ಕರ್ನಾಟಕ

karnataka

ETV Bharat / sitara

ಕನ್ನಡ ಸಿನಿಮಾಗಳಲ್ಲೂ ಮಿಂಚಿರುವ ಬಾಲಿವುಡ್ ಖ್ಯಾತ ನಟರು

ಬಾಲಿವುಡ್ ಸಿನಿಮಾಗಳಲ್ಲಿ ಹೆಸರು ಮಾಡಿರುವ ಅನೇಕ ನಟರು ಕನ್ನಡ ಚಿತ್ರರಂಗದಲ್ಲಿ ಕೂಡಾ ನಟಿಸಿ ಹೆಸರು ಮಾಡಿದ್ದಾರೆ. ಡಾ. ರಾಜ್​ಕುಮಾರ್ ಅವರ ಕಾಲದಲ್ಲಿ 'ಸಾಕ್ಷಾತ್ಕಾರ' ಚಿತ್ರದಲ್ಲಿ ನಟಿಸಿದ್ದ ಪೃಥ್ವಿರಾಜ್​​ಕಪೂರ್​​ ಅವರ ಮೂಲಕ ಈ ಟ್ರೆಂಡ್ ಶುರುವಾಗಿತ್ತು.

Bollywood actors in sandalwood
ಕನ್ನಡ ಚಿತ್ರಗಳಲ್ಲಿ ಬಾಲಿವುಡ್ ನಟರು

By

Published : Jul 17, 2020, 6:21 PM IST

ಚಿತ್ರರಂಗದ ಆರಂಭದ ದಿನಗಳಿಂದೂ ಪರಭಾಷೆಯ ನಟ-ನಟಿಯರನ್ನು ಕನ್ನಡಕ್ಕೆ ಕರೆತರುವ ಸಂಪ್ರದಾಯ ಇದೆ. ಅದೇ ರೀತಿ ಅನೇಕ ಬಾಲಿವುಡ್ ನಟರು ಕನ್ನಡದಲ್ಲಿ ನಟಿಸಿ ಕನ್ನಡ ಜನರ ಪ್ರೀತಿ ಗಳಿಸಿದ್ಧಾರೆ.

ಪೃಥ್ವಿರಾಜ್​ ಕಪೂರ್

ಪೃಥ್ವಿರಾಜ್​ಕಪೂರ್​​​

ಡಾ. ರಾಜ್​​​​​​ಕುಮಾರ್ ಕಾಲದಿಂದಲೂ, ಬಾಲಿವುಡ್ ನಟರು ಕನ್ನಡಕ್ಕೆ ಬರುವ ಟ್ರೆಂಡ್ ಶುರುವಾಗಿತ್ತು. 1971ರಲ್ಲಿ ಡಾ. ರಾಜ್​​​​​​ಕುಮಾರ್ ಅಭಿನಯದ 'ಸಾಕ್ಷಾತ್ಕಾರ' ಚಿತ್ರದಲ್ಲಿ ಬಾಲಿವುಡ್ ಚಿತ್ರರಂಗದ ಹರಿಕಾರ ಪೃಥ್ವಿರಾಜ್ ಕಪೂರ್ ಅಣ್ಣಾವ್ರ ತಂದೆ ಪಾತ್ರದಲ್ಲಿ ಅಭಿನಯಿಸಿದ್ದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪೃಥ್ವಿರಾಜ್ ಕಪೂರ್ ನಟಿಸಿದ ಮೊದಲ ಸಿನಿಮಾ 'ಸಾಕ್ಷಾತ್ಕಾರ' ಆಗಿತ್ತು.ಅಣ್ಣಾವ್ರ ಪ್ರೀತಿ ವಿಶ್ವಾಸಕ್ಕಾಗಿ, ಅಂದು ಪೃಥ್ವಿರಾಜ್ ಕಪೂರ್ ಕನ್ನಡದಲ್ಲಿ ಅಭಿನಯಿಸಲು ಒಪ್ಪಿಕೊಂಡ್ರು ಎನ್ನಲಾಗಿದೆ.

ಅನಿಲ್ ಕಪೂರ್

ಅನಿಲ್ ಕಪೂರ್​​​​

ಪೃಥ್ವಿರಾಜ್ ಕಪೂರ್ ಬಳಿಕ ಕನ್ನಡ ಚಿತ್ರದಲ್ಲಿ ನಟಿಸಿದ ಹ್ಯಾಂಡ್​​ಸಮ್​​​​ ಹೀರೋ ಅನಿಲ್ ಕಪೂರ್. 1982ರಲ್ಲಿ ತೆರೆ ಕಂಡ 'ಪಲ್ಲವಿ ಅನುಪಲ್ಲವಿ' ಚಿತ್ರದಲ್ಲಿ ಅನಿಲ್ ಕಪೂರ್ ಹೀರೋ ಆಗಿ ಬೆಳ್ಳಿ ತೆರೆ ಮೇಲೆ ಮಿಂಚಿದ್ರು. ಮಣಿರತ್ನಂ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ರು. ಅನಿಲ್ ಕಪೂರ್ ಕನ್ನಡ ಚಿತ್ರದಲ್ಲಿ ನಟಿಸುವುದಕ್ಕೂ ಮೊದಲೇ ಬಾಲಿವುಡ್​​​​​​ನಲ್ಲಿ 5 ಸಿನಿಮಾಗಳನ್ನು ಮಾಡಿ ಹೆಸರು ಮಾಡಿದ್ದರು. ಅನಿಲ್ ಕಪೂರ್ ಅಭಿನಯದ ಪಲ್ಲವಿ ಅನು ಪಲ್ಲವಿ ಚಿತ್ರದ ನಗುವ ನಯನ ಮಧುರ ಮೌನ ಗೀತೆ ಇಂದಿಗೂ ಬಹಳ ಫೇಮಸ್​.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್​​​

ಬಾಲಿವುಡ್​ ಖ್ಯಾತ ಸ್ಟಾರ್ ನಟ ಅಕ್ಷಯ್ ಕುಮಾರ್​ ಕೂಡಾ 1993ರಲ್ಲಿ, 'ವಿಷ್ಣು ವಿಜಯ' ಸಿನಿಮಾದಲ್ಲಿ ನಟಿಸಿದ್ದಾರೆ. ಡಾ ವಿಷ್ಣುವರ್ಧನ್ ಜೊತೆ ಸ್ಕ್ರೀನ್ ಷೇರ್ ಮಾಡಿರೋ ಅಕ್ಕಿ, ಇವತ್ತಿಗೂ ಬೆಂಗಳೂರಿಗೆ ಬಂದರೆ ವಿಷ್ಣುವರ್ಧನ್ ಹಾಗೂ 'ವಿಷ್ಣು ವಿಜಯ' ಸಿನಿಮಾ ಬಗ್ಗೆ ಮಾತನಾಡುತ್ತಾರೆ. ಅಂದು ಅಕ್ಷಯ್ ಕುಮಾರ್ 'ವಿಷ್ಣು ವಿಜಯ' ಸಿನಿಮಾಗಿಂತ ಮುನ್ನವೇ ಬಾಲಿವುಡ್​​​​​​​​ನಲ್ಲಿ ಆ್ಯಕ್ಷನ್ ಹೀರೋ ಆಗಿ ಹೊರಹೊಮ್ಮಿದ್ದರು.

ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್​​​

2005ರಲ್ಲಿ ಮತ್ತೊಬ್ಬ ಬಾಲಿವುಡ್​ ದಿಗ್ಗಜ ನಟನನ್ನು ಕನ್ನಡ ಚಿತ್ರರಂಗಕ್ಕೆ ಕರೆತರಲಾಗಿತ್ತು. ಅವ್ರೇ ಬಾಲಿವುಡ್ ಬಾದ್​​​​​ಷಾ ಅಮಿತಾಬ್ ಬಚ್ಚನ್. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೃತಧಾರೆ' ಸಿನಿಮಾದಲ್ಲಿ ಬಿಗ್ ಬಿ ಮುಖ್ಯವಾದ ಪಾತ್ರವೊಂದನ್ನು ಮಾಡಿದ್ರು. ರಮ್ಯಾ ಹಾಗೂ ಧ್ಯಾನ್ ನಟಿಸಿದ್ದ ಈ ಚಿತ್ರದಲ್ಲಿ ನಾಯಕಿ ರಮ್ಯಾ, ಅಮಿತಾಬ್ ಬಚ್ಚನ್ ಅಭಿಮಾನಿಯಾಗಿ ಅವರನ್ನು ಭೇಟಿ ಮಾಡುವ ದೃಶ್ಯ ಅದು.

ಜಾಕಿಶ್ರಾಫ್

ಜಾಕಿಶ್ರಾಫ್​​​

2006ರಲ್ಲಿ ತೆರೆ ಕಂಡು ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಸಿನಿಮಾ 'ಕೇರ್ ಆಫ್ ಫುಟ್ ಬಾತ್'. ಈ ಚಿತ್ರದ ಮೂಲಕ ಬಾಲಿವುಡ್ ಸ್ಟಾರ್ ಹೀರೋ ಜಾಕಿ ಶ್ರಾಫ್ ಮೊದಲ ಬಾರಿ ಕನ್ನಡಕ್ಕೆ ಬಂದರು. ಮಾಸ್ಟರ್ ಕಿಶನ್ ನಿರ್ದೇಶನದ ಈ ಚಿತ್ರದಲ್ಲಿ, ಜಾಕಿ ಶ್ರಾಫ್ ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದ್ರು. ನಂತರದ ದಿನಗಳಲ್ಲಿ 'ಅಣ್ಣಾ ಬಾಂಡ್' ಚಿತ್ರದಲ್ಲಿ ಕೂಡಾ ಜಾಕಿ ಶ್ರಾಫ್ ನಟಿಸಿದ್ದಾರೆ. ಅಚ್ಚರಿ ವಿಷಯ ಅಂದ್ರೆ ಹೀರೋ, ಕರ್ಮ, ರಂಗೀಲಾ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಜಾಕಿ ಶ್ರಾಫ್ ಕನ್ನಡದಲ್ಲೂ ಅಭಿನಯಿಸಿ ಅಭಿಮಾನಿಗಳ ಪ್ರೀತಿ ಗಳಿಸಿದ್ರು.

ಡಿನೋ ಮೊರಿಯಾ

ಡಿನೋ ಮೊರಿಯಾ

ಇದೇ ವರ್ಷ ಬಾಲಿವುಡ್​​ನ ಮತ್ತೊಬ್ಬ ಹ್ಯಾಂಡ್ ಸಮ್ ಹೀರೋ ಡಿನೋ ಮೋರಿಯಾ 'ಜೂಲಿ' ಸಿನಿಮಾ ಮೂಲಕ, ಕನ್ನಡ ಚಿತ್ರರಂಗಕ್ಕೆ ಬಂದ್ರು. ನಿರ್ದೇಶಕಿ ಪೂರ್ಣಿಮಾ ಮೋಹನ್, ಡಿನೋ ಮೋರಿಯಾ ಅವರನ್ನು ಕನ್ನಡಕ್ಕೆ ಕರೆತಂದ್ರು. ಚಿತ್ರದಲ್ಲಿ ಡಿನೋ ಮೋರಿಯಾ ಜೊತೆ ರಮ್ಯಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿ ಸುದ್ದಿಯಾಗಿದ್ರು.

ವಿವೇಕ್ ಒಬೆರಾಯ್

ವಿವೇಕ್ ಒಬೆರಾಯ್​​

ಬಾಲಿವುಡ್​​ನಲ್ಲಿ ಸ್ಟಾರ್ ಹೀರೋ ಆಗಿ ಗಮನ ಸೆಳೆದ ಮತ್ತೊಬ್ಬ ನಟ ವಿವೇಕ್ ಒಬೆರಾಯ್. ಬೆಂಗಳೂರಿನ ಅಳಿಯ ಅಂತಾ ಕರೆಸಿಕೊಂಡಿರುವ ವಿವೇಕ್ ಒಬೆರಾಯ್, ಕನ್ನಡದ ಯಾವ ಸಿನಿಮಾದಲ್ಲೂ ನಟಿಸರಲಿಲ್ಲ. ಆದರೆ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡುವ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ರು.

ಸುನಿಲ್ ಶೆಟ್ಟಿ

ಸುನಿಲ್ ಶೆಟ್ಟಿ

'ಪೈಲ್ವಾನ್' ಸಿನಿಮಾದಲ್ಲಿ ಸರ್ಕಾರ್ ಆಗಿ ಗಮನ ಸೆಳೆದವರು ಬಾಲಿವುಡ್ ನಟ ಸುನಿಲ್ ಶೆಟ್ಟಿ. ಕನ್ನಡದವರೇ ಆದ ಸುನಿಲ್ ಶೆಟ್ಟಿ ಕೂಡಾ ಇದುವರೆಗೂ ಯಾವ ಕನ್ನಡ ಚಿತ್ರದಲ್ಲಿ ಕೂಡಾ ನಟಿಸಿರಲಿಲ್ಲ. ಕಿಚ್ಚ ಸುದೀಪ್ ಸ್ನೇಹಕ್ಕೆ ಕಟ್ಟುಬಿದ್ದು ಸುನಿಲ್ ಶೆಟ್ಟಿ ಪೈಲ್ವಾನ್ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ರು. ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಸುನಿಲ್ ಶೆಟ್ಟಿ ಕನ್ನಡದಲ್ಲಿ ನಟಿಸಿ ಕನ್ನಡಿಗರ ಪ್ರೀತಿ ಗಳಿಸಿದ್ದು ವಿಶೇಷ.

ಅಫ್ತಾಬ್ ಶಿವದಾಸನಿ

ಅಫ್ತಾಬ್ ಶಿವದಾಸನಿ

ಕಿಚ್ಚನ ಜೊತೆ ಮತ್ತೊಬ್ಬ ಬಾಲಿವುಡ್ ನಟ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅವರೇ ಅಫ್ತಾಬ್ ಶಿವದಾಸನಿ. ಬಾಲಿವುಡ್​​​​​​​ನಲ್ಲಿ ಮಸ್ತಿ, ಗ್ರ್ಯಾಂಡ್ ಮಸ್ತಿ ಸರಣಿ ಚಿತ್ರಗಳ ಮೂಲಕ ಪ್ರಸಿದ್ಧರಾಗಿರುವ ಅಫ್ತಾಬ್ ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ-3' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗಬೇಕಿದೆ.

ಸಂಜಯ್ ದತ್

ಸಂಜಯ್ ದತ್​

ಬಾಲಿವುಡ್ ಚಿತ್ರರಂಗದ ಖಳ್​​​​​ ನಾಯಕ್ ಅಂತಾ ಕರೆಸಿಕೊಂಡ ನಟ ಎಂದರೆ ಸಂಜಯ್ ದತ್​​​. ಹಿಂದಿಯಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಸಂಜಯ್ ದತ್ 'ಕೆಜಿಎಫ್ ಚಾಪ್ಟರ್ 2' ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಎದುರು ಸಂಜಯ್ ದತ್ ಅಧೀರನಾಗಿ ಅಬ್ಬರಿಸಿದ್ದಾರೆ. ಸದ್ಯ ಶೂಟಿಂಗ್ ಹಂತದಲ್ಲಿರುವ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿದೆ.

ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳಾಗಿ ಮಿಂಚಿದ್ದ, ಖ್ಯಾತ ನಟರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಪ್ರೀತಿ ಗಳಿಸಿರುವುದಕ್ಕೆ ಈ ಸಿನಿಮಾಗಳೇ ಸಾಕ್ಷಿ.

ABOUT THE AUTHOR

...view details