ಕರ್ನಾಟಕ

karnataka

ETV Bharat / sitara

ಬಾಂಬರ್​​ ಆದಿತ್ಯ ಹೆಸರಲ್ಲಿ ಸಿನಿಮಾ... ಚಿತ್ರದ ಟೈಟಲ್​ ಬಹಿರಂಗ! - ನಿರ್ದೇಶಕ ಬಿ.ಆರ್ ಕೇಶವ ಹಾಗೂ ನಿರ್ಮಾಪಕ ತುಳಸಿರಾಮ್​​

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಭಯ ಸೃಷ್ಟಿಸಿದ್ದ ಮಣಿಪಾಲ ಮೂಲದ ಬಾಂಬರ್ ಆದಿತ್ಯ ರಾವ್ ಜೀವನ ಚರಿತ್ರೆ ಈಗ ಸಿನಿಮಾವಾಗ್ತಿದೆ. ಈ ಸಿನಿಮಾ ಮಾಡಲು ನಿರ್ದೇಶಕ ಬಿ.ಆರ್. ಕೇಶವ ಹಾಗೂ ನಿರ್ಮಾಪಕ ತುಳಸಿರಾಮ್ ಪ್ಲಾನ್​ ಮಾಡಿದ್ದಾರೆ. ಅಲ್ಲದೆ 'ಫಸ್ಟ್ ರ್ಯಾಂಕ್ ಟೆರರಿಸ್ಟ್ ಆದಿತ್ಯ' ಅಂತ ಸಿನಿಮಾ ಟೈಟಲ್​ ಇಟ್ಟಿದ್ದಾರೆ.

Bomber Adhithya biopic Movies
ಬಾಂಬರ್​​ ಆದಿತ್ಯ ಹೆಸರಲ್ಲಿ ಬರ್ತಿದೆ 'ಫಸ್ಟ್ ರ್ಯಾಂಕ್ ಟೆರರಿಸ್ಟ್ ಆದಿತ್ಯ' ಸಿನಿಮಾ!

By

Published : Jan 23, 2020, 5:50 PM IST

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಭಯ ಸೃಷ್ಟಿಸಿದ್ದ ಮಣಿಪಾಲ ಮೂಲದ ಬಾಂಬರ್ ಆದಿತ್ಯ ರಾವ್ ಜೀವನ ಚರಿತ್ರೆ ಈಗ ಸಿನಿಮಾವಾಗ್ತಿದೆ. ಹೌದು, ಬಾಂಬ್ ಇಟ್ಟು ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡಿದ್ದ ಆದಿತ್ಯ ರಾವ್ ಬಗ್ಗೆ ರೋಚಕ ಕಥೆಗಳು ಹೊರ ಬರ್ತಿದ್ದು, ಇದನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ನಿರ್ದೇಶಕ ಬಿ.ಆರ್ ಕೇಶವ ಹಾಗೂ ನಿರ್ಮಾಪಕ ತುಳಸಿರಾಮ್​​ ಪ್ಲಾನ್​ ಮಾಡಿದ್ದಾರೆ. ಅಲ್ಲದೆ 'ಫಸ್ಟ್ ರ್ಯಾಂಕ್ ಟೆರರಿಸ್ಟ್ ಆದಿತ್ಯ' ಅಂತ ಟೈಟಲ್​ ಕೂಡ ಫಿಕ್ಸ್​​ ಮಾಡಲಾಗಿದೆ.

ಬಾಂಬರ್​ ಆದಿತ್ಯ ರಾವ್ ಬಗ್ಗೆ ಬರಲಿದ್ಯಾ ಸಿನಿಮಾ...ಚಿತ್ರದ ನಾಯಕ ಯಾರು...?

ಟೈಟಲ್​ ಕುರಿತು ಈಗಾಗಲೇ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಇನ್ನು ನಿರ್ಮಾಪಕ ತುಳಸಿರಾಮ್ ಹೇಳೋ ಪ್ರಕಾರ, ಆದಿತ್ಯ ರಾವ್ ಸ್ಟೋರಿ ತುಂಬಾ ಕುತೂಹಲಕಾರಿಯಾಗಿದೆ. ಹಾಗಾಗಿ ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದೇವೆ. ಅಲ್ಲದೆ ಆ ಟೈಟಲ್ ಕೂಡ ಸಿಗುವ ಭರವಸೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಬಾಂಬರ್​​ ಆದಿತ್ಯ ಹೆಸರಲ್ಲಿ ಬರ್ತಿದೆ 'ಫಸ್ಟ್ ರ್ಯಾಂಕ್ ಟೆರರಿಸ್ಟ್ ಆದಿತ್ಯ' ಸಿನಿಮಾ!

ಈ ಕುರಿತು ಮಾತನಾಡಿರುವ ನಿರ್ದೇಶಕ ಬಿ.ಆರ್.​ ಕೇಶವ ಅವರು, ಟೆರರಿಸಂ‌ ಪ್ರಪಂಚಾದ್ಯಂತ ವೈರಲ್​ ಆಗುತ್ತಿದೆ. ಅಲ್ಲದೆ ಟೆರರಿಸಂ ಮಾಡಬಾರದು ಎಂಬ ಉದ್ದೇಶದಿಂದ ಈ ಚಿತ್ರವನ್ನು ತಯಾರಿಸುತ್ತಿದ್ದೇವೆ. ಆದಿತ್ಯ ರಾವ್ ಜೀವನದಲ್ಲಿ ಬಾಲ್ಯದಿಂದ ಇಲ್ಲಿಯವರೆಗೆ ಏನೆಲ್ಲ ನಡೆದಿದೆ ಎಂಬುದನ್ನು ಈ ಸಿನಿಮಾದಲ್ಲಿ ತರುವ ಪ್ರಯತ್ನ ಮಾಡುತ್ತೇವೆ ಅಂತ ತಿಳಿಸಿದ್ರು.

ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿ ಚಿತ್ರದ ಕಥೆ ಮಾಡುವುದಾಗಿ ಹೇಳಿದ ನಿರ್ದೇಶಕ ಕೇಶವ, ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಅರ್ಮುಗಂ ರವಿಶಂಕರ್ ಅವರನ್ನು ಆಯ್ಕೆ ಮಾಡುವುದಾಗಿ ಚಿಂತನೆ ನಡೆಸಿರುವುದಾಗಿ ಹೇಳಿದ್ರು.

ABOUT THE AUTHOR

...view details