ಸೆಟ್ಟೇರಿತು 'ವೇರ್ ಈಸ್ ಮೈ ಕನ್ನಡಕ'...ಗಣಿ ಚಿತ್ರದಲ್ಲಿ ಬಾಲಿವುಡ್ ನಟ - news kannada
ಗೋಲ್ಡನ್ ಸ್ಟಾರ್ ಗಣೇಶ್ ಅವರ 'ವೇರ್ ಈಸ್ ಮೈ ಕನ್ನಡಕ' ಟೈಟಲ್ನ ಹೊಸ ಚಿತ್ರಕ್ಕೆ ಬೆಂಗಳೂರಿನ ಪಂಚಮುಖಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಹಿಂದಿ ಸಿನಿಮಾ ಹಾಗೂ ಕಿರು ತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ರಾಜ್ ಹಾಗೂ ಧಾಮಿನಿ ಈ ಚಿತ್ರದ ನಿರ್ದೇಶಕರು.
ಈ ಚಿತ್ರದಲ್ಲಿ ಗಣಿ ಜತೆ ನಟಿ ಪತ್ರಲೇಖ ಹಾಗೂ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಟಿಸುತ್ತಿದ್ದಾರೆ. ಬರುವ ಏಪ್ರಿಲ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ ಸಿನಿಮಾ ಮಾರುಕಟ್ಟೆ ವಿಸ್ತಾರವಾಗಿರುವುದಕ್ಕೆ ಸಂತಸಗೊಂಡಿರುವ ನಿರ್ದೇಶಕ ಜೋಡಿ ರಾಜ್ ಹಾಗೂ ಧಾಮಿನಿ ಅವರು ಈ ಚಿತ್ರದಲ್ಲಿ ಕನ್ನಡ ಹಿಂದಿ ಕಲಾವಿದರ ಸಂಗಮವಾಗುತ್ತಿದೆ ಎನ್ನುತ್ತಾರೆ. ತಮ್ಮ ಚೊಚ್ಚಲ ಕನ್ನಡ ಚಿತ್ರಕ್ಕೆ ವಿಭಿನ್ನ ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಿಕೊಂಡಿರುವ ನಿರ್ದೇಶಕರು, ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಲಂಡನ್ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಚಿತ್ರದ ಉಳಿದ ಕಲಾವಿದ ಹಾಗೂ ತಂತ್ರಜ್ಞರ ಆಯ್ಕೆ ಪ್ರಗತಿಯಲ್ಲಿದೆ.