ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಖ್ಯಾತ ಬಾಲಿವುಡ್ ನಟ ಹಾಗೂ ಮೂಲತಃ ತುಳು ನಾಡಿನವರಾದ ಸುನಿಲ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಿನ್ನೆ ಭೇಟಿ ನೀಡಿ ದೇವರ ದರ್ಶನ ಪಡೆದರು. ತಮ್ಮ ಸ್ನೇಹಿತರೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಅವರು ಪ್ರಸಿದ್ಧ ನಾಗ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಬಳಿಕ ಹೊಸಳಿಗಮ್ಮ ದೇವರ ದರ್ಶನ ಪಡೆದು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ - Bollywood actor Sunil Shetty visited subramanya temple
ತನ್ನ ಊರು ಉಡುಪಿಯ ಕಾಪು ಜಾತ್ರೆಗೆ ಆಗಮಿಸಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಿನ್ನೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ತನ್ನ ಊರು ಉಡುಪಿಯ ಕಾಪು ಜಾತ್ರೆಗೆ ಆಗಮಿಸಿದ್ದ ಅವರು ಸುಬ್ರಹ್ಮಣ್ಯ ದೇವರ ದರ್ಶನ ಪಡೆಯಲೆಂದು ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಮೂಲತಃ ಕರಾವಳಿಯವರಾದ ಸುನಿಲ್ ಶೆಟ್ಟಿ ಅವರು ಹಿಂದಿ ಚಿತ್ರರಂಗದಲ್ಲಿ ಖ್ಯಾತ ನಟರಾಗಿ ಗುರುತಿಸಿಕೊಂಡು ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಈ ವೇಳೆ ದೇವಸ್ಥಾನದ ಶಿಷ್ಟಾಚಾರ ವಿಭಾಗದ ಜಯರಾಮ ರಾವ್ ಉಪಸ್ಥಿತರಿದ್ದರು. ಟಾಲಿವುಡ್ನ ಬಹುನಿರೀಕ್ಷಿತ ಚಿತ್ರ ಆರ್ಆರ್ಆರ್ನಲ್ಲಿ ಸುನೀಲ್ ಶೆಟ್ಟಿ ಅಭಿನಯಿಸಿದ್ದಾರೆ. ಈ ಚಿತ್ರ ನಾಳೆ ದೇಶಾದ್ಯಂತೆ ಬಿಡುಗಡೆ ಆಗಲಿದೆ.
ಓದಿ:ಜೇಮ್ಸ್ಗೆ ಆರ್ಆರ್ಆರ್ ಕಂಟಕ; ಚಿತ್ರಮಂದಿರಗಳ ಸಮಸ್ಯೆಗೆ ಕೊನೆಗೂ ಇತಿಶ್ರೀ