ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ತಮ್ಮ ಮನೆಯನ್ನು ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿ ಉಳಿದುಕೊಳ್ಳಲು ಕೊಟ್ಟಿದ್ದಾರೆ. ಜೊತೆಗೆ ತಾವೂ ಕೂಡ ಅದೇ ಮನೆಯಲ್ಲೇ ಇದ್ದಾರೆ.
ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಈ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದು, ಆ ವ್ಯಕ್ತಿಯನ್ನು ಸಾಹು ಎಂದು ಹೇಳಲಾಗಿದೆ. ಇನ್ನು ಈ ವ್ಯಕ್ತಿ ಬೋನಿ ಕಪೂರ್ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾನೆ.
ಈ ಬಗ್ಗೆ ಮಾತನಾಡಿರುವ ಬೋನಿ ಕಪೂರ್, ನಾನು ಮತ್ತು ನನ್ನ ಮಕ್ಕಳು ಕೂಡ ನನ್ನ ಮನೆಯಲ್ಲೇ ಇದ್ದೇವೆ. ಇಲ್ಲಿಯವರೆಗೆ ಕೊರೊನಾ ಸಂಬಂಧಿಸಿದಂತೆ ಯಾವುದೇ ರೋಗದ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಇನ್ನು ನಾವು ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತಿದ್ದೇವೆ ಎಂದರು.
ಇನ್ನು ಸಾಹು ಆದಷ್ಟು ಬೇಗ ಗುಣಮುಖರಾಗಿ ತಮ್ಮ ಮನೆಗೆ ಹಿಂದುರುಗಲಿ ಎಂದು ನಾನು ಆಶಿಸುತ್ತೇನೆ ಎಂದು ಬೋನಿ ಕಪೂರ್ ಹೇಳಿದ್ದಾರೆ.
ಇನ್ನು ಸಾಹು ಕಳೆದ ಭಾನುವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವ್ಯಕ್ತಿಯನ್ನು ಬೋನಿಕಪೂರ್ ಪರೀಕ್ಷೆಗೆ ಕಳುಹಿಸಿದಾಗ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ.