ಕರ್ನಾಟಕ

karnataka

ETV Bharat / sitara

ಕೆಜಿಎಫ್​​ 2 ಚಿತ್ರದಲ್ಲಿ ಬಾಲಿವುಡ್ ನಟಿ,ಇಂದಿರಾ ಗಾಂಧಿ ಪಾತ್ರಕ್ಕೆ 'ಉಪೇಂದ್ರ' ಚೆಲುವೆ - undefined

ಬಹುನಿರೀಕ್ಷಿತ ಕನ್ನಡದ ಕೆಜಿಎಫ್​ 2ನಲ್ಲಿ ಬಾಲಿವುಡ್​ ನಟಿ ರವೀನಾ ಟಂಡನ್​ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ಸಹ ಮೂಡಿ ಬರಲಿದೆ. ಈ ಪಾತ್ರವನ್ನು ರವೀನಾ ನಿಭಾಯಿಸಲಿದ್ದಾರೆ ಎನ್ನುವ ಟಾಕ್​ ಶುರುವಾಗಿದೆ.

KGF

By

Published : May 30, 2019, 12:29 PM IST

ಈ ಹಿಂದೆ ‘ಉಪೇಂದ್ರ’ ಚಿತ್ರದಲ್ಲಿ ರವೀನಾ ನಟಿಸಿದ್ದರು. ಇದೀಗ ಕೆಜಿಎಫ್​2 ನಲ್ಲಿ ಅಭಿನಯಿಸುವುದು ಪಕ್ಕಾ ಆಗಿದ್ದೆ ಆದಲ್ಲಿ, ಎರಡನೇ ಬಾರಿಗೆ ಅವರು, ಚಂದನವನಕ್ಕೆ ಕಾಲಿಟ್ಟಂತಾಗುತ್ತದೆ. ರವೀನಾ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಇನ್ನೊಂದು ಬಲವಾದ ಕಾರಣ ಕೂಡಾ ಇದೆ. ಕೆಜಿಎಫ್ ಮೊದಲ ಭಾಗದ ಹಿಂದಿ ಹಕ್ಕನ್ನು ಪಡೆದಿದ್ದು ರವೀನಾ ಅವರ ಪತಿ ಅನಿಲ್ ತದಾನಿ. ಆ ಒಂದು ಕನೆಕ್ಷನ್​​ನಿಂದ ಈ ರೀತಿಯ ಪಾತ್ರಕ್ಕೆ ರವೀನಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಕೆಜಿಎಫ್ ಚಾಪ್ಟರ್ 2 ರಲ್ಲಿ ಇಂದಿರಾ ಗಾಂಧಿ ಪಾತ್ರ ಬರುವುದರಿಂದ ಚಿತ್ರಕ್ಕೆ ಒಂದು ದೊಡ್ಡ ಆಯಾಮ ಸಿಕ್ಕಂತಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಧ್ಯಯನ ತಂಡ ಹೇಗೆ ಇಂದಿರಾ ಗಾಂಧಿ ಅವರನ್ನು ಚಿತ್ರದ ಕತೆಯೊಳಗೆ ತರುತ್ತಾರೆ ಎಂಬುದು ಕುತೂಹಲದ ವಿಚಾರ.

ಜೂನ್ 6 ರಿಂದ ರಾಕಿಂಗ್ ಸ್ಟಾರ್ ಯಶ್​ ಮೈಸೂರಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ತೆಲುಗು ನಟ ರಮೇಶ್ ರಾವ್ ಸಹ ಈ ಚಿತ್ರದಲ್ಲಿದ್ದಾರೆ. ಇನ್ನು ಹಿಂದಿ ನಟ ಸಂಜಯ್ ದತ್ ಪಾತ್ರದ ಬಗ್ಗೆಯೂ ಕುತೂಹಲ ಬಯಲಾಗಿಲ್ಲ.

For All Latest Updates

TAGGED:

ABOUT THE AUTHOR

...view details