ಕೆಜಿಎಫ್ ಚಾಪ್ಟರ್ 1 ರಲ್ಲಿ ಕಾಣಿಸಿಕೊಂಡ ಅಧೀರ ಪಾತ್ರಧಾರಿ ಯಾರು ಎಂಬುದು ಬಹಳ ಚರ್ಚೆ ಆಗಿತ್ತು. ಈಗ ಆ ಅಧೀರ ಬಾಲಿವುಡ್ ನಟ ಸಂಜಯ್ ದತ್ ಎಂದು ಹೇಳಲಾಗುತ್ತಿದೆ. ನಿನ್ನೆ ಈ ಪಾತ್ರದ ಒಂದು ಸುಳಿವು ನೀಡಿರುವ ಹೊಂಬಾಳೆ ಫಿಲ್ಮ್ಸ್ ಜುಲೈ 29 ರಂದು ಹೆಸರು ಬಹಿರಂಗ ಆಗುತ್ತದೆ ಎಂದು ಹೇಳಿತು. ಈಗ ಜುಲೈ 29 ರಂದು ಸಂಜಯ್ ದತ್ ಜನುಮ ದಿನ, ಆದ್ದರಿಂದ ಅಂದೇ ಅವರ ಕನ್ನಡ ಸಿನಿಮಾ ಎಂಟ್ರಿ ವಿಚಾರ ಬಹಿರಂಗ ಮಾಡಬೇಕು ಎಂದು ಪ್ರಶಾಂತ್ ನೀಲ್ ತಂಡ ತೀರ್ಮಾನಿಸಿದೆ.
ರಾಕಿ ಭಾಯ್ ಅಡ್ಡಾಕ್ಕೆ ಮುನ್ನಾ ಭಾಯ್ ಎಂಟ್ರಿ ಕನ್ಫರ್ಮ್ - undefined
ಹೊಂಬಾಳೆ ಫಿಲ್ಮ್ ಸಂಸ್ಥೆ ನಿರ್ಮಾಣದ ಕೆಜಿಎಫ್ ದೊಡ್ಡ ಯಶಸ್ಸು ಪಡೆಯಿತು. ಇದು ಭಾರತದಾದ್ಯಂತ ದಾಖಲೆ ಬರೆದ ಚಿತ್ರ. ಈಗ ಕೆಜಿಎಫ್ ಚಾಪ್ಟರ್ 2 ಸಿದ್ಧಗೊಳ್ಳುತ್ತಿದೆ.
ಮುನ್ನಾ ಭಾಯ್
ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಹಿಂದಿ ನಟಿ ರವೀನಾ ಟಂಡನ್ ಸಹ ಪಾತ್ರ ವರ್ಗದಲ್ಲಿದ್ದಾರೆ. ಈ ನಟಿ ಈಗಾಗಲೇ ಉಪೇಂದ್ರ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಹೆಜ್ಜೆ ಇಟ್ಟಿದ್ದಾರೆ. ಆದರೆ, ಕನ್ನಡಕ್ಕೆ ಸಂಜಯ್ ದತ್ ಆಗಮನ ಇದೆ ಮೊದಲಬಾರಿಗೆ. ಕೆಜಿಎಫ್ ಚಾಪ್ಟರ್ 2 ಇನ್ನೂ ಅನೇಕ ಮಜಲುಗಳನ್ನು ತನ್ನಲ್ಲಿ ಇಟ್ಟುಕೊಂಡಿರುವುದು ಕಾಲ ಕಾಲಕ್ಕೆ ಬಹಿರಂಗ ಆಗುತ್ತಾ ಹೋಗಲಿದೆಯಂತೆ.