ಕರ್ನಾಟಕ

karnataka

ETV Bharat / sitara

ಕೆಜಿಎಫ್ ಚಾಪ್ಟರ್ 2 ಚಿತ್ರದ ಡಬ್ಬಿಂಗ್ ಮುಗಿಸಿದ ಬಾಲಿವುಡ್ ರವೀನಾ ನಟಿ - ಕೆಜಿಎಫ್ ಚಾಪ್ಟರ್ 2 ಚಿತ್ರದ ಡಬ್ಬಿಂಗ್

ಹೊಂಬಾಳೆ ಫಿಲ್ಮ್ ಸಂಸ್ಥೆಯ ನಿರ್ಮಾಪಕರಾದ ವಿಜಯ ಕಿರಗಂದೂರ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಅಂದುಕೊಂಡಂತೆ ಕೆಜಿಎಫ್ 2 ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಆಗೋದು ಪಕ್ಕಾ ಆಗಿದೆ..

kgf-chapter-2
ಕೆಜಿಎಫ್ ಚಾಪ್ಟರ್ 2

By

Published : Feb 8, 2022, 2:49 PM IST

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಚಿತ್ರರಂಗ ಎದುರು ನೋಡ್ತಾ ಇರೋ ಹೈವೋಲ್ಟೆಜ್ ಸಿನಿಮಾ ಕೆಜಿಎಫ್ ಚಾಪ್ಟರ್ 2. ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರವಾಗಿರುವ ಈ ಸಿನಿಮಾ ಏಪ್ರಿಲ್ 14ಕ್ಕೆ ವಿಶ್ವದಾದ್ಯಂತ ತೆರೆ ಕಾಣೋದಿಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ, ಕೆಜಿಎಫ್ ಚಾಪ್ಟರ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ಕೆಜಿಎಫ್ ಚಾಪ್ಟರ್ 2 ಚಿತ್ರತಂಡ

ಸಂಜಯ್ ದತ್, ಶ್ರೀನಿಧಿ ಶೆಟ್ಟಿ ಈಗಾಗ್ಲೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡೋದಕ್ಕೆ ಕಾತುರದಿಂದ ಇರೋದಾಗಿ ಹೇಳಿದ್ದರು. ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬಹುಮುಖ್ಯ ಪಾತ್ರ ಮಾಡಿರೋ ಬಾಲಿವುಡ್‌ ನಟಿ ರವೀನಾ ಟಂಡನ್‌, ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಈ ಚಿತ್ರದಲ್ಲಿ ರಮಿಕಾ ಸೇನ್‌ ಪಾತ್ರ ಮಾಡಿರೋ ರವೀನಾ ಟಂಡನ್ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಟ ಯಶ್​

ಬಹುಶಃ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವ ಕೆಜಿಎಫ್ ಚಾಪ್ಟರ್ 2ನಲ್ಲಿ ತಮ್ಮ ಪಾತ್ರಕ್ಕೆ ರವೀನಾ ತಾವೇ ಡಬ್ಬಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್, ಕೂಲೆಸ್ಟ್ ಮುಖ್ಯಮಂತ್ರಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿರೋದಕ್ಕೆ ನನ್ನ ಕೃತಜ್ಞತೆಗಳು ಅಂತಾ ಹೇಳಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರುಗಳ ಪಾತ್ರಗಳು ಸಹ ಮುಖ್ಯ ಆಕರ್ಷಣೆಯಾಗಿರಲಿವೆ.

ಡಬ್ಬಿಂಗ್ ಮುಗಿಸಿದ ಬಾಲಿವುಡ್ ನಟಿ

ಹೊಂಬಾಳೆ ಫಿಲ್ಮ್ ಸಂಸ್ಥೆಯ ನಿರ್ಮಾಪಕರಾದ ವಿಜಯ ಕಿರಗಂದೂರ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಅಂದುಕೊಂಡಂತೆ ಕೆಜಿಎಫ್ 2 ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಆಗೋದು ಪಕ್ಕಾ ಆಗಿದೆ.

ಮತ್ತೊಂದು ಕಡೆ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂಗದೂರ್ ಈ ಸಿನಿಮಾ ಸಕ್ಸಸ್‌ಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಕೆಜಿಎಫ್ ಭಾಗ 1 ನೋಡಿದ ಕೋಟ್ಯಂತರ ಅಭಿಮಾನಿಗಳು, ಕೆಜಿಎಫ್ ಚಾಪ್ಟರ್ 2 ಸಿನಿಮಾ ಹೇಗಿರುತ್ತೆ ಅನ್ನುವ ಕುತೂಹಲವನ್ನಂತೂ ಹೆಚ್ಚಿಸಿದೆ.

ಓದಿ:ಹೈಟೆಕ್​ ಡ್ರಗ್ಸ್​ ದಂಧೆ.. 8 ಡ್ರಗ್ಸ್​ ಪೆಡ್ಲರ್​ಗಳ ಬಂಧಿಸಿದ ಪೊಲೀಸರು!

ABOUT THE AUTHOR

...view details