಾರೆ. ಆರ್​. ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಸೋನುಗೌಡ ಕೂಡಾ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

'ರುಸ್ತುಂ' ಚಿತ್ರದಲ್ಲಿ ಶಿವರಾಜ್​​​​ಕುಮಾರ್​​​

ಇನ್ನು ಶಿವರಾಜ್ ಕುಮಾರ್​​​ ಮೀಸೆ ಬಿಟ್ಟು ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿನಯಿಸುತ್ತಿರುವ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದಲ್ಲಿ ತಯಾರಾಗಿರುವ 'ರುಸ್ತುಂ' ಜೂನ್ 14ಕ್ಕೆ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕ ರವಿವರ್ಮ ಹೇಳೋದೇ ಬೇರೆ. ಜೂನ್ 14ಕ್ಕೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೆವು. ಆದರೆ ಇನ್ನೂ ಪಕ್ಕಾ ಆಗಿಲ್ಲ. ಜೂನ್ 6 ರಂದು ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸುತ್ತಿದ್ದೇವೆ. ಏಕೆಂದರೆ ಒಂದೇ ದಿನ ಇಬ್ಬರು ಸ್ಟಾರ್ ನಟರ ಸಿನಿಮಾ ಬಿಡುಗಡೆ ಆದರೆ ನಿರ್ಮಾಪಕರಿಗೆ ನಷ್ಟ ಆಗಲಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ವಾರ್ ಆಗುತ್ತಾ.. ಅಥವಾ ರವಿವರ್ಮ ಹೇಳಿದಂತೆ ಅವರ ಸಿನಿಮಾ ಮೊದಲು ಬಿಡುಗಡೆಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕು.

For All Latest Updates

TAGGED:

ABOUT THE AUTHOR

...view details