ಸ್ಟಾರ್ ಸುವರ್ಣ ವಾಹಿನಿಯ 'ಬೊಂಬಾಟ್ ಭೋಜನ' ಕಾರ್ಯಕ್ರಮ 100 ದಿನಗಳ ಸಂಭ್ರಮದಲ್ಲಿದೆ. ಫೆ.11ರಂದು ನೂರನೇ ದಿನದ ಸಂಚಿಕೆ ಪ್ರಸಾರವಾಗಲಿದ್ದು, ನಟ ಕಿರಣ್ ರಾಜ್ ಈ ವಿಶೇಷ ಸಂಚಿಕೆಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
ಬೊಂಬಾಟ್ ಭೋಜನದಲ್ಲಿ ಸಿಹಿ ಹಹಿ ಚಂದ್ರು ವಿಶೇಷವಾಗಿ 100 ನೇ ದಿನದ ಅತಿಥಿ ಕಿರಣ್ ರಾಜ್ ಖರ್ಜೂರದಿಂದ ತಯಾರಿಸಿದ ಸಿಹಿ ಮಾಡಿದ್ದಾರೆ. ಸೆಲ್ಫ್ ಮೇಡ್ ಬ್ರ್ಯಾಂಡ್ ಹಾಡಿನ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೇ, ತಮ್ಮ ವೃತ್ತಿ ಜೀವನ, ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಎಂದಿನಂತೆ ನಗುತ್ತಾ ನಗಿಸುತ್ತಾ ಚಂದ್ರು ವಿಶಿಷ್ಟ ಖಾದ್ಯ ತಯಾರಿಸಿದ್ದಾರೆ.
ಬೊಂಬಾಟ್ ಭೋಜನದಲ್ಲಿ ಸಿಹಿ ಹಹಿ ಚಂದ್ರು ಸಿಹಿ ಕಹಿ ಚಂದ್ರು ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬೊಂಬಾಟ್ ಭೋಜನ ಕಾರ್ಯಕ್ರಮ ಅಡುಗೆಗಷ್ಟೇ ಸೀಮಿತವಾಗಿಲ್ಲ. ಚಂದ್ರು ಅವರ ಕೈರುಚಿಯ ವಿಶೇಷ 'ನಳಪಾಕ', ಹೊಸ ರುಚಿ ಅನ್ವೇಷಣೆಯ 'ನಮ್ಮೂರ ಊಟ', ಡಾ. ಗೌರಿ ಸುಬ್ರಮಣ್ಯ ಅವರ ಮನೆ ಮದ್ದು ಮತ್ತು ಆರ್ಯುವೇದದ ರೆಸಿಪಿಗಳಿರುವ 'ಆರೋಗ್ಯ ಆಹಾರ', ಅಡುಗೆ ಮನೆಯ ಸರಳ ಪರಿಹಾರಗಳ ಸರಣಿ ಟಿಪ್ ಟಿಪ್ ಟಿಪ್ಪಣಿ , ಸಿಹಿ ಕಹಿ ಚಂದ್ರು ಅವರ 'ಟೈಂ ಪಾಸ್' ಹಾಗೂ 'ಹಳೇ ಟೇಪ್' ತುಣುಕುಗಳು ಈ ಕಾರ್ಯಕ್ರಮನ್ನು ಅತ್ಯಂತ ಜನಪ್ರಿಯಗೊಳಿಸಿದೆ.
ಬೊಂಬಾಟ್ ಭೋಜನದಲ್ಲಿ ಸಿಹಿ ಹಹಿ ಚಂದ್ರು ಮತ್ತು ಕಿರಣ್ ರಾಜ್ ಇಷ್ಟೇ ಅಲ್ಲದೆ ಕಿರುತೆರೆ ಮತ್ತು ಚಂದನವನದ ತಾರೆಯರು ಚಂದ್ರು ಅವರ ಸೆಲಬ್ರಿಟಿ ಗೆಸ್ಟ್ಗಳಾಗಿ ಆಗಮಿಸಿ ಕಾರ್ಯಕ್ರಮದ ಮೆರಗು ಹೆಚ್ಚುಸುತ್ತಾರೆ. ಈ ವಾರದ ಮತ್ತೊಂದು ವಿಶೇಷತೆ, ಬೊಂಬಾಟ್ ಭೋಜನ ಎಕ್ಸ್ಟ್ರಾ ಸ್ಪೆಷಲ್ ವಾಲೆಂಟೈನ್ಸ್ ವೀಕ್ ಹಿನ್ನೆಲೆ 12.30ರ ಬದಲಿಗೆ 12 ಗಂಟೆಗೇ ಆರಂಭಗೊಂಡು ಅರ್ಧ ಗಂಟೆ ಹೆಚ್ಚಿನ ಸಮಯ ಪ್ರಸಾರವಾಗಲಿದೆ.