ಕರ್ನಾಟಕ

karnataka

ETV Bharat / sitara

ಪುನೀತ್ ರಾಜಕುಮಾರ್ ಕಂಠಸಿರಿಯಲ್ಲಿ ಮೂಡಿ ಬಂದಿರುವ 'ಬಾಡಿ ಗಾರ್ಡ್​' ಹಾಡು.. - bodyguard kannada cinema

ಪುನೀತ್ ರಾಜ್ ಕುಮಾರ್ ಅವರು ಹಾಡಿರುವ 'ಬಾಡಿ ಗಾರ್ಡ್​' ಸಿನೆಮಾದ ಆರೇಸ ಡಂಕನಕ ಹಾಡು ಇದೀಗ ಬಿಡುಗಡೆಗೊಂಡಿದೆ. ಈ ಹಿಂದೆ ಹಲವು ಹಾಡುಗಳನ್ನು ಹಾಡಿದ್ದ ಅಪ್ಪು ಅಪಾರ ಜನಪ್ರಿಯತೆ ಗಳಿಸಿದ್ದರು.

bodyguard movie song sung by punith rajkumar
bodyguard movie ಪುನೀತ್ ರಾಜಕುಮಾರ್ ಕಂಠಸಿರಿಯಲ್ಲಿ ಮೂಡಿಬಂದಿರುವ 'ಬಾಡಿ ಗಾರ್ಡ್​' ಹಾಡು.. song sung by punith rajkumar

By

Published : Feb 14, 2022, 4:03 PM IST

ಬೆಂಗಳೂರು:ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಾಡಿರುವ 'ಬಾಡಿ ಗಾರ್ಡ್​' ಸಿನೆಮಾದ ಆರೇಸ ಡಂಕನಕ ಹಾಡು ಇದೀಗ ಬಿಡುಗಡೆಗೊಂಡಿದೆ. ಈ ಹಿಂದೆ ಹಲವು ಹಾಡುಗಳನ್ನು ಹಾಡಿದ್ದ ಅಪ್ಪು ಅಪಾರ ಜನಪ್ರಿಯತೆ ಗಳಿಸಿದ್ದರು.

ನಿರ್ದೇಶಕ ಗುರುಪ್ರಸಾದ್ ಚಿತ್ರ ತಂಡವನ್ನು ಮುನ್ನೆಡಿಸಿದ್ದು, ಈ ಹಿಂದೆ ಮೊಗ್ಗಿನ ಮನಸ್ಸು ಮತ್ತು ಓ ಪ್ರೇಮವೇ ಚಿತ್ರದಲ್ಲಿ ನಟಿಸಿದ್ದ ಮನೋಜ್ ಈಗ ಬಾಡಿಗಾರ್ಡ್​ ಆಗಿ ನಟಿಸಿದ್ದಾರೆ.

ತಮ್ಮ ಸಂಭಾಷಣೆಯ ಮೂಲಕ ಮನಮುಟ್ಟುತ್ತಿದ್ದ ಗುರುಪ್ರಸಾದ್ ಈಗ ನಟನೆಯಲ್ಲು ನಮ್ಮ ಮನಮುಟ್ಟಲಿದ್ದಾರೆ. ಜೀವ, ಪಾರಿಜಾತ, ಗಣಪ, ಕರಿಯ 2 ಚಿತ್ರದ ನಿರ್ದೇಶಕರಾದ ಪ್ರಭು ಶ್ರೀನಿವಾಸ್ ಈ ಸಿನೆಮಾದ ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ.

ಬಾಡಿಗಾರ್ಡ್​ ಸಿನೆಮಾ ಪ್ರಭು ಶ್ರೀನಿವಾಸ್ ನಿರ್ದೇಶನದ ಐದನೇ ಚಿತ್ರವಾಗಿದ್ದು, ಇದೊಂದು ಬ್ಲಾಕ್ ಹ್ಯೂಮರ್ ವಿತ್ ಥ್ರಿಲ್ಲರ್ ಕಥೆಯಾಗಿದೆ. ಕಥೆಯೇ ಈ ಚಿತ್ರದ ಹೀರೋ ಎನ್ನುತ್ತಾರೆ ನಿರ್ದೇಶಕರು.

ಸತ್ತಮೇಲೂ ಮಾತನಾಡುವ ಗುರುಪ್ರಸಾದ್ ಪಾತ್ರ, ಗುರುಪ್ರಸಾದ್ ಅವರನ್ನು ನೋಡಿಕೊಳ್ಳಲೂ ಬಂದ ಮನೋಜ್​​​ಗೆ ಹಣದ ಸಮಸ್ಯೆ ಇದ್ದು, ಸುಳ್ಳುಗಳಿಂದ ಬದುಕು ಸಮಸ್ಯೆಗಳ ಸಾಗರವಾಗುವುದು ಎಂದಿದ್ದಾರೆ. ಪದ್ಮಜರಾವ್ ಮುಖ್ಯಪಾತ್ರ ಒಂದನ್ನು ನಿಭಾಯಿಸಿದ್ದು, ಮೊದಲ ಭಾರಿಗೆ ದೀಪಿಕಾ ಆರಾಧ್ಯ ಎಂಬ ನವನಟಿ ಇಲ್ಲಿ ನಟಿಸಿದ್ದಾರೆ.

ಗಣಪ ಚಿತ್ರದ ಪ್ರಸಿದ್ದ ಪಡೆದ ಹಾಡು “ಮುದ್ದಾಗಿ ನೀನು ನನ್ನ ಕೂಗಿದೇ” ಮತ್ತು ಕರಿಯ 2 ಚಿತ್ರದ “ಅನುಮಾನವೇ ಇಲ್ಲ ಅನುರಾಗಿ ನಾನೀಗ” ಮತ್ತು ಇನ್ನಿತರ ಹಿಟ್ ಹಾಡುಗಳ ಸಂಯೋಜಕ ಕರಣ್ ಬಿ ಕೃಪಾ ರವರ ಸಂಗೀತ ಈ ಚಿತ್ರಕ್ಕಿದೆ.

ಇದನ್ನು ಓದಿ:ಕಾಲೇಜು ದಿನಗಳ 'ಮೋಡದ ಮೇಲಿನ ಮಹಾರಾಜ'ನ ಬ್ಯಾನರ್​​ ಜಾಹೀರಾತು ನೆನಪಿಸಿಕೊಂಡ ಬಿಗ್‌ಬಿ

ABOUT THE AUTHOR

...view details