ಮುಂಬೈ :ಬಾಲಿವುಡ್ ನಟ ರಣವೀರ್ ಸಿಂಗ್ ಅಭಿಮಾನಿಗಳು 'ಬಾಲಿವುಡ್ ಕಾ ಕಿಂಗ್ ರಣವೀರ್ ಸಿಂಗ್' ಎನ್ನುವ ಗೀತೆಯೊಂದನ್ನು ಅಭಿಮಾನಿಗಳು ಹಾಡುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಅಹಮದಾಬಾದ್‌ನಲ್ಲಿ ರಣವೀರ್ ಫ್ಯಾನ್ ಕ್ಲಬ್‌ವೊಂದನ್ನು ರಚಿಸಿಕೊಂಡಿದ್ದು, 2019ರಲ್ಲಿ ಬಿಡುಗಡೆಯಾದ ಗಲ್ಲಿ ಬಾಯ್ ಚಿತ್ರದಿಂದ ಪ್ರೇರಣೆ ಪಡೆದು ರ್ಯಾಪ್ ಹಾಡನ್ನು ನಿರ್ದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಈ ಹಾಡು ರಣವೀರ್ ಅವರ ಚೊಚ್ಚಲ ಸಿನೆಮಾ ಬ್ಯಾಂಡ್ ಬಾಜಾ ಬರಾತ್‌ನಿಂದ ಹಿಡಿದು ಗಲ್ಲಿ ಬಾಯ್‌ವರೆಗಿನ ರಣವೀರ್ ಜರ್ನಿ ಕುರಿತು ತಿಳಿಸುತ್ತದೆ.