ಕಿಚ್ಚ ಸುದೀಪ್ ಕೇವಲ ಸಿನಿಮಾ ಮಾತ್ರವಲ್ಲ, ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದ ಟ್ರಸ್ಟ್ ಸ್ಥಾಪಿಸಿ ಆ ಸಂಸ್ಥೆಯ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ಶಾಲಾ ಮಕ್ಕಳಿಗೆ ಶೂ ತೊಡಿಸಿದ ಕಿಚ್ಚ! 'ಮಾಣಿಕ್ಯ'ನ ಸಮಾಜಕಾರ್ಯಕ್ಕೆ ಮೆಚ್ಚುಗೆ - undefined
'ಅಕ್ಷರ ಅಮೃತ' ಕಾನ್ಸೆಪ್ಟ್ ಅಡಿ ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು. ಸುದೀಪ್ ಅವರ ನಿವಾಸದಲ್ಲೇ ಈ ಕಾರ್ಯಕ್ರಮ ಜರುಗಿದೆ.
![ಶಾಲಾ ಮಕ್ಕಳಿಗೆ ಶೂ ತೊಡಿಸಿದ ಕಿಚ್ಚ! 'ಮಾಣಿಕ್ಯ'ನ ಸಮಾಜಕಾರ್ಯಕ್ಕೆ ಮೆಚ್ಚುಗೆ](https://etvbharatimages.akamaized.net/etvbharat/prod-images/768-512-3496637-thumbnail-3x2-sudeep.jpg)
ಇಂದು ಕೂಡಾ ಸುದೀಪ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಶೂ ವಿತರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಜೆ.ಪಿ ನಗರದ ಸುದೀಪ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತ: ಕಿಚ್ಚ ಸುದೀಪ್ ಪಾಲ್ಗೊಂಡಿದ್ದರು. ತಾವೇ ಮುಂದೆ ನಿಂತು ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಶೂಗಳನ್ನು ವಿತರಿಸಿದ್ದಾರೆ. ಅಲ್ಲದೆ ಕೆಲವೊಂದು ಮಕ್ಕಳ ಕಾಲಿಗೆ ಸುದೀಪ್ ಅವರೇ ಶೂ ಹಾಕಿ ಸರಳತೆ ಮೆರೆದಿದ್ದಾರೆ.
ಪ್ರತಿ ವರ್ಷ ಕಿಚ್ಚ ಚಾರಿಟೆಬಲ್ ಟ್ರಸ್ಟ್ನಿಂದ 'ಅಕ್ಷರ ಅಮೃತ' ಕಾನ್ಸೆಪ್ಟ್ ಅಡಿ ಈ ರೀತಿಯ ಕೆಲಸಗಳು ನಡೆಯುತ್ತವೆ. ಕಿಚ್ಚನ ಈ ಸಮಾಜ ಸೇವೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ,'ಮಾಣಿಕ್ಯ'ನಿಗೆ ಸಲಾಂ ಹೊಡೆದಿದ್ದಾರೆ.