ಕರ್ನಾಟಕ

karnataka

ETV Bharat / sitara

ಅಲ್ಲು ಅರ್ಜುನ್​​ ತಾಯಿಯಾಗಲಿದ್ದಾರಂತೆ ಬಾಲಿವುಡ್​​ ನಟಿ ತಬು! - ಬಾಲಿವುಡ್​ ನಟಿ ತಬು

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ತೆಲುಗು ಚಿತ್ರವೊಂದರಲ್ಲಿ ಬಾಲಿವುಡ್​ ನಟಿ ತಬು, ಅಲ್ಲು ಅರ್ಜುನ್​​ಗೆ ತಾಯಿಯಾಗಿ ನಟಿಸಲಿದ್ದಾರಂತೆ. ಹೆಸರಿಡದ ಈ ಸಿನಿಮಾ ಶೂಟಿಂಗ್ ಯುಗಾದಿ ಹಬ್ಬದ ನಂತರ ಆರಂಭವಾಗಲಿದೆ ಎನ್ನಲಾಗಿದೆ.

ಅಲ್ಲು ಅರ್ಜುನ್​ , ತಬು

By

Published : Mar 22, 2019, 2:43 PM IST

ಬಾಲಿವುಡ್ ನಟಿ ತಬು ಕೆಲವೊಂದು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೂಲಿ ನಂ.1, ಆವಿಡ ಮಾ ಆವಿಡೆ, ನಿನ್ನೆ ಪೆಳ್ಳಾಡತಾ ಅಂತಹ ಸಕ್ಸಸ್​​​ಫುಲ್ ಸಿನಿಮಾಗಳಲ್ಲಿ ತಬು ಪಾತ್ರ ಸಾಕಷ್ಟಿದೆ. 90 ದಶಕದಿಂದಲೂ ತಬು ಯುವಕರ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ.

ಅಲ್ಲು ಅರ್ಜುನ್​

ತಬು ಇದೀಗ ಮತ್ತೆ ಟಾಲಿವುಡ್​​​​ಗೆ ಬರುತ್ತಿದ್ದಾರೆ. ಆದರೆ ನಾಯಕಿಯಾಗಿ ಅಲ್ಲ, ಅಮ್ಮನಾಗಿ. ಹೌದು, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾದಲ್ಲಿ ತಬು ಅಲ್ಲುಗೆ ತಾಯಿಯಾಗಿ ನಟಿಸಲಿದ್ದಾರಂತೆ. ಚಿತ್ರತಂಡ ಈಗಾಗಲೇ ತಬು ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದೆಯಂತೆ. ಒಂದು ವೇಳೆ ಅಂದುಕೊಂಡಂತೆ ಆದರೆ ಟಾಲಿವುಡ್ ಪ್ರೇಮಿಗಳು ಮತ್ತೆ ತಬುವನ್ನು ತೆಲುಗು ಸಿನಿಮಾಗಳಲ್ಲಿ ನೋಡಬಹುದು.

ತಬು

ತ್ರಿವಿಕ್ರಮ್ ಶ್ರೀನಿವಾಸ್ ಇದಕ್ಕೂ ಮೊದಲು ನಟಿ ನದಿಯಾ ಹಾಗೂ ಖುಷ್ಬೂ ಅವರನ್ನು ತಮ್ಮ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲು ಆಫರ್ ಮಾಡಿದ್ದರು. ಅದೇ ರೀತಿ ಈಗ ತಬುವನ್ನು ತಮ್ಮ ಸಿನಿಮಾಗೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಸಿನಿಮಾ ಚಿತ್ರೀಕರಣ ಯುಗಾದಿ ನಂತರ ಆರಂಭವಾಗಲಿದೆ. ರಾಧಾಕೃಷ್ಣ ಹಾಗೂ ಅಲ್ಲು ಅರವಿಂದ್ ಜೊತೆಗೂಡಿ ಸಿನಿಮಾವನ್ನು ನಿರ್ಮಿಸಲಿದ್ದಾರಂತೆ.

ABOUT THE AUTHOR

...view details