ಪಾಟ್ನಾ: 2020ರ ಜೂನ್ 14 ರಂದು ಇಹಲೋಕ ತ್ಯಜಿಸಿದ ಬಾಲಿವುಡ್ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ 36ನೇ ಹುಟ್ಟುಹಬ್ಬ ಇಂದು. ನೆಚ್ಚಿನ ನಟ ಅಗಲಿದ್ದರೂ ಕೂಡ ದೇಶದೆಲ್ಲೆಡೆ ಸುಶಾಂತ್ ಅಭಿಮಾನಿಗಳು ಅವರನ್ನು ನೆನೆದು ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ.
ಬಾಲಿವುಡ್ನ ಪ್ರತಿಭಾವಂತ ನಟರಲ್ಲಿ ಸುಶಾಂತ್ ಸಿಂಗ್ ಕೂಡ ಒಬ್ಬರು. ಜನವರಿ 21, 1986 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಜನಿಸಿದ ಸುಶಾಂತ್ ಸಿಂಗ್ ರಜಪೂತ್ ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಬಾಲಿವುಡ್‌ನಲ್ಲಿ ಮಿಂಚಿದರು.
ದೆಹಲಿಯಲ್ಲಿ ಇಂಜಿನಿಯರ್ ಓದುತ್ತಿರುವಾಗಲೇ ಸುಶಾಂತ್ ಮುಂಬೈನ ಬದಿರಾ ಬಬ್ಬಾರ್ ನಾಟಕ ಕ್ಷೇತ್ರಕ್ಕೆ ಸೇರಿಕೊಂಡರು. ನಂತರ ಅದೃಷ್ಟವೆಂಬಂತೆ ಏಕ್ತಾ ಕಪೂರ್ ನಿರ್ದೇಶನದ 'ಪವಿತ್ರ ರಿಷ್ತಾ' ಧಾರಾವಾಹಿ ಮೂಲಕ ಭಾರತದ ತುಂಬೆಲ್ಲಾ ಕಿರುತೆರೆಯ ನೆಚ್ಚಿನ ನಟರಾದರು.