ಕರ್ನಾಟಕ

karnataka

ETV Bharat / sitara

ಫಿಟ್​ ಆಗಿರಲು 'ಬ್ಲಾಕ್​ ವಾಟರ್​' ಕುಡಿಯುತ್ತಾಳಂತೆ ಬಾಲಿವುಡ್​ ಬ್ಯೂಟಿ ಮಲೈಕಾ.. ಆ ನೀರಿನ ಬೆಲೆ ಎಷ್ಟು?

ಬಾಲಿವುಡ್​ನ ಹಾಟ್​ ಬ್ಯೂಟಿ ಮಲೈಕಾ ಆರೋರಾ ಪ್ರತಿ ದಿನ ತಮ್ಮ ಆರೋಗ್ಯ ದೃಷ್ಟಿಯಿಂದ ಬ್ಲಾಕ್​ ವಾಟರ್​ ಸೇವನೆ ಮಾಡುತ್ತಾರಂತೆ.

bollywood actor malaika
bollywood actor malaika

By

Published : Aug 11, 2021, 9:19 PM IST

Updated : Aug 11, 2021, 9:31 PM IST

ಫಿಟ್​ ಆಗಿರುವ ಉದ್ದೇಶದಿಂದಲೇ ಬಾಲಿವುಡ್​ ನಟ-ನಟಿಯರು ಅನೇಕ ರೀತಿಯ ಡಯಟ್‌ ಮಾಡುತ್ತಾರೆ. ತಾವು ಸೇವಿಸುವ ಆಹಾರ, ನೀರಿನ ಬಗ್ಗೆ ಇನ್ನಿಲ್ಲದ ಜಾಗ್ರತೆ ವಹಿಸುತ್ತಾರೆ. ಇದರಿಂದಲೇ ಅವರು ಫಿಟ್​​ ಆ್ಯಂಡ್​​ ಫೈನ್​ ಆಗಿರುತ್ತಾರೆ. ಬಾಲಿವುಡ್​ನ ಬ್ಯೂಟಿ ಮಲೈಕಾ ಆರೋರಾ ಕೂಡ ಇದರಿಂದ ಹೊರತಾಗಿಲ್ಲ.

ಸಿನಿಮಾ ಚಿತ್ರೀಕರಣದ ವೇಳೆ ನಟಿ ಮಲೈಕಾ

ಪ್ರತಿ ದಿನ ಜಿಮ್​​ ಮಾಡುವುದು. ನಿಯಮಿತವಾಗಿ ಯೋಗ ಕ್ಲಾಸ್​, ಆರೋಗ್ಯಕರ ಆಹಾರ ಸೇವನೆ ಹೇಗೆ..? ಹೀಗೆ ಅನೇಕ ರೀತಿಯ ದಿನಚರಿ ರೂಢಿಸಿಕೊಂಡಿರುತ್ತಾರೆ. ಇದರ ಮಧ್ಯೆ ಕೆಲವರು ತಾವು ಸೇವಿಸುವ ನೀರಿನ ಬಗ್ಗೆ ಕೂಡ ಅತಿ ಹೆಚ್ಚು ಕಾಳಜಿ ವಹಿಸುತ್ತಾರೆ.

ಯೋಗದ ಸಂದರ್ಭದಲ್ಲಿ ಮಲೈಕಾ

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಸೇವನೆ ಮಾಡುವ ನೀರಿನ ಪ್ರತಿ ಲೀಟರ್ ಬೆಲೆ 600 ರೂಪಾಯಿ ಆಗಿದ್ದು, ರಷ್ಯಾದಿಂದ ಇದು ಆಮದು ಆಗುತ್ತದೆ. ಅದೇ ರೀತಿ ನಟಿ ಮಲೈಕಾ ಆರೋರಾ ಕೂಡ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಬ್ಲಾಕ್​​​ ವಾಟರ್​ ಸೇವನೆ ಮಾಡ್ತಿದ್ದಾರೆ. ಅದರ ಪ್ರತಿ ಲೀಟರ್​ ಬೆಲೆ 200 ರೂ. ಆಗಿದೆ.

ಬಾಲಿವುಡ್​ ಬೆಡಗಿ ಮಲೈಕಾ

ಇಂದು ಬೆಳಗ್ಗೆ ಮನೆಯಿಂದ ಹೊರಗಡೆ ಬಂದಾಗ ಅವರ ಕೈಯಲ್ಲಿ ಬ್ಲಾಕ್​ ವಾಟರ್​ ಬಾಟಲಿ ಇತ್ತು. ಈ ವೇಳೆ ಪತ್ರಕರ್ತನೋರ್ವ ಪ್ರಶ್ನೆ ಮಾಡಿದಾಗ ತಾವು ಬ್ಲಾಕ್​ ವಾಟರ್​ ಸೇವನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಬ್ಲಾಕ್ ವಾಟರ್​​ನಲ್ಲಿ ಶೇ. 70ಕ್ಕಿಂತಲೂ ಅಧಿಕ ಮಿನರಲ್ಸ್​ ಇವೆ. ಬಿ-ಟೌನ್​ ಬೆಡಗಿ ಮಲೈಕಾ ಹಾಗೂ ಅರ್ಜುನ್​ ಕಪೂರ್​ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಚರ್ಚೆಯಲ್ಲಿರುವ ವಿಷಯವಾಗಿದೆ.

ಅರ್ಜುನ್​ ಕಪೂರ್​ ಜೊತೆ ಮಲೈಕಾ

ಇದನ್ನೂ ಓದಿರಿ: ಒಬ್ಬನನ್ನ ಪ್ರೀತಿಸಿ ಮತ್ತೊಬ್ಬನೊಂದಿಗೆ ಮದುವೆ.. ಯುವತಿ ಕೊಲೆ ಮಾಡಿದ ಲವರ್​!

Last Updated : Aug 11, 2021, 9:31 PM IST

ABOUT THE AUTHOR

...view details