ಕರ್ನಾಟಕ

karnataka

ETV Bharat / sitara

32ನೇ ವಸಂತಕ್ಕೆ ಕಾಲಿಟ್ಟ ನಟಿ ಸಂಜನಾ ಗಲ್ರಾನಿ: ಉಚಿತ ರಕ್ತದಾನ ಶಿಬಿರ ಆಯೋಜನೆ - Sanjana Galrani foundation

ಇಂದು ನಟಿ ಸಂಜನಾ ಗಲ್ರಾನಿ ಹುಟ್ಟುಹಬ್ಬ. 32ನೇ ವಸಂತಕ್ಕೆ ಕಾಲಿಟ್ಟ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಹೆಚ್‌ಎಎಲ್‌ನಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದರು.

ಸಂಜನಾ ಗಲ್ರಾನಿ
ಸಂಜನಾ ಗಲ್ರಾನಿ

By

Published : Oct 10, 2021, 7:14 AM IST

ಕನ್ನಡ ಹಾಗು ತೆಲುಗು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಹೆಸರು ಗಳಿಸಿರುವ ನಟಿ ಸಂಜನಾ ಗಲ್ರಾನಿ, ಡ್ರಗ್ಸ್ ಪ್ರಕರಣದಿಂದ ಹೊರಬಂದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದ ಸಂಜನಾ, ಇದೀಗ ಸಂಜನಾ ಫೌಂಡೇಶನ್ ವತಿಯಿಂದ ನಾರಾಯಣ ಹೃದಯಾಲಯದ ಹೆಚ್ಎಎಲ್ ಬಳಿ ಕೊರೊನಾ ವ್ಯಾಕ್ಸಿನೇಷನ್‌ ಹಾಗೂ ರಕ್ತದಾನ ಶಿಬಿರ ಆಯೋಜಿಸಿದ್ದಾರೆ. ಈ ಶಿಬಿರದಲ್ಲಿ ಸಾಕಷ್ಟು ನಾಗರಿಕರು ಹಾಗೂ ಯುವಕರು ಸ್ವಇಚ್ಛೆಯಿಂದ ರಕ್ತದಾನ ಮಾಡಿದರು.

ಸಂಜನಾ ಗಲ್ರಾನಿ ಫೌಂಡೇಶನ್ ವತಿಯಿಂದ ಉಚಿತ ರಕ್ತದಾನ ಶಿಬಿರ

ಈ ಸಂದರ್ಭದಲ್ಲಿ ಮಾತನಾಡಿದ ಸಂಜನಾ ಗಲ್ರಾನಿ, 'ಒಂದು ಅಥವಾ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ. ನಮ್ಮಿಂದ ಬೇರೆಯವರಿಗೆ ಉಪಯೋಗವಾಗಲಿ' ಎಂದರು.

ಇತ್ತೀಚೆಗೆ ನವರಾತ್ರಿ ಹಬ್ಬದ ಅಂಗವಾಗಿ ದೇವಿ ಅವತಾರದಲ್ಲಿ ಫೋಟೋಶೂಟ್ ಮಾಡಿಸಿ ನಟಿ ಗಮನ ಸೆಳೆದಿದ್ದರು. ಸದ್ಯಕ್ಕೆ ಸಿನಿಮಾಗಳಿಂದ ದೂರವಿದ್ದು ಸಮಾಜಮುಖಿ ಕೆಲಸಗಳಲ್ಲಿ ನಿರತರಾಗಿದ್ದಾರೆ.

ABOUT THE AUTHOR

...view details