ಮುಂಬೈ:ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಆರ್ಭಟ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಇದೀಗ ಬಾಲಿವುಡ್ ಮಂದಿಗೆ ಬಿಟ್ಟು ಬಿಡುದಂತೆ ಕಾಡಲು ಶುರುಗೊಂಡಿದೆ. ಕಳೆದ ಕೆಲ ದಿನಗಳ ಹಿಂದೆ ಕರೀನಾ ಕಪೂರ್ ಸೋಂಕಿಗೊಳಗಾಗಿದ್ದರು. ಇದರ ಬೆನ್ನಲ್ಲೇ ಇದೀಗ ಬಾಲಿವುಡ್ ನಟ ಅರ್ಜುನ್ ಕಪೂರ್ಗೂ ಸೋಂಕು ದೃಢಗೊಂಡಿದೆ.
ಕ್ರಿಸ್ಮಸ್ ಸಂಭ್ರಮದಲ್ಲಿ ಬಾಲಿವುಡ್ನ ಅನೇಕರು ಕೊರೊನಾ ಮಾರ್ಗಸೂಚಿ ಗಾಳಿಗೆ ತೋರಿರುವ ಪರಿಣಾಮ ಇದೀಗ ಸೋಂಕಿಗೊಳಗಾಗುತ್ತಿದ್ದು, ಅರ್ಜುನ್ ಕಪೂರ್, ರಿಯಾ ಕಪೂರ್, ಕರಣ್ ಬೊಲಾನಿ, ಅನ್ಶುಲಾಗೆ ಸೋಂಕು ದೃಢಗೊಂಡಿದೆ. ಇವರೆಲ್ಲರೂ ಮುನ್ನೆಚ್ಚರಿಕೆಯಾಗಿ ಈಗಾಗಲೇ ಕ್ವಾರಂಟೈನ್ಗೊಳಗಾಗಿದ್ದಾಗಿ ತಿಳಿದು ಬಂದಿದೆ.